ಪರಮೇಶ್ವರ್ -ಮಾರುತಿ ಮಾನ್ಪಡೆ ಮಾತಿನ ಚಕಮಕಿ

ಬಡ ಮಹಿಳೆ ಕೊಲೆ ಶಂಕೆ ಬಗ್ಗೆ ಅಹವಾಲು ಸಲ್ಲಿಸಲು ಕಲಬುರ್ಗಿಯಿಂದ ಬಂದಿದ್ದ ರೈತ ನಾಯಕರನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬುಧವಾರ ,,,
ಜಿ. ಪರಮೇಶ್ವರ್
ಜಿ. ಪರಮೇಶ್ವರ್
Updated on

ಬೆಂಗಳೂರು: ಬಡ ಮಹಿಳೆ ಕೊಲೆ ಶಂಕೆ ಬಗ್ಗೆ ಅಹವಾಲು ಸಲ್ಲಿಸಲು ಕಲಬುರ್ಗಿಯಿಂದ ಬಂದಿದ್ದ ರೈತ ನಾಯಕರನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬುಧವಾರ ಗಂಟೆಗಟ್ಟಲೇ ಕಾಯಿಸಿ ರೇಜಿಗೆ ಮೂಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರೈತ ನಾಯಕ ಮಾರುತಿ ಮಾನ್ಪಡೆ ಮತ್ತು ಪರಮೇಶ್ವರ್ ನಡುವೆ ಮಾತಿನ ಚಕಮಕಿಯೂ ಸಂಭವಿಸಿದೆ.

ಗೃಹ ಸಚಿವರ ಈ ನಡೆ ರೈತರ ಸಂಘದ ನಾಯಕ ಮಾರುತಿ ಮಾನ್ಪಡೆ ಮತ್ತು ರೈತರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅದರಲ್ಲೂ ಗೃಹ ಸಚಿವರು ಅಹವಾಲು ಸಲ್ಲಿಸಲು ಹೋದವರನ್ನು ಕಾಂಗ್ರೆಸ್ ಕಚೇರಿಗೆ ಬರಹೇಳಿದ್ದು, ರೈತರನ್ನು ಕೆರಳುವಂತೆ ಮಾಡಿದೆ. ಇರಿಂದ ಗದ್ದಲ ಉಂಟಾಗಿತ್ತು. ಅಂತಿಮವಾಗಿ ಮಾರುತಿ ಮಾನ್ಪಡೆ ಸಚಿವರಿಗೆ ಘೇರಾವ್ ಹಾಕುವುದಾಗಿ ಹೇಳಿದ ಮೇಲೆ ಸಚಿವ ಪರಮೇಶ್ವರ್ ಅನ್ಯ ದಾರಿ ಇಲ್ಲದೆ ಅಹವಾಲು ಕೇಳಿದರು.

ಏನಿದು ಗಲಾಟೆ?: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಒಡಲು ಗ್ರಾಮದ ರೈತ ಮಹಿಳೆ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನು ಆತ್ಮಹತ್ಯೆ ಎಂದು ಕೇಸು ದಾಖಲಿಸಲಾಗಿತ್ತು. ಆದರೆ ಮಹಿಳೆಯ ಪೊಷಕರು ಕೊಲೆ ಎಂದು ಶಂಕಿಸಿದ್ದರು. ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಬಳಿ ಅಹವಾಲು ಸಲ್ಲಿಸಲು ರೈತ ನಾಯಕ ಮಾರುತಿ ಮಾನ್ಪಡೆ ಸಚಿವರ ಮನೆಯಲ್ಲಿ ವಿಚಾರಿಸಿದ್ದರು. ಆದರೆ ಸಚಿವರು ಕಚೇರಿಯಲ್ಲಿ ಸಿಗುತ್ತಾರೆ ಹೋಗಿ ಎಂಬ ಉತ್ತರ ಸಿಕ್ಕಿತ್ತು. ಅದರಂತೆ ಮಾನ್ಪಡೆ ಮತ್ತು ನೊಂದ ರೈತ ಕುಟುಂಬದವರು ಬೆಳಗ್ಗೆ 11ಗಂಟೆವರೆಗೂ ವಿಕಾಸಸೌಧದ ಸಚಿವರ ಕಚೇರಿಗೆ ಬಂದು ಕಾದು ಕುಳಿದತು. ಮಧ್ಯಾಹ್ನವಾದರೂ ಸಚಿವರು ಮಾನ್ಪಡೆ ಅವರನ್ನು ಕರೆಯಲಿಲ್ಲ. ಕೊನೆಗೆ ಸಚಿವರು ಕಚೇರಿಯಿಂದ ಹೊರ ಹೋಗುತ್ತಿದ್ದಾಗ ಮಾನ್ಪಡೆ ಅವರು ಆಕ್ಷೇಪಿಸಿದರು. ತಮ್ಮ ಅಹವಾಲು ಕೇಳಿ ಎಂದು ವಿನಂತಿಸಿದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಪರಮೇಶ್ವರ್ ಈಗ ಸಮಯವಿಲ್ಲರೀ. ಈಗ ಕೇಳುವುದಕ್ಕೆ ಆಗುವುದಿಲ್ಲ,'' ಎಂದರು.
ಇದರಿಂದ ಬೇಸರಗೊಂಡ ಮಾನ್ಪಡೆ ಅವರು, ``ನಾವು ಕಲಬುರ್ಗಿಯಿಂದ 600ಕಿ.ಮೀ. ಪ್ರಯಾಣ ಮಾಡಿ ಬಂದು ಕಾಯುತ್ತಿದ್ದೇವೆ. ಇದು ವೈಯಕ್ತಿಕವಲ್ಲ. ಕೇವಲ 2 ನಿಮಿಷ ನಮ್ಮ ಸಮಸ್ಯೆ ಕೇಳಿ ಸರ್ ಎಂದು ಮಾನ್ಪಡೆ ವಿನಂತಿಸಿದರು. ಆಗ ಪರಮೇಶ್ವರ್, ``ನನಗೆ
ಸಮಯ ಇಲ್ಲ. ಬೇಕಿದ್ದರೆ ಕೆಪಿಸಿಸಿ ಕಚೇರಿಗೆ ಬನ್ರಿ,'' ಎಂದರು. ಇದರಿಂದ ಸಿಟ್ಟಿಗೆದ್ದ ಮಾನ್ಪಡೆ. ನೀವು ಗೃಹ ಸಚಿವರು ಅದಕ್ಕೆ ಇಲ್ಲಿ ಬಂದಿದ್ದೇವೆ. ಬೇಕಿದ್ದರೆ ನಿಮ್ಮ ಮನೆಗೇ ಬಂದು ಕಾಯುತ್ತೇವೆ,'' ಎಂದು ಹೇಳಿದರು. ಅಷ್ಟೊತ್ತಿಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗದ್ದಲ ಉಂಟಾಗಿತ್ತು. ಅಂತಿಮವಾಗಿ ಅಲ್ಲಿದ್ದವರು ಸಮಾಧಾನಕ್ಕೆ ಯತ್ನಿಸಿದ ಸಚಿವರು ಅಹವಾಲು ಸ್ವೀಕರಿಸುವಂತೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com