ನಿವೃತ್ತ ನ್ಯಾಯಮೂರ್ತಿಗಳಿಗೆ ಗೌರವ ಡಾಕ್ಟರೇಟ್

ಸುಪ್ರಿಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು, ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಹಾಗೂ ನ್ಯಾ.ಎನ್. ಸಂತೋಷ ಹೆಗ್ಡೆ...
ನ್ಯಾಯಮೂರ್ತಿಗಳು
ನ್ಯಾಯಮೂರ್ತಿಗಳು

ಧಾರವಾಡ: ಸುಪ್ರಿಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು, ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಹಾಗೂ ನ್ಯಾ.ಎನ್. ಸಂತೋಷ ಹೆಗ್ಡೆ ಅವರಿಗೆ ಗುರುವಾರ ಇಲ್ಲಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎಲ್. ದತ್ತು, 'ಇತ್ತೀಚೆಗೆಕಾನೂನು ಅವಕಾಶಗಳಲ್ಲಿ ತುಂಬ ಬದಲಾವಣೆಗಳಾಗಿವೆ. ಸ್ಪರ್ಧಾತ್ಮಕ ಕಾನೂನು, ಬೌದ್ಧಿಕ ಆಸ್ತಿ ಕಾಯ್ದೆ ಹಾಗೂ ಅಂತಾರಾಷ್ಟ್ರೀಯ ಕಾನೂನು ಕ್ಷೇತ್ರಗಳಲ್ಲಿ ಕಾನೂನು ಪದವೀಧರರಿಗೆ ಉತ್ತಮ ಅವಕಾಶಗಳಿವೆ,'' ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಗೌರವಡಾಕ್ಟರೇಟ್ ಹಾಗೂ ಪದಕ ಪ್ರದಾನ ಮಾಡಿದರು. ಕಾನೂನು ವಿವಿ ಕುಲಪತಿ ಪ್ರೊ.ಟಿ.ಆರ್. ಸುಬ್ರಮಣ್ಯ, ಕುಲಸಚಿವ ಡಾ.ಬಿ.ಎಸ್. ರೆಡ್ಡಿ ಇದ್ದರು.

ಪದಕ ಪಡೆದವರಿವರು: ಬೆಂಗಳೂರಿನ ವಿಶ್ವೇಶ್ವರಪುರ ಕಾನೂನು ಕಾಲೇಜಿನ ಸಹಾನಾ ಎಸ್. ಪೈ, ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನ ಸುಧಾ ಸಮೀಕ್ಷಾ ಮೊಹಾಂತಿ, ಬೆಳಗಾವಿಯ ಆರ್. ಎಲ್. ಕಾನೂನು ಕಾಲೇಜಿನ ಮೇಘನಾ ಬಾಳಕಟ್ಟಿ, ಕಾನೂನು ವಿವಿಯ ಅನುಕಾಂಷ ಕಲಕೇರಿ, ನೂತನ ಪಾಟೀಲ, ಇದ್ದಲಗಿ ನಯೀಂ ಅಬ್ಬಾಸ್, ಮಂಗಳೂರು ಎಸ್‍ಡಿಎಂ ಕಾನೂನು ಕಾಲೇಜಿನ ಕಾರ್ತಿಕ್ ಆನಂದ್, ಕಾನೂನು ವಿವಿ ಶ್ರೀಕೃಷ್ಣ ಭಾರದ್ವಾಜ ಹಾಗೂ ರಿಚಿಕಾ ಎಲ್.ಆರ್. ಎಸ್. ಅವರಿಗೆ ಸುವರ್ಣ ಪದಕ ಪ್ರದಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com