ಐದು ದಶಕಗಳಲ್ಲಿ ಅಮೆರಿಕ ಆಸ್ತಿಕರ ದೇಶ: ಬನ್ನಂಜೆ

ನಮ್ಮಲ್ಲಿನ ಯೋಗ, ಸಂಸ್ಕೃತಗಳನ್ನು ಅಳವಡಿಸಿಕೊಳ್ಳುತ್ತಿರುವ ಅಮೆರಿಕ ಮುಂದಿನ ಐದು ದಶಕಗಳಲ್ಲಿ ಆಸ್ತಿಕರ ದೇಶವಾಗಿ ಪರಿವರ್ತನೆಗೊಳ್ಳಲಿದೆ. ಆದರೆ ವಿದೇಶಿ ಪ್ರವಾಸ ಕೈಗೊಳ್ಳುವ ಕೆಲವರು ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಅನುಸರಿಸುವ ಮೂಲಕ ತಲೆಕೆಟ್ಟಂತೆ ವರ್ತಿಸುತ್ತಿದ್ದಾರೆ'...
`ಬನ್ನಂಜೆ 80ರ ಸಂಭ್ರಮ'ಕ್ಕೆ ಆಗಮಿಸುತ್ತಿರುವ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಆರತಿ ಬೆಳಗುವ ಮೂಲಕ ಸ್ವಾಗತಿಸಲಾಯಿತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಉಪಸ್ಥಿತರಿದ್
`ಬನ್ನಂಜೆ 80ರ ಸಂಭ್ರಮ'ಕ್ಕೆ ಆಗಮಿಸುತ್ತಿರುವ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಆರತಿ ಬೆಳಗುವ ಮೂಲಕ ಸ್ವಾಗತಿಸಲಾಯಿತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಉಪಸ್ಥಿತರಿದ್

ಬನ್ನಂಜೆ  80ರ ಸಂಭ್ರಮ, ಅಮೆರಿಕದಲ್ಲಿ ಯೋಗ, ಸಂಸ್ಕೃತ, ಭಗವದ್ಗೀತೆಗೆ ಪ್ರಾಶಸ್ತ್ಯ, ಬನ್ನಂಜೆ ಜ್ಞಾನದ ಪೀಠ: ಯತಿರಾಜ ಮಠದ ಯತಿರಾಜ ಜೀಯರ್ ಅಭಿಮತ

ಬೆಂಗಳೂರು:
`ನಮ್ಮಲ್ಲಿನ ಯೋಗ, ಸಂಸ್ಕೃತಗಳನ್ನು ಅಳವಡಿಸಿಕೊಳ್ಳುತ್ತಿರುವ ಅಮೆರಿಕ ಮುಂದಿನ ಐದು ದಶಕಗಳಲ್ಲಿ ಆಸ್ತಿಕರ ದೇಶವಾಗಿ ಪರಿವರ್ತನೆಗೊಳ್ಳಲಿದೆ. ಆದರೆ ವಿದೇಶಿ ಪ್ರವಾಸ ಕೈಗೊಳ್ಳುವ ಕೆಲವರು ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಅನುಸರಿಸುವ ಮೂಲಕ ತಲೆಕೆಟ್ಟಂತೆ ವರ್ತಿಸುತ್ತಿದ್ದಾರೆ' ಎಂದು ವಿಧ್ವಾಂಸ ಬನ್ನಂಜೆ ಗೋವಿಂದಾಚಾರ್ಯ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ನಡೆಯುತ್ತಿರುವ `ಬನ್ನಂಜೆ 80ರ ಸಂಭ್ರಮ'ದಲ್ಲಿ ಮಾತನಾಡಿದ ಅವರು, ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸ್ಕೃತಿ ಕೇಂದ್ರಗಳು ಹೆಚ್ಚಳವಾಗುತ್ತಿವೆ. ಮಾಂಸಹಾರ ಮತ್ತು ಮದ್ಯಪಾನದಂತಹ ಹವ್ಯಾಸಗಳನ್ನು ತ್ಯಜಿಸುತ್ತಿದ್ದಾರೆ. ಈ ಮೂಲಕ ಆಸ್ತಿಕ ರಾಷ್ಟ್ರವಾಗಲು ಹೊರಟಿದೆ. ಅಲ್ಲಿನ ಜನರಿಗೆ ಭಗವದ್ಗೀತೆ ಬಗ್ಗೆ ಅಪಾರ ಗೌರವವಿದೆ. ಅದೇ ಮಾತನ್ನು ಇಲ್ಲಿನವರಿಗೆ ತಿಳಿಸಿದರೆ ಅಸಡ್ಡೆ ಮಾಡುತ್ತಾರೆ ಎಂದು ಹೇಳಿದರು.

ಶತಾಯುಷಿ, ನಿಘಂಟು ತಜ್ಞ ಪೊ್ರ. ಜಿ. ವೆಂಕಟಸುಬ್ಬಯ್ಯ ಮಾತನಾಡಿ, ಸಂಸ್ಕೃತದ ಕ್ಲಿಷ್ಟ ಗ್ರಂಥಗಳನ್ನು ಕನ್ನಡಕ್ಕೆ ಸರಳ ರೂಪದಲ್ಲಿ ತಂದಿರುವ ಅವರ ಬರವಣಿಗೆ ಶೈಲಿ ನವೀರಾಗಿದೆ.
ಬನ್ನಂಜೆಯವರ 80 ವಯಸ್ಸು ಉಚ್ಛ್ರಾಯ ಸ್ಥಿತಿಗೆ ತಂದಿದ್ದು, ಶಕ್ತಿ ತಂದಿದೆ. ಅವರ ಓದು, ಬರಹ, ನೋಟ ಎಲ್ಲವೂ ಸುಂದರವೆಂದು ಬಣ್ಣಿಸಿದರು. ನಮ್ಮಲ್ಲಿರುವ ಎಲ್ಲ ವಿಧ್ವಾಂಸರು ಒಂದೊಂದು ಶಾಸ್ತ್ರೀಯ ಗ್ರಂಥಗಳನ್ನು ರಚಿಸಿದರೆ ಕನ್ನಡ ಸಾರಸ್ವತ ಲೋಕ ಮತ್ತಷ್ಟು ವಿಸ್ತಾರವಾಗಿ ಬೆಳೆಯಲಿದೆ ಎಂದು ಸಲಹೆ ನೀಡಿದರು.

ಮಗುವಿಗೂ ಅರ್ಥವಾಗುವ ಭಾಷೆ: ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ಮಗುವಿಗೂ ಅರ್ಥವಾಗುವಂತಹ ಭಾಷೆಯಲ್ಲಿನ ಭಾಗವತ ಪ್ರವಚನ ಎಂತಹವರನ್ನೂ ಆಕರ್ಷಿಸುತ್ತದೆ. ಬನ್ನಂಜೆ ವಿಚಾರಧಾರೆಗಳಿಗೆ ವಿಷ್ಣುವರ್ಧನ್ ಮನಸೋತು ದೊಡ್ಡ ಅಭಿಮಾನಿಯಾಗಿದ್ದರು. ಅವರ ಕೊನೆಯ ದಿನಗಳಲ್ಲೂ ಪ್ರವಚನಗಳನ್ನು ಆಲಿಸುತ್ತಿದ್ದರು. ಅಪಾರ ಜ್ಞಾನ ತುಂಬಿಕೊಂಡಿರುವ, ಕೃತಿರತ್ನಗಳನ್ನು ಅಧ್ಯಯನ ಮಾಡಿರುವ ದಿವ್ಯ ಜ್ಞಾನದ ಗುರು. ವೈಚಾರಿಕರಲ್ಲಿ ವೈಚಾರಿಕರಾಗಿದೆ ಕುಶಲಮತಿಗಳಾಗಿದ್ದಾರೆ ಎಂದು ಪ್ರಶಂಸಿದರು.

ಜ್ಞಾನದ ಪೀಠ: ಮೇಲುಕೋಟೆ ಯತಿರಾಜ ಮಠದ ಯತಿರಾಜ ಜೀಯರ್ ಮಾತನಾಡಿ, ನಾವು ಮಠದ ಪೀಠಾಧಿಪತಿಗಳಾಗಿದ್ದೇವೆ. ಅದೇ ಬನ್ನಂಜೆಯವರು ಜ್ಞಾನದ ಪೀಠವಾಗಿದ್ದಾರೆ. ರಾಷ್ಟ್ರದ ಅದ್ಭುತ ನಾಯಕರು, ವಿದೇಶಿಗರು ಸೇರಿ ಅಪಾರ ಶಿಷ್ಯವರ್ಗ ಪ್ರಭಾವಿತವಾಗಿದೆ. ಸಾಮಾನ್ಯ ಮನಸ್ಸುಗಳಿಗೆ ಭಾಗವತ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿನಂದನೀಯ ನುಡಿಗಳನ್ನಾಡಿದರು.

ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಧಿೀಮಂತ ವ್ಯಕ್ತಿಗೆ, ಅವರ ವ್ಯಕ್ತಿತ್ವಕ್ಕೆ ಹಾರೈಕೆಯ ಅಭಿನಂದನೆ. ವೇದಾಂತಿಯಾಗಿ, ಸಾಹಿತಿಯಾಗಿ, ಪೂರ್ಣಪ್ರಜ್ಞರಾಗಿ ವಿದ್ಯೆಗಳನ್ನು ಬಲ್ಲವರಾಗಿದ್ದು, ಎಲ್ಲ ಪ್ರಕಾರಗಳಲ್ಲಿಯೂ ಅವರ ಪ್ರಭಾವ ಕಂಡುಬರುತ್ತದೆ. ಆದರೆ ಕೆಲವರು ದೊಡ್ಡವರನ್ನು ಟೀಕಿಸಿದರೆ ನಾವೂ ದೊಡ್ಡವರಾಗುತ್ತೀವಿ ಎಂಬ ಭ್ರಾಂತಿಯಿಂದ ಟೀಕೆಗೆ ಮುಂದಾಗಿದ್ದಾರೆ. ಅಂತಹ ಟೀಕಾಕಾರರ ಹಿಂದೆ ಎಂತಹ ಪ್ರಭಾವವಿದೆ ಎಂದು ತಿಳಿದಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬನ್ನಂಜೆ ರಚಿತ ಕೃತಿಗಳ ಲೋಕಾರ್ಪಣೆ ಹಾಗೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರ ಸಿ.ಡಿ. ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಆರ್‍ಐಟಿ ರೋಚೆಸ್ಟರ್ ಅಮೆರಿಕದ ಪೊ್ರ. ಡಾ. ಪಿ.ಆರ್. ಮುಕುಂದ್, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಮಾಲತಿ ಪಟ್ಟಣಶೆಟ್ಟಿ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಸೇರಿ ಅನೇಕರು ಉಪಸ್ಥಿತರಿದ್ದರು.

ಇವರ ಕನ್ನಡ ಕೇಳಿದ್ರೆ, ಕನ್ನಡಿಗರೇ ನಾಚಬೇಕು
ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡಿಗರೇ  ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿ ರುವ ಸಂದರ್ಭದಲ್ಲಿ ವಿದೇಶಿಗರೊಬ್ಬರು ಶಂಕರಾಚಾರ್ಯ, ಮಧ್ವಾಚಾರ್ಯ, ಸಂಸ್ಕೃತವನ್ನು ಪಂಡಿತರಂತೆ ಆಣಿಮುತ್ತುಗಳನ್ನು ಉದುರಿಸುತ್ತಾರೆಂದರೆ ನೀವು ನಂಬಲೇಬೇಕು. ಒಂದೇ ಒಂದು ಆಂಗ್ಲ ಪದ ಬಳಸದೆ ನೆದರ್ಲೆಂಡ್ ಮೂಲದ ಜಪಾನ್ ವಿಧ್ವಾಂಸರೊಬ್ಬರು ಅಚ್ಚ ಕನ್ನಡ ಪದ ಪ್ರಯೋಗ ಅಚ್ಚರಿಗೊಳಿಸುವಂತಿತ್ತು.

ಡಾ. ರಾಬರ್ಟ್ ಜೈದಂಬೋಸ್ ಎಂಬ ವಿದೇಶಿಗ, ಬನ್ನಂಜೆಯವರ ಶಿಷ್ಯ ಕನ್ನಡ ಮಾತನಾಡಿದ್ದು ಕನ್ನಡಿಗರನ್ನೇ ನಾಚಿಸುವಂತಿತ್ತು. ಒಂದು ಕ್ಷಣ ಎಲ್ಲರೂ ಇವರು ವಿದೇಶಿಯರೇ ಎಂದು ಆಶ್ಚರ್ಯಪಡುವಷ್ಟು ಸುಶ್ರಾವ್ಯವಾಗಿ, ಸ್ಪಷ್ಟತೆಯಿಂದ ಕನ್ನಡದಲ್ಲಿ ಮಾತನಾಡಿದ್ದು ಎಲ್ಲರ ಮನ ಮುಟ್ಟುವಂತಿತ್ತು. ಬನ್ನಂಜೆ ಅವರ ಬರಹ, ಉಪನ್ಯಾಸಗಳಿಂದ ಭೌಗೋಳಿಕವಾಗಿ ಬಹಳ ಜನ ಪ್ರಭಾವಿತರಾಗಿದ್ದಾರೆ. ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಧರ್ಮ ಮತ್ತು ಆಚರಣೆಗಳ ಬಗ್ಗೆ ತುಂಬ ನಂಬಿಕೆ ಇಟ್ಟಿದ್ದಾರೆ. ನಾನು ಬನ್ನಂಜೆ ಅವರಿಂದ ಮೊದಲು ಸಂಸ್ಕೃತ, ನಂತರ ಶಂಕರಾಚಾರ್ಯ, ಮಧ್ವಾಚಾರ್ಯರ ಬಗ್ಗೆ ತಿಳಿದುಕೊಳ್ಳಲು ಅಧ್ಯಯನ ನಡೆಸಿದೆ. ತೆರೆದ ಮನಸ್ಸು, ಆತ್ಮವಿಶ್ವಾಸದಿಂದ ಮುಕ್ತವಾಗಿ ವಿಚಾರಗಳನ್ನು ಧಾರೆ ಎರೆಯುತ್ತಾರೆ ಎಂದು ಡಾ. ರಾಬರ್ಟ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com