ಟೆಂಡರ್‍ ಶ್ಯೂರ್ ಕಾಮಗಾರಿಗಳಲ್ಲಿ ಕೋಟಿ ಕೋಟಿ ಲೂಟಿ

ನಗರದ ರಸ್ತೆಗಳ ಅಭಿವೃದ್ಧಿಗಾಗಿ ನಡೆದಿರುವ ಟೆಂಡರ್ ಶ್ಯೂರ್ ಕಾಮಗಾರಿಗಳ ಬಗ್ಗೆ ಮತ್ತೆ ಅಪಸ್ಪರ ಕೇಳಿಬಂದಿದೆ. ಈ ಟೆಂಡರ್‍ನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ಜನಸಾಮಾನ್ಯರ ಕಲ್ಪನೆಯಂತೆ ಕಾಮಗಾರಿ ನಡೆಯುತ್ತಿಲ್ಲ...
ಫಾರ್ಮ್ ಅರ್ಬನ್ ಗೌವರ್ನೆನ್ಸ್ ಆ್ಯಂಡ್ ಕಾಮನ್ಸ್' ಆಯೋಜಿಸಿದ್ದ ಟೆಂಡರ್ ಶ್ಯೂರ್ ಸಂವಾದದಲ್ಲಿ ಸಾಮಾಜಿಕ ಹೋರಾಟಗಾರ್ತಿ ನಂದನಾರೆಡ್ಡಿ ಹಾಗೂ ಬೆಂಗಳೂರು ವಿವಿ ಪ್ರಾಧ್ಯಾಪಕ ಜೀವನ್ ಕುಮಾ
ಫಾರ್ಮ್ ಅರ್ಬನ್ ಗೌವರ್ನೆನ್ಸ್ ಆ್ಯಂಡ್ ಕಾಮನ್ಸ್' ಆಯೋಜಿಸಿದ್ದ ಟೆಂಡರ್ ಶ್ಯೂರ್ ಸಂವಾದದಲ್ಲಿ ಸಾಮಾಜಿಕ ಹೋರಾಟಗಾರ್ತಿ ನಂದನಾರೆಡ್ಡಿ ಹಾಗೂ ಬೆಂಗಳೂರು ವಿವಿ ಪ್ರಾಧ್ಯಾಪಕ ಜೀವನ್ ಕುಮಾ

ಬೆಂಗಳೂರು: ನಗರದ ರಸ್ತೆಗಳ ಅಭಿವೃದ್ಧಿಗಾಗಿ ನಡೆದಿರುವ ಟೆಂಡರ್ ಶ್ಯೂರ್ ಕಾಮಗಾರಿಗಳ ಬಗ್ಗೆ ಮತ್ತೆ ಅಪಸ್ಪರ ಕೇಳಿಬಂದಿದೆ. ಈ ಟೆಂಡರ್‍ನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ಜನಸಾಮಾನ್ಯರ ಕಲ್ಪನೆಯಂತೆ ಕಾಮಗಾರಿ ನಡೆಯುತ್ತಿಲ್ಲ.

ಸರ್ಕಾರದ ಯೋಜನೆಗಳಲ್ಲಿ ಕಾರ್ಪೊರೇಟ್ ಕಂಪನಿಗಳು ಹಸ್ತಕ್ಷೇಪ ಮಾಡುತ್ತಿವೆ. ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಷಡ್ಯಂತ್ರ ನಡೆದಿದೆ. ಸ್ವಹಿತಾಸಕ್ತಿ ಸಂಘಠನೆಗಳು ಅಭಿವೃದ್ಧಿ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿವೆ. ಅಧಿಕಾರಿಗಳು, ಆಡಳಿತ ನಡೆಸುವುದರ ಜೊತೆ ಕಾರ್ಪೊರೇಟ್ ಕಂಪನಿಗಳು ಸೇರಿಕೊಂಡಿವೆ. ಈ ಬಗ್ಗೆ ಕೋರ್ಟ್ ಗೆ ಪಿಐಎಲ್ ಇಲ್ಲವೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು. ಭ್ರಷ್ಟರನ್ನು ಶಿಕ್ಷಿಸಬೇಕು. ಕಾನೂನು ಮೂಲಕ ಅವರನ್ನು ಸದೆಬಡಿಯುವ ಕೆಲಸವಾಗಬೇಕು. ಇಲ್ಲವಾದರೆ ಭ್ರಷ್ಟಚಾರ ನಿರಂತರವಾಗಿ ನಡೆಯುತ್ತಿರುತ್ತದೆ.

ಹೀಗೆ ಹತ್ತಾರು ಆರೋಪಗಳು ಟೆಂಡರ್ ಶ್ಯೂರ್ ಕಾಮಗಾರಿಗಳ ಬಗ್ಗೆ ಕೇಳಿ ಬಂದಿದ್ದು, ಬೆಂಗಳೂರಿನ ಜನ ಸಾಮೂಹಿಕವಾಗಿ ಟೆಂಡರ್ ಶ್ಯೂರ್ ಕಾಮಗಾರಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಫಾರ್ಮ್ ಆಫ್ ಅರ್ಬನ್ ಗೌವರ್ನೆನ್ಸ್ ಆ್ಯಂಡ್ ಕಾಮನ್ಸ್ ಬುಧವಾರ ಆಯೋಜಿಸಿದ್ದ ಟೆಂಡರ್ ಶ್ಯೂರ್ ಪ್ರಾಜೆಕ್ಟ್ ಸಂವಾದದಲ್ಲಿ ಕಾಮಗಾರಿಗಳ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದವು. ಇದಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂಬ ಉತ್ತರವೂ ಸಂವಾದದಲ್ಲೇ ಸಿಕ್ಕಿತು.

ನಗರದಲ್ಲಿ ಕರೆದಿರುವ ಟೆಂಡರ್ ಶ್ಯೂರ್ ಕಾಮಗಾರಿಗಳು ಪಾರದರ್ಶಕವಾಗಿಲ್ಲ. ಸರ್ಕಾರದ ಯಾವುದೇ ಯೋಜನೆಗಳು ಜನಸಾಮಾನ್ಯರನ್ನು ತಲುಪಬೇಕು. ಆದರೆ, ಈ ಟೆಂಡರ್ ನ ಪ್ರಕ್ರಿಯೆ ಸಾರ್ವಜನಿಕರನ್ನು ವಂಚಿಸುತ್ತಿದೆ ಇದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ವಿರುದ್ಧ ಕಾನೂನು ಹೋರಾಟದ ಅಗತ್ಯವಿದೆ. ಪಿಐಎಲ್ ಹಾಗೂ ಲೋಕಾಯುಕ್ತಕ್ಕೆ ದೂರು  ನೀಡಬೇಕು. ಇಲ್ಲವಾದಲ್ಲಿ ಭ್ರಷ್ಟಾಚಾರ ತಡೆಯಲು ಸಾಕ್ಷ್ಯವಿಲ್ಲ ಎಂದು ಮಾನವ ಹಕ್ಕುಗಳ ಆಯೋಗ ಸದಸ್ಯ ನ್ಯಾ.ಸಿ.ಜಿ. ಹುನಗುಂದ ಅಭಿಪ್ರಾಯಪಟ್ಟರು.

ಅಭಿವೃದ್ಧಿ ಒಂದು ಪ್ರಕ್ರಿಯೆ. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಆದರೆ, ಇಲ್ಲಿ ಜನರನ್ನೇ ಕೈಬಿಟ್ಟಿದ್ದಾರೆ. ವಿಕಚೇತನರಿಗೆ ಇದರಿಂದ ಪ್ರಯೋಜನವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ದ ಪ್ರಮುಖ ಆಶಯವನ್ನೇ ಮರೆತಿ ದ್ದಾರೆ. ಕೇವಲ ಬಿಲ್ಡಿಂಗ್ ಕಟ್ಟುವುದೇ ಅಭಿವೃದ್ಧಿ ಅಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಏನು ಬೇಕು ಎಂಬುದನ್ನು ಕೊಡುವುದೇ ಅಭಿವೃದ್ಧಿ. ವ್ಯವಸ್ಥೆಯಲ್ಲಿ ಅಯೋಗ್ಯರು ಜಾಸ್ತಿ ಆದಾಗ ಆಯೋಗ ರಚನೆ ಸಾಧ್ಯವಿ ದೆ. ಪ್ರತಿಯೊಂದು ಅಭಿವೃದ್ಧಿಯಲ್ಲಿ ಶೋಷಣೆಯಿದೆ. ಮೆಟ್ರೋ ಯೋಜನೆಯಿಂದ ಜನರ ಪರಿಕಲ್ಪನೆ ಬದಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತೆ ನಂದನಾರೆಡ್ಡಿ ಮಾತನಾಡಿ, ತಮಗಿಷ್ಟ ಬಂದಂತೆ ಕಾರ್ಪೊರೇಟ್ ಕಂಪನಿಗಳು ನಗರವನ್ನು ಅಭಿವೃದ್ಧಿಪಡಿಸುತ್ತಿವೆ. ಒಳ್ಳೆಯ ನಾಯಕರನ್ನು ಜನರೇ ನೇರವಾಗಿ ಆಯ್ಕೆ ಮಾಡಬೇಕು ಎಂದರು. ಸಂವಾದದಲ್ಲಿ ಮಾತನಾಡಿದ ನಾಗವಾರ ದ ಮೀನಾ, ನಮ್ಮ ಪ್ರದೇಶದಲ್ಲಿ ಬಾಲಜ ನಗ್ರಹ ಎಂಬ ಸಂಸ್ಥೆಯಿದೆ. ತನ್ನ ನೇತೃತ್ವದಲ್ಲೇ ಎಲ್ಲ ಕಾರ್ಯಗಳನ್ನು ಮಾಡುತ್ತಿದೆ. ನಮಗೆ ಕಾರ್ಪೊರೇಟರ್‍ಗಳಿದ್ದಾರೆ. ಶಾಸಕರಿದ್ದಾರೆ. ಆದರೂ ಎಲ್ಲದಕ್ಕೂ ಈ ಸಂಸ್ಥೆಯೇ ನೇತೃತ್ವ ವಹಿಸಿ ಕೆಲಸ ಮಾಡುತ್ತಿದೆ. ಇದನ್ನು ಕೇಳುವ ಹಕ್ಕು ಕೂಡ ನಮಗಿಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ನಂದನಾ ರೆಡ್ಡಿ, ಕೇಳುವ ಹಕ್ಕನ್ನು ಏಕೆ ಕಳೆದುಕೊಳ್ಳಬೇಕು? ಅದನ್ನು ಬಿಟ್ಟಿರುವುದೇ ನಮ್ಮ ದೊಡ್ಡ ತಪ್ಪು. ಎಂದಿಗೂ ಅಂತಹ ತಪ್ಪು ಮಾಡ-ಬೇಡಿ ಎಂದು
ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com