ತನಿಖೆಯಿಂದ ಖಿನ್ನತೆಗೆ ಒಳಗಾಗಿದ್ದೆ: ಸಂತೋಷ್ ಲಾಡ್

ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಇಷ್ಟು ದಿನಗಳ ಕಾಲ ಸಿಬಿಐ, ಎಸ್ಐಟಿ ನಡಿಸಿದ ನಿರಂತರ ತನಿಖೆಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಕಲಘಟಗಿ ಶಾಸಕ ಸಂತೋಷ ಲಾಡ್ ಹೇಳಿದ್ದಾರೆ...
ಕಲಘಟಗಿ ಶಾಸಕ ಸಂತೋಷ ಲಾಡ್ (ಸಂಗ್ರಹ ಚಿತ್ರ)
ಕಲಘಟಗಿ ಶಾಸಕ ಸಂತೋಷ ಲಾಡ್ (ಸಂಗ್ರಹ ಚಿತ್ರ)

ಧಾರವಾಡ: ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಇಷ್ಟು ದಿನಗಳ ಕಾಲ ಸಿಬಿಐ, ಎಸ್ಐಟಿ ನಡಿಸಿದ ನಿರಂತರ ತನಿಖೆಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಕಲಘಟಗಿ ಶಾಸಕ ಸಂತೋಷ ಲಾಡ್ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ಪರಿಷತ್ ಚುನಾವಣೆ ನಿಮಿತ್ತ ನಡೆದ ಪ್ರಚಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದೀಗ ತನಿಖೆ ಪೂರ್ಣಗೊಂಡಿದ್ದು, ಅಕ್ರಮ ಗಣಿಗಾರಿಕೆ ಅರೋಪದಿಂದ ಹೊರಬರುವ ಕಾಲ ಸನ್ನಿಹಿತವಾಗಿದೆ. ಇಷ್ಟು ದಿನಗಳ ಕಾಲ ಕ್ಷೇತ್ರಕ್ಕೆ ಭೇಟಿ ನೀಡದೆ ಮತದಾರರ ಮನಸ್ಸು ನೋಯಿಸಲಿದ್ದೇನೆ. ಆದರೆ, ಇನ್ಮುಂದೆ ಕ್ಷೇತ್ರದ ಜನರ ಸೇವೆಗೆ ಸದಾ ಹಾಜರು. ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಇದೀಗ ಆರೋಪ ಮುಕ್ತನಾಗುತ್ತಿದ್ದು, ಮತ್ತೆ ಸಚಿವ ಸ್ಥಾನ ಅಲಂಕರಿಸುವ ಭರವಸೆ ನನಗಿದೆ ಎಂದರು.

ಮತ್ತೆ ಪ್ರತ್ಯಕ್ಷ
ಲೋಕಸಭಾ ಚುನಾವಣೆ ವೇಳೆ ಒಂದು ದಿನ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿ ಹೋಗಿದ್ದ ಲಾಡ್ ಸಾಹೇಬ್ರು, ಇದಕ್ಕೂ ಮುಂಚೆ ತಾಪಂ. ಪ್ರಗತಿ ಪರಿಶೀಲನೆಗೆ ಬಂದಿದ್ದರು. ಇದೀಗ ತಮ್ಮ ಆಪ್ತ ಶ್ರೀನಿವಾಸ ಮಾನೆ ಅವರಿಗಾಗಿ ಪರಿಷತ್ ಚುನಾವಣೆ ಸಂದರ್ಭದಲ್ಲಿ ಮತ್ತೆ ಕ್ಷೇತ್ರದ ಹೊಸ್ತಿಲು ತುಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com