ಒಂದೇ ವೇದಿಕೆಯಲ್ಲಿ 70 ವೀಣೆಗಳ ಸಮ್ಮಿಲನ

ಒಂದೇ ವೇದಿಕೆಯಲ್ಲಿ ಹಾರ್ಮೋನಿಯಂ, ನೃತ್ಯ, ತಬಲ ಹೀಗೆ ಹಲವಾರು ವಾದ್ಯಗಳಿರುವ ಕಾರ್ಯಕ್ರಮಗಳನ್ನು ನೋಡಿರುತ್ತೇವೆ. ಆದರೆ ಒಂದೇ ವೇದಿಕೆಯಲ್ಲಿ 70 ವೀಣೆಗಳನ್ನು ಕಲಾವಿದರು ನುಡಿಸುವ ಕಾರ್ಯಕ್ರಮ ಆಸ್ವಾದಿಸಲು ಸಾಧ್ಯವೇ?...
ಆರ್ಟ್ ಆಫ್ ಲಿವಿಂಗ್‍ನ ಒಂದೇ ವೇದಿಕೆಯಲ್ಲಿ 70 ವೀಣೆಗಳ ಮಿಲನದ ದೃಶ್ಯ.
ಆರ್ಟ್ ಆಫ್ ಲಿವಿಂಗ್‍ನ ಒಂದೇ ವೇದಿಕೆಯಲ್ಲಿ 70 ವೀಣೆಗಳ ಮಿಲನದ ದೃಶ್ಯ.
Updated on

ಬೆಂಗಳೂರು: ಒಂದೇ ವೇದಿಕೆಯಲ್ಲಿ ಹಾರ್ಮೋನಿಯಂ, ನೃತ್ಯ, ತಬಲ ಹೀಗೆ ಹಲವಾರು ವಾದ್ಯಗಳಿರುವ ಕಾರ್ಯಕ್ರಮಗಳನ್ನು ನೋಡಿರುತ್ತೇವೆ. ಆದರೆ ಒಂದೇ ವೇದಿಕೆಯಲ್ಲಿ 70 ವೀಣೆಗಳನ್ನು ಕಲಾವಿದರು ನುಡಿಸುವ ಕಾರ್ಯಕ್ರಮ ಆಸ್ವಾದಿಸಲು ಸಾಧ್ಯವೇ?

ಇಂಥದೊಂದು ವಿಶಿಷ್ಟ ಸ್ವರ ಸಮ್ಮಿಲನ ಕಾರ್ಯಕ್ರಮ ನಗರದ ಕನಕಪುರದ ಆರ್ಟ್ ಆಫ್ ಲಿವಿಂಗ್‍ನ ಆಶ್ರಮದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಮೊದಲ ಬಾರಿಗೆ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದೇವೆ.

ಲಯ ಮತ್ತು ಸಂಗೀತವೆನ್ನುವುದು ವ್ಯಕ್ತಿ. ವ್ಯಕ್ತಿಯ ನಡುವಿನ ಸಂಬಂಧವಿದ್ದಂತೆ. ಸಮಷ್ಟಿಯಾಗಿರುವ ಲಯ ಮತ್ತು ಸಾಮರಸ್ಯಗಳು ವ್ಯಕ್ತಿ ಕಡೆಗೆ ಹರಿಯುವ ಪ್ರವಾಹವೇ ಸಂಗೀತ. ಆಧ್ಯಾತ್ಮಿಕತೆ ಮತ್ತು ಸಂಗೀತವೆನ್ನುವುದು ಮನುಷ್ಯನೊಳಗಿರುವ ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ನಾದ ತರಂಗದ ಡಾ.ಸುಪರ್ಣಾ ರವಿಶಂಕರ್ ಮಾತನಾಡಿ, 2008ರಲ್ಲಿ ಆರ್ಟ್ ಆಫ್ ಲಿವಿಂಗ್ ನಡೆಸಿದ 1094 ಸಿತಾರ್ ವಾದಕರನ್ನು ಒಳಗೊಂಡ ಬ್ರಹ್ಮನಾದ ಇದೀಗ ವೀಣಾ ನಾದವನ್ನು ಹೊಮ್ಮಿಸಲು ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com