ರೌಡಿ ಕೈಯಲ್ಲಿ ಲಾಂಗ್: ನೆಲಕ್ಕುರುಳಿದ ಗಿಡಗಂಟಿ

ಭಾನುವಾರ ಅವರ ಕೈಯಲ್ಲಿ ಲಾಂಗ್,ಮಚ್ಚುಗಳಿದ್ದವು. ಆದರೆ, ಒಂದು ತೊಟ್ಟು ರಕ್ತ ಹರಿಯಲಿಲ್ಲ. ಯಾರೊಬ್ಬರ ತಲೆಗಳು ಉರುಳಲಿಲ್ಲ. ಬದಲಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಭಾನುವಾರ ಅವರ ಕೈಯಲ್ಲಿ ಲಾಂಗ್, ಮಚ್ಚುಗಳಿದ್ದವು. ಆದರೆ, ಒಂದು       ತೊಟ್ಟು ರಕ್ತ ಹರಿಯಲಿಲ್ಲ. ಯಾರೊಬ್ಬರ ತಲೆಗಳು  ಉರುಳಲಿಲ್ಲ. ಬದಲಾಗಿ ಎಷ್ಟೋ         ನಗಳಿಂದ  ಗಿಡಗಂಟಿ ಬೆಳೆದು ತ್ಯಾಜ್ಯಗಳಿಂದ ಗಬ್ಬು ನಾರುತ್ತಿದ್ದ ಸ್ಥಳಗಳು ಸ್ವಚ್ಛಗೊಂಡವು.

ವಿಜಯನಗರ ಉಪವಿಭಾಗದ ಪೊಲೀಸರು ಇಂತಹ ಒಂದು ಉತ್ತಮ ಕಾರ್ಯಕ್ಕೆ ವೇದಿಕೆ   ಲ್ಪಿಸಿಕೊಟ್ಟಿದ್ದರಿಂದ ಸುಮಾರು 90 ಮಂದಿ ರೌಡಿಗಳು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ  ನಿರ್ಮಲ ಬೆಂಗಳೂರಿಗಾಗಿ ಶ್ರಮದಾನ ಮಾಡಿದರು.

ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಮಾಗಡಿ ರಸ್ತೆ ಪೊಲೀಸ್ ಠಾಣೆಗಳ ವ್ಯಾಪ್ತಿಯ  ರೌಡಿಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೂ ಕಾಮಾಕ್ಷಿಪಾಳ್ಯ, ಸುಮ್ಮನಹಳ್ಳಿ ಹಾಗೂ  ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ರೌಡಿಗಳೆಂದರೆ ಬೆಚ್ಚಿ   ಳುವ ಜನ ಇಂದು ಅವರ ಕೆಲಸ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಂತೆಯೇ ಟೀ, ಕಾಫಿ,   ಪಹಾರ ನೀಡುವ ಮೂಲಕ ಹುರಿದುಂಬಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯನಗರ ಉಪವಿಭಾಗದ ಎಸಿಪಿ ಎಸ್.ಕೆ.ಉಮೇಶ್, ವಿಭಾಗದಲ್ಲಿ 600ಕ್ಕೂ ಅಧಿಕ ಮಂದಿ  ರೌಡಿಗಳಿದ್ದು, ನಿರ್ಮಲ ಬೆಂಗಳೂರು  ಕಾರ್ಯಕ್ರಮಕ್ಕೆ  90 ಮಂದಿ ರೌಡಿಗಳನ್ನು ತೊಡಗಿಸಿಕೊಂಡಿದ್ದೇವೆ. ಜನ ಹೆಚ್ಚಾಗಿ ಓಡಾಡುವ ಹಾಗೂ  ಅಪರಾಧ  ಚಟುವಟಿಕೆ  ನಡೆಯುವ ಪ್ರದೇಶಗಳನ್ನು ಆಯ್ದಕೊಂಡು  ಸ್ವಚ್ಛ ಮಾಡಿಸಲಾಗುತ್ತಿದೆ  ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com