ಪ್ರಜಾತಾಂತ್ರಿಕ ತತ್ವ ಆಧರಿಸಿ ಪಠ್ಯಪುಸ್ತಕ ರಚನೆ ಕುರಿತ ಶೈಕ್ಷಣಿಕ ಸಂವಾದ

ಒಂದೇ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಮಾದರಿಯ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಸಮಾಜ ಮತ್ತು ಶಿಕ್ಷಣ ಕ್ಷೇತ್ರದ ಅಸಮಾನತೆಗೆ ಕಾರಣವಾಗಿದೆ...
ಪ್ರಜಾತಾಂತ್ರಿಕ ತತ್ವ ಆಧರಿಸಿ ಪಠ್ಯಪುಸ್ತಕ ರಚನೆ ಕುರಿತ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ
ಪ್ರಜಾತಾಂತ್ರಿಕ ತತ್ವ ಆಧರಿಸಿ ಪಠ್ಯಪುಸ್ತಕ ರಚನೆ ಕುರಿತ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಒಂದೇ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಮಾದರಿಯ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಸಮಾಜ ಮತ್ತು ಶಿಕ್ಷಣ ಕ್ಷೇತ್ರದ ಅಸಮಾನತೆಗೆ ಕಾರಣವಾಗಿದೆ. ಇಂತಹ ವ್ಯವಸ್ಥೆ ಸಮಾಜಕ್ಕೆ ಬಹಳ ಅಪಾಯಕಾರಿ ಎಂದು ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಭಾನುವಾರ ಏರ್ಪಡಿಸಿದ್ದ ವೈಜ್ಞಾನಿಕ ಪ್ರಜಾತಾಂತ್ರಿಕ ತತ್ವಗಳ ಆಧಾರದ ಮೇಲೆ ಪಠ್ಯಪುಸ್ತಕ ರಚನೆ' ಕುರಿತ ಶೈಕ್ಷಣಿಕ ಸಂವಾದದಲ್ಲಿ ಮಾತನಾಡಿದ ಅವರು, ಸನಾತನ ಭಾರತದ ಕಾಲದಿಂದಲೂ ನಡೆದುಬಂದ ವಿಭಜಿತ ಶಿಕ್ಷಣ ಪದ್ಧತಿಯನ್ನೇ ಅನುಸರಿಸುತ್ತಿವೆ. ಶಿಕ್ಷಣ ಪದ್ಧತಿಯು ಧರ್ಮ, ಜಾತಿ, ಅಂತಸ್ತುಗಳ ಆಧಾರದ ಮೇಲೆ ವಿಭಜಿತಗೊಂಡಿದೆ. ಅದರಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಹಾಗೂ ಕನ್ನಡ, ಇಂಗ್ಲಿಷ್ ಮಾಧ್ಯಮ ಮತ್ತು ಅಂಗನವಾಡಿ ಮತ್ತು ಕಿಂರ್ ಗಾರ್ಟನ್ ಎಂದು ವಿಂಗಡನೆ ಮಾಡುವ ಮೂಲಕ ಅಸಮಾನತೆ ಹುಟ್ಟು ಹಾಕಲಾಗಿದೆ.


ಪಠ್ಯಪುಸ್ತಕ-ಪಕ್ಷ ಪುಸ್ತಕವಲ್ಲ: 1968ರಲ್ಲಿ ಮತ್ತು 1986ರಲ್ಲಿ ಜಾರಿಗೆ ಬಂದ `ಸಮಾನ ಶಾಲಾ ಶಿಕ್ಷಣ ನೀತಿ'ಯನ್ನು ಯಾವುದೇ ಸರ್ಕಾರಗಳು ಅನುಷ್ಠಾನಕ್ಕೆ ತರದಿರುವುದು ಖಾಸಗೀಕರಣಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಸರ್ಕಾರಗಳು ಬದಲಾದಂತೆ ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ. ಪುಠ್ಯಪುಸ್ತಕ ಪಕ್ಷ ಪುಸ್ತಕವಲ್ಲ, ಕೇಸರೀಕರಣಕ್ಕೆ ಸಂವಿಧಾನೀಕರಣ ಮಾಡಬೇಕೆ ವಿನಾ ಕಾಂಗ್ರೆಸ್ಸೀಕರಣ ಪರ್ಯಾಯ ವಲ್ಲ ಎಂದರು.ಇತಿಹಾಸ ತಜ್ಞ ಪ್ರೊ . ಶೆಟ್ಟರ್ ಮಾತನಾಡಿ, ಸಂವಿಧಾನ ಜಾರಿಗೆ ಬಂದಮೇಲೆ ಸಾರ್ವಜನಿಕ ಶಿಕ್ಷಣಕ್ಕೆ ಅರ್ಥ ಬಂತು. ಆದರೆ ಪಠ್ಯಪುಸ್ತಕಗಳ ವೈಜ್ಞಾನಿಕ ಸಂಶೋಧನೆಗೆ ಮೈಸೂರು ಸರ್ಕಾರದಿಂದ ಈ ವರೆಗೂ ಯಾವುದೇ ಸರ್ಕಾರಗಳು ಗ್ರಂಥಾಲಯ ತೆರೆಯದಿರುವುದು ದುರಂತ ಎಂದರು.

2017-18ಕ್ಕೆ ಪರಿಷ್ಕೃತ ಪಠ್ಯ: ಪಠ್ಯದಲ್ಲಿ ಕೆಲವೊಂದು ಅಸಂಬದ್ದ ವಿಷಯಗಳನ್ನು ತೂರಿಸಲಾಗುತ್ತಿದ್ದು, ಯಾವ ವಯಸ್ಸಿನ ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕೆಂಬ
ತಿಳಿವಳಿಕೆ ಮೂಡದಿರುವುದು ದುರಂತ. ನೂತನ ಪಠ್ಯಕ್ರಮಗಳನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, 2017-18ನೇ ಸಾಲಿನಿಂದ ಜಾರಿಗೆ ಬರಲಿದೆ. ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com