ಬೆಂಗಳೂರು: ನಮ್ಮ ಮೆಟ್ರೋ ಯೋಜನೆಗೆ ಜಗಜ್ಯೋತಿ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕೆಂದು ಲಿಂಗಾಯತ ಮಠಾಧೀಶರು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೈಲ ಹೊಂಗಲದ ಕಾದ್ರೋಳಿ ಅದೃಶ್ಯಾನಂದ ಸೀಮೀ ಮಠದ ಪಾಲಾಕ್ಷ ಶಿವಯೋಗಿ, ಸುಳ್ಳ ಗ್ರಾಮದ ಸಿದ್ದಾರೂಢ ಮಠದ ರಮಾನಂದ ಶಾಸ್ತ್ರಿಗಳು ಮತ್ತು ಸವದತ್ತಿ ಕರಿಕತ್ತಿಯ ಗುರುನಾಥ ಶಾಸ್ತ್ರಿಗಳು ಆಗ್ರಹಿಸಿದ್ದಾರೆ.
ಬಸವಣ್ಣ ಮಹಾ ಮಾನವತಾ ವಾದಿ, ಕಾಯಕಯೋಗಿ, ಶರಣ ಚಳುವಳಿಯ ಹರಿಕಾರ, ಅಸ್ಪೃಶ್ಯತೆಯ ನಿವಾರಕ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸರ್ವಧರ್ಮೀಯರಲ್ಲಿ ಸಮಾನತೆಯನ್ನು ಪ್ರತಿಪದಿಸಿದ ವಿಶ್ವ ಮಾನವ. ಹಾಗಾಗಿ ನಮ್ಮ ಮೆಟ್ರೋ ಯೋಜನೆಗೆ ಬಸವೇಶ್ವರರ ಹೆಸರಿಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Advertisement