ಕಳಸಾ ಬಂಡುರಿಗೆ ಟೆಕ್ಕಿಗಳ ಸಾಥ್

ಕಳಸಾಡೂರಿ ಕುಡಿಯುವ ನೀರಿನ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಐಟಿ ಬಿಟಿ ಕ್ಷೇತ್ರದ ಟೆಕ್ಕಿಗಳು ಪ್ರತಿಭಟನೆ ನಡೆಸಿದರು.
ಕಳಸಾ ಬಂಡುರಿಗೆ ಟೆಕ್ಕಿಗಳ ಸಾಥ್
ಕಳಸಾ ಬಂಡುರಿಗೆ ಟೆಕ್ಕಿಗಳ ಸಾಥ್
Updated on

ಬೆಂಗಳೂರು: ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಐಟಿ ಬಿಟಿ ಕ್ಷೇತ್ರದ ಟೆಕ್ಕಿಗಳು ಪ್ರತಿಭಟನೆ ನಡೆಸಿದರು.
ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆ ಯಲ್ಲಿ 30ಕ್ಕೂ ಹೆಚ್ಚು ಮಂದಿ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು. ಮಹಾದಾಯಿ ಯೋಜನೆ ಜಾರಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಕೇವಲ ಮತಬ್ಯಾಂಕಿಗಾಗಿ ಅಲ್ಲಿನ ಜನರನ್ನು ಬಳಸಿಕೊಳ್ಳುತ್ತಿವೆಯೇ ಹೊರತು ಜನರ ಸಂಕಷ್ಟಗಳಿಗೆ ಪರಿಹರಿಸುತ್ತಿಲ್ಲ. ಈ ಕೂಡಲೇ ಪ್ರಧಾನಮಂತ್ರಿಗಳು ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಧಾನಿ ಮೇಲೆ ಒತ್ತಡ ತಂದರೆ ಕೆಲಸ ಆಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಟೆಕ್ಕಿಗಳು, ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹಾಕುವ ಕೆಲಸವನ್ನು ನಾವು ಮಾಡುತ್ತೇವೆ. ರಾಜ್ಯ ಸರ್ಕಾರದಿಂದ ಆಗಬೇಕಾದ ಕೆಲಸವನ್ನು ತಮ್ಮ ಮುಖಂಡತ್ವದಲ್ಲೇ ನಡೆಸಬೇಕೆಂದು ಕೋರಿದರು.
ಬಸವ ಮಂಟಪದ ಜಗದ್ಗುರು ಬಸವಕುಮಾರ ಸ್ವಾಮೀಜಿ, ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ಡಾ. ಚಂದ್ರಶೇಖರ ಕಂಬಾರ, ಟೆಕ್ಕಿಗಳಾದ ಶ್ರೀಕಾಂತ್, ಶಿವಾನಂದ, ಗುರುರಾಜ್, ಪುಟ್ಟಹೊನ್ನೇಗೌಡಸ, ಪ್ರಕಾಶ್ ನಲವಾಡಿ, ಮಾದವ್ ರೆಡ್ಡೇರ್, ಸಂತೋಷ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com