ಏಕಾದಶಿ: ದೇಗುಲಗಳಲ್ಲಿ ವಿಶೇಷ ಪೂಜೆ, ವೈಕುಂಠ ವಾಸನ ದರ್ಶನಕ್ಕೆ ಸಾಲುಗಟ್ಟಿದ ಜನ

ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನಲ್ಲಿ ಹಲವಾರು ವಿಷ್ಣು ದೇಗುಲದಲ್ಲಿ ವಿಶೇಷ ಪೂಜೆ...
ಚಾಮರಾಜಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಮುಂದೆ ದರ್ಶನಕ್ಕಾಗಿ ಸಾಲುಗಟ್ಟಿರುವ ಭಕ್ತಾದಿಗಳು...
ಚಾಮರಾಜಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಮುಂದೆ ದರ್ಶನಕ್ಕಾಗಿ ಸಾಲುಗಟ್ಟಿರುವ ಭಕ್ತಾದಿಗಳು...
ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನಲ್ಲಿ ಹಲವಾರು ವಿಷ್ಣು ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಚಾಮರಾಜಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಧ್ಯಾರಾತ್ರಿಯಿಂದಲೇ ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. 
ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಲಕ್ಷ್ಮೀ ನರಸಿಂಹನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ವಿಶೇಷ ನೈವೇದ್ಯ ನೆರವೇರಿಸಲಾಗಿದೆ.
ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ ವೈಕುಂಠ ಏಕಾದಶಿ. ಧನುರ್ಮಾಸದ ಶುಕ್ಲಪಕ್ಷದಂದು ಶ್ರೀ ವಿಷ್ಣುವಿನ ವಾಸ ಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠ ದಿನ ಎಂಬ ನಂಬಿಕೆ ಇದೆ.
ಇದನ್ನು ಮೋಕ್ಷದ ಏಕಾದಶಿಯಂದಲೂ ಕರೆಯಲಾಗುತ್ತದೆ. ಬೆಂಗಳೂರಿನಲ್ಲಿರುವ ಅನೇಕ ವಿಷ್ಣು ದೇವಾಲಯದಲ್ಲಿ ಶ್ರೀನಿವಾಸನಿಗೆ ವಿಶೇಷ ಪೂಜೆಗಳು ಸಲ್ಲಿಸಲಾಗುತ್ತಿದ್ದು, ವೈಕುಂಠ ವಾಸನ ದರ್ಶನ ಪಡೆಯುವ ಸುಲುವಾಗಿ ಸಾಲು ಸಾಲು ಜನ ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದಾರೆ. 
ಏಕಾದಶಿಯಂದು ದರ್ಶನ ಪಡೆಯುವ ಮೂಲಕ ಮುಕ್ತಿ ಮಾರ್ಗ ಅನುಸರಿಸುವ ನಿಟ್ಟಿನಲ್ಲಿ ಜನರು ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಇದು ಎಲ್ಲಾ ವಿಷ್ಣು ದೇಗುಲದ ಮುಂದೆ ಕಂಡುಬರುತ್ತಿದೆ. ವಿಷ್ಣು ದರ್ಶನ ಪಡೆಯುವ ಭಕ್ತರಿಗೆ ಲಾಡುಗಳನ್ನು ವಿತರಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com