ವಿದೇಶಿ ವ್ಯಾಮೋಹ ಸಲ್ಲದು

`` ಒಂದು ಕಲೆಯನ್ನು ಸ್ವದೇಶಿಯರು ಮೆಚ್ಚಿದರೂ ಕಲಾವಿದರಿಗೆ ತೃಪ್ತಿಯಾಗುತ್ತಿಲ್ಲ. ಬದಲಿಗೆ ವಿದೇಶಿಯರು ಮೆಚ್ಚಿದರೆ ಮಾತ್ರ ಅದಕ್ಕೆ ಬೆಲೆ ಎಂಬ ಮಾಯೆಯಲ್ಲಿ ಇಂದಿನ ಕಲಾವಿದರಿದ್ದಾರೆ,'' ವಿದೇಶಿ ಮೋಹ ಸಲ್ಲದು ಎಂದು...
ಮನೆಯಂಗಳ ಮಾತುಕತೆ ಕಾರ್ಯಕ್ರಮದಲ್ಲಿ ಚಿತ್ರ-ಕಲಾವಿದ ಡಾ.ಬಿ.ಎಸ್.ಕೆ.ವರ್ಮಾ
ಮನೆಯಂಗಳ ಮಾತುಕತೆ ಕಾರ್ಯಕ್ರಮದಲ್ಲಿ ಚಿತ್ರ-ಕಲಾವಿದ ಡಾ.ಬಿ.ಎಸ್.ಕೆ.ವರ್ಮಾ

ಬೆಂಗಳೂರು: `` ಒಂದು ಕಲೆಯನ್ನು ಸ್ವದೇಶಿಯರು ಮೆಚ್ಚಿದರೂ ಕಲಾವಿದರಿಗೆ ತೃಪ್ತಿಯಾಗುತ್ತಿಲ್ಲ. ಬದಲಿಗೆ ವಿದೇಶಿಯರು ಮೆಚ್ಚಿದರೆ ಮಾತ್ರ ಅದಕ್ಕೆ ಬೆಲೆ ಎಂಬ ಮಾಯೆಯಲ್ಲಿ ಇಂದಿನ ಕಲಾವಿದರಿದ್ದಾರೆ,'' ವಿದೇಶಿ ಮೋಹ ಸಲ್ಲದು ಎಂದು ಖ್ಯಾತ ಚಿತ್ರ ಕಲಾವಿದ ಡಾ.ಬಿ.ಎಸ್.ಕೆ.ವರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ``ಭಾರತೀಯ ಕಲೆ ಇಂದು ನಶಿಸುತ್ತಿದೆ. ಕಲಾವಿದರು ವಿದೇಶಿ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ಕಲೆಗೂ ತನ್ನದೆ ಗೌರವವಿರುತ್ತದೆ. ಅದನ್ನು ಹಾಗೆಯೇ ನೋಡಬೇಕು ಹಾಗೂ ಗೌರವಿಸಬೇಕು. ಕಲಾವಿದರು ಕಲೆ ಎಂಬ ಪ್ರಕೃತಿಯನ್ನು ಸಂಸ್ಕೃತಿಯನ್ನಾಗಿಸಬೇಕು. ಕಲೆಯಲ್ಲಿ ಪ್ರಯೋಗಗಳು ಬೇಕು. ಆದರೆ, ಪ್ರಯೋಗಗಳು ಕಲೆಯನ್ನು ವಿಕೃತಿಯನ್ನಾಗಿಸಬಾರದು,'' ಎಂದು ಸಲಹೆ ನೀಡಿದರು.

``ಇರುವುದನ್ನು ಇರುವ ಹಾಗೆ ಬರೆಯುವುದು `ಚಾರ್ಟ್'. ವಾಸ್ತವದ ಸಂಗತಿಗಳನ್ನು ಅನುಭವಿಸಿಕೊಂಡು ಬರೆಯುವುದು ನಿಜವಾದ ಕಲೆ. ಹೃದಯ ದೇವರು ಕೊಟ್ಟ ಮೊಬೈಲ್. ನಾವು ಆ ಮೊಬೈಲ್ ಒತ್ತಿದಾಗ ಭಾವನೆಗಳು ಕಲೆಯ ರೂಪದಲ್ಲಿ ಹೊಮ್ಮುತ್ತವೆ. ಕಾರಣ ದೇವರು ಕೊಟ್ಟ ಮೊಬೈಲ್ ಪ್ರಕೃತಿಯ ಒಂದು ಭಾಗವಾಗಿದೆ ಎಂದು ಎಂದು ಕಲೆಯ ಕುರಿತು ಮಹಾನ್ ವ್ಯಕ್ತಿಯೊಬ್ಬರು ಹೇಳಿದ್ದಾರೆ,'' ಎಂದು ಉಕ್ತಿಯೊಂದನ್ನು ಸ್ಮರಿಸಿದರು.

``ಸಹನೆ ನಿಮ್ಮೊಂದಿಗಿದ್ದರೆ ಸಕಲವೂ ನಿಮ್ಮದೆ, ವಿನಯ ನಿಮ್ಮಲ್ಲಿದ್ದಾರೆ ವಿಜಯ ನಿನ್ನದು, ಇವೆರೆಡು ಒಂದಾಗಿದ್ದರೆ ಎಲ್ಲದರಲ್ಲಿಯೂ ಜಯ ನಿನ್ನದು, ಕಲಾವಿದರು ಕೀಳರಿಮೆ ಬಿಟ್ಟು ವಾಸ್ತವ ಸಂಗತಿಗಳೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು,'' ಎಂದು ಅವರು ಸಲಹೆ ನೀಡಿದರು. ನವ್ಯ ಚಿತ್ರಕಾರನಿಗೆ ಎಲ್ಲವೂ ಹೊಸತು, ನಿತ್ಯವೂ ನಮ್ಮದಾಗದೇ ಇರುವಂಥದ್ದನ್ನು ಬಲವಂತವಾಗಿ ತಮ್ಮದಾಗಿ ಸಿಕೊಳ್ಳಬಾರದು. ಇವತ್ತು ಹೊಸದೆನಿಸಿದ್ದು ನಾಳೆ ಹಳೆಯದೆನಿಸುತ್ತದೆ. ಪ್ರಯೋಗದಿಂದ ಪ್ರಯೋಜನವಾಗಬೇಕು, ಎಂದು ಹೇಳಿದರು. ಕನ್ನಡ, ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com