ಕಾಪ್ಟರ್ ಘಟಕ ಎತ್ತಂಗಡಿ ಇಲ್ಲ: ಪರ್ರಿಕ್ಕರ್

ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಎರಡನೇ ಘಟಕ ಕರ್ನಾಟಕದಲ್ಲಿಯೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್..
ಮನೋಹರ್ ಪರಿಕ್ಕರ್ ಮತ್ತು ಟಿ, ಸುವರ್ಣ ರಾಜು
ಮನೋಹರ್ ಪರಿಕ್ಕರ್ ಮತ್ತು ಟಿ, ಸುವರ್ಣ ರಾಜು
Updated on

ಬೆಂಗಳೂರು: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಎರಡನೇ ಘಟಕ ಕರ್ನಾಟಕದಲ್ಲಿಯೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಎಚ್‍ಎಎಲ್‍ನ ಎರೋ ಎಂಜಿನ್ ಸಂಶೋಧನಾ ಮತ್ತು ವಿನ್ಯಾಸ ಕೇಂದ್ರದಲ್ಲಿ ನೂತನ ದೇಶಿ ನಿರ್ಮಿತ 25ಕೆಎನ್ ಓರೋ ಎಂಜಿನ್‍ಗೆ ಪ್ರಾಯೋಗಿಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್‍ಎಎಲ್ ಹೆಲಿಕ್ಯಾಪ್ಟರ್ ಎರಡನೇ ಘಟಕವು ಗೋವಾಕ್ಕೆ ವರ್ಗವಾಗುತ್ತದೆ ಎಂಬ ಸುದ್ದಿ ಸುಳ್ಳು. ಈ ಘಟಕ ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿ ತುಮಕೂರು ಸಮೀಪ ಸ್ಥಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ನೂತನ ಹೆಲಿಕಾಪ್ಟರ್ ಘಟಕಕ್ಕೆ ಶಂಕುಸ್ಥಾಪನೆ ನಡೆಸಲಿದ್ದಾರೆ. ಘಟಕ ಎತ್ತಂಗಡಿಯಾಗುತ್ತದೆ ಎಂಬ ಅನುಮಾನ ಇನ್ನು ಬೇಡ ಎಂದರು. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ವಾಯುಯಾನ ಕ್ಷೇತ್ರದ ತಂತ್ರಜ್ಞಾನ  ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತವು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಇದರಲ್ಲಿ ಬೆಂಗಳೂರು ಕೇಂದ್ರ ಸ್ಥಾನವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ಲೇಷಿಸಿದರು.

ಇತ್ತೀಚಿನ ದಿನಗಳಲ್ಲಿ ವಾಯುಯಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೇ ಎರಡು ಪಟ್ಟು ರಕ್ಷಣಾ ಉತ್ಪನ್ನಗಳು ರಪ್ತಾಗಿದೆ. ಕಡಿಮೆ ವೆಚ್ಚದಲ್ಲಿ ರಕ್ಷಣಾ ಉತ್ಪನ್ನಗಳು ನಮ್ಮಲ್ಲಿ ಸಿದ್ಧಪಡಿಸಲು ಸಾಧ್ಯವಾಗುತ್ತಿದ್ದು ಜಗತ್ತಿನ ಅನೇಕ ರಾಷ್ಟ್ರಗಳು ನಮ್ಮತ್ತ ಎಚ್ಚರಿಕೆಯ ಕಣ್ಣಿಟ್ಟಿವೆ ಎಂದರು.  

ಇತ್ತೀಚಿನ ಕ್ಷೇತ್ರಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಚಟುವಟಿಕೆ ನಡೆಯುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ 4 ಸಾವಿರದಿಂದ 6 ಸಾವಿರದಷ್ಟು ಹೆಲಿಕಾಪ್ಟರ್ ಎಂಜಿನ್ ಅಗತ್ಯ ಬೀಳಬಹುದು. ಕಾರ್ಯಕ್ರಮದಲ್ಲಿ ಎಚ್‍ಎಎಲ್ ವ್ಯವಸ್ಥಾಪಕ ನಿರ್ದೇಶಕ ಸುವರ್ಣರಾಜು, ಡಿ.ಕೆ.ವೆಂಕಟೇಶ್ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೊಸ ಪ್ರಯತ್ನಕ್ಕೆ ಮುನ್ನುಡಿ: ಇದೇ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಅವರು ಎಚ್‍ಎಎಲ್‍ನ ಹೊಸ  ಯೋಜನೆಗೂ  ಮುನ್ನುಡಿ ಬರೆದರು. 3.5 ಟನ್ ವರ್ಗದ ಹೆಲಿಕಾಪ್ಟರ್‍ನಲ್ಲಿ ಬಳಸುವ ಹಾಗೂ ಎರಡು ಎಂಜಿನ್ ಸಂರಚನೆಯ 5ರಿಂದ 8 ಟನ್ ವರ್ಗದ ಹೆಲಿಕಾಪ್ಟರ್‍ನಲ್ಲೂ ಬಳಸಬಹುದಾದ ಎಂಜಿನ್ ತಯಾರಿಕೆ ಯೋಜನೆಗೆ ಎಚ್‍ಎಎಲ್ ಮುಂದಾಗಿದ್ದು, ಇದನ್ನು ಪ್ರಮುಖವಾಗಿ ಲಘು ಯುದ್ಧ ಹೆಲಿಕ್ಯಾಪ್ಟರ್, ಅತ್ಯಾಧುನಿಕ ಹಗುರ ಹೆಲಿಕ್ಯಾಪ್ಟರ್‍ನಲ್ಲಿ ಬಳಸಬ-ಹುದು. 7 ಕಿಲೋಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಈ ಎಂಜಿನ್ ನೀಡಲಿದ್ದು, ಸಂಪೂರ್ಣವಾಗಿ ತನ್ನ ಆಂತರಿಕ ಸಂಪನ್ಮೂಲ ತಂತ್ರಜ್ಞಾನ ವಿನ್ಯಾಸವನ್ನು ಬಳಸಿ ಈ ಇಂಜಿನ್ ಸಿದ್ಧಡಿಸುವುದು ಎಚ್‍ಎಲ್‍ನ ಗುರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com