ಮೌಢ್ಯಬಿಟ್ಟರೆ ದೇಸಿ ಸಂಸ್ಕೃತಿ ಉದ್ಧಾರ

`ಮಠ, ಮೌಢ್ಯ, ಮಡಿ ಬಿಟ್ಟರೆ ಭಾರತೀಯ ಸಂಸ್ಕೃತಿ ಉದ್ಧಾರವಾಗಲಿದೆ. ಆದರೆ ಸಂಪ್ರದಾಯ ಹಾಗೂ ಆಧುನಿಕತೆ ಎರಡಕ್ಕೂ ತದ್ವಿರುದ್ದವಾಗಿದ್ದೇನೆ ಎಂಬ ಆರೋಪವಿದೆ. ಆದರೆ ನಾನು ಈ ಎರಡಕ್ಕೂ ಸೇರದೆ ಸಂಪ್ರದಾಯ ಮತ್ತು ಆಧುನಿಕತೆಯ ನಡುನೀರಿನಲ್ಲಿದ್ದೇನೆ' ಎಂದು ಸಂದರ್ಶನವೊಂದರಲ್ಲಿ...
ಬೆಂಗಳೂರಿನ ದಯಾನಂದ ಸಾಗರ ಕಾಲೇಜು ಸಭಾಂಗಣದಲ್ಲಿ ನಡೆಯುತ್ತಿರುವ `ಬನ್ನಂಜೆ 80ರ ಸಂಭ್ರಮ'ದಲ್ಲಿ ಕವಿಗಳಾದ ವೆಂಕಟೇಶಮೂರ್ತಿ, ಮಮತಾ ಸಾಗರ, ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾ ಬಾಯಿ ಇ
ಬೆಂಗಳೂರಿನ ದಯಾನಂದ ಸಾಗರ ಕಾಲೇಜು ಸಭಾಂಗಣದಲ್ಲಿ ನಡೆಯುತ್ತಿರುವ `ಬನ್ನಂಜೆ 80ರ ಸಂಭ್ರಮ'ದಲ್ಲಿ ಕವಿಗಳಾದ ವೆಂಕಟೇಶಮೂರ್ತಿ, ಮಮತಾ ಸಾಗರ, ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾ ಬಾಯಿ ಇ

ಬೆಂಗಳೂರು: `ಮಠ, ಮೌಢ್ಯ, ಮಡಿ ಬಿಟ್ಟರೆ ಭಾರತೀಯ ಸಂಸ್ಕೃತಿ ಉದ್ಧಾರವಾಗಲಿದೆ. ಆದರೆ ಸಂಪ್ರದಾಯ ಹಾಗೂ ಆಧುನಿಕತೆ ಎರಡಕ್ಕೂ ತದ್ವಿರುದ್ದವಾಗಿದ್ದೇನೆ ಎಂಬ ಆರೋಪವಿದೆ. ಆದರೆ ನಾನು ಈ ಎರಡಕ್ಕೂ ಸೇರದೆ ಸಂಪ್ರದಾಯ ಮತ್ತು ಆಧುನಿಕತೆಯ ನಡುನೀರಿನಲ್ಲಿದ್ದೇನೆ' ಎಂದು ಸಂದರ್ಶನವೊಂದರಲ್ಲಿ ಬನ್ನಂಜೆಯವರೇ ಹೇಳಿದ್ದಾರೆಂದು ರಂಗಕರ್ಮಿ ಕೆ.ವಿ. ಅಕ್ಷರ ತಿಳಿಸಿದರು.

ನಗರದ ಕುಮಾರಸ್ವಾಮಿ ಬಡಾವಣೆಯ ದಯಾನಂದಸಾಗರ ಕಾಲೇಜಿನಲ್ಲಿ ನಡೆಯುತ್ತಿರುವ `ಬನ್ನಂಜೆ 80ರ ಸಂಭ್ರಮ' ಸಮಾರಂಭದಲ್ಲಿ ಬನ್ನಂಜೆ ಸಾಹಿತ್ಯ ವಿಮರ್ಶೆ ಮತ್ತು ಕವಿತೆಯ ಓದು ಕುರಿತು ಮಾತನಾಡಿ, ಪ್ರಸ್ತುತ 21ನೇ ಶತಮಾನದಲ್ಲಿ ಬ್ರಾಹ್ಮಣ್ಯ ಲಾಂಛನಗಳ ಪ್ರದರ್ಶನ ಅತಿರೇಕಕ್ಕೆ ಹೋಗಿದೆ. ಮುದ್ರೆ ಹಾಕುವುದು ಮಾತ್ರವಲ್ಲ, ಇದಕ್ಕೂ ಮೊದಲು ಸಂಪ್ರದಾಯದ ಅನುಸಂಧಾನ ಕುರಿತು ತಿಳಿಯಬೇಕಿದೆ ಎಂದು ಹೇಳಿದರು.

ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕಾವಿಧಾರಿಗೆ ಹೋಲಿಸಲು ಸಾಧ್ಯವಿಲ್ಲ. ಅವರೊಬ್ಬ ದೊಡ್ಡ ಕ್ರಾಂತಿಕಾರಿ. ಈ ಕಾಲಕ್ಕೆ ಸ್ಪಂದಿಸುತ್ತಿರುವ ರೀತಿ ಹೊಸತನದಿಂದ ಕೂಡಿದೆ. ಪರಂಪರೆಯನ್ನು ನವೀಕರಿಸಿದಂತೆ ನಾವು ಬನ್ನಂಜೆಯವರ ನವೀಕರಣವನ್ನು ತುರ್ತಾಗಿ ಮಾಡಬೇಕಿದೆ ಎಂದು ಹೇಳಿದರು.

ಸಂಸ್ಕೃತ ಬ್ರಾಹ್ಮಣ ಭಾಷೆಯಲ್ಲ: ಸಂಸ್ಕೃತ ಎಂಬುದು ಬ್ರಾಹ್ಮಣ ಭಾಷೆ, ವರ್ಣ ವ್ಯವಸ್ಥೆ ಸಮರ್ಥನೆ ಮಾಡುವ ಭಾಷೆ ಎಂಬ ಕಲ್ಪನೆ ಪ್ರಚಲಿತವಾಗಿದೆ. ಸಂಸ್ಕೃತ ಮಾತ್ರವಲ್ಲ ಯಾವುದೇ ಭಾಷೆಗೂ ಜಾತಿ ಎಂಬುದಿಲ್ಲ. ಸಂಸ್ಕೃತದ ಲೌಕಿಕ ಬಾಗಿಲನ್ನು ತೆರೆಯಬೇಕಿದೆ. ಯಾವ ಸಂಸ್ಕೃತ ಬದಲಾಗುವುದಿಲ್ಲ ಎಂದು ತಿಳಿದಿದ್ದೇವೆಯೋ ಅದರೊಳಗೆ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತೇವೆ. ಜಡ ಭಾಷೆ ಎಂದು ತಿಳಿದಿರುವ ಸಂಸ್ಕೃತಕ್ಕೆ ಹೊಸ ಜೀವ ನೀಡಲು ಬನ್ನಂಜೆಯವರು ಬಹಳ ಮುಖ್ಯ. ಸಾಸ್ತಿಕರನ್ನು ಅಸಂಖ್ಯಾತ ಉಪನ್ಯಾಸಗಳಿಂದ ಹೊಸದಾರಿಗೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬನ್ನಂಜೆ ಅವರನ್ನು ಬರೀ ಹೊಗಳಿಕೆ ಮಾತ್ರವಲ್ಲ. ಪರಂಪರೆಗೆ ಅವರು ಮಾಡಿದ ಹೊರಾಟವನ್ನು ಅರಿಯಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.

ವಿದ್ವಾಂಸರಾದ ಎಸ್.ಆರ್. ಲೀಲಾ ಮಾತನಾಡಿ, ಒಂದು ಭಾಷೆಯ ಸೊಗಸನ್ನು ಅಷ್ಟೇ ಸುಂದರವಾಗಿ ಅನುವಾದದಲ್ಲಿ ಕಟ್ಟಿಕೊಡುವುದು ಬಹಳ ಕಷ್ಟ. ಭಾಷೆಗೆ ಅದರದೇ ಆದ ಇನಿ, ದನಿ, ಬನಿಗಳಿರುತ್ತವೆ. ಬನ್ನಂಜೆಯವರ ಅನುವಾದದಲ್ಲಿ ಚೆಲುವು, ಮುದ್ದು, ಸೊಗಸಿದೆ. ಅನುವಾದಕರು ಭಾರತೀಯ ಸಂಸ್ಕೃತಿಯ ನೆಲೆಗಟ್ಟುಗಳೇನು ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಮಾತನಾಡಿ, ಮಹಾಭಾರತ ಮತ್ತು ಭಗವದ್ಗೀತೆ ನಮ್ಮೊಳಗಿನ ಲಕ್ಷಣಗಳನ್ನು ಬಿಂಬಿಸಿವೆ. ಆಸ್ತಿ ಲಪಟಾಯಿಸುವುದು, ಸಿuಉೀ ದೌರ್ಜನ್ಯ, ಸಜ್ಜನಿಕೆಯ ಮುಖವಾಡ, ಪರಸ್ಪರ ಸಂಘರ್ಷ, ಧರ್ಮ- ಅಧರ್ಮ, ಒಳ್ಳೆಯದು-ಕೆಟ್ಟದ್ದು ಎಲ್ಲವೂ ನಮ್ಮೊಳಗಿನ ಲಕ್ಷಣಗಳೇ ಆಗಿವೆ. ಇವುಗಳನ್ನು ಧೈರ್ಯವೆಂಬ ಸಾರಥಿಯÁಗಿ ಎದುರಿಸಬೇಕಿದೆ ಎಂದರು.

ಸಾರ್ವಕಾಲಿಕ ಸತ್ಯವಲ್ಲ:

ವಿಮರ್ಶಕ ಮುರಳೀ ಧರ ಉಪಾಧ್ಯ ಮಾತನಾಡಿ ಧರ್ಮಶಾಸ್ತ್ರಗಳು, ಸ್ಮೃತಿಗಳು ಆಯಾ ಕಾಲದ ಪುಸ್ತಕಗಳಷ್ಟೇ, ಸಾರ್ವ ಕಾಲಿಕ ಸತ್ಯವಲ್ಲ. ಅವುಗಳು ಒಂದು ರೀತಿಯ ಮನೆಗಳಿದ್ದಂತೆ, ಆಗಿಂದಾಗ್ಗೆ ರಿಪೇರಿ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮೇಲೆಯೇ ಮುರಿದು ಬೀಳುತ್ತವೆ ಎಂದು ಸೂಕ್ಷ್ಮವಾಗಿ ಹೇಳಿದರು. ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಮಾತನಾಡಿ, ಶಾಸ್ತ್ರೀಯ ಗ್ರಂಥಗಳಲ್ಲಿ ಭಾಷೆಯ ಕಾಲಾತೀತತೆ ಕಾಣಬಹುದು. ಬನ್ನಂಜೆಯವರ ಗ್ರಂಥಗಳಲ್ಲಿ ಅಪೂರ್ವವಾದ ಕ್ರಿಯಾಪದಗಳ ಬಳಕೆ ಕಂಡುಬರುತ್ತದೆ. ಹಳೆ ಮೈಸೂರು ಭಾಗದಲ್ಲಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಉತ್ತರ ಕರ್ನಾಟಕದಲ್ಲಿ ಬೇಂದ್ರೆಯವರ ರೀತಿ ಬನ್ನಂಜೆಯವರು ಅಪ್ಪಟ ಕನ್ನಡತನದಲ್ಲಿ ತಮ್ಮದೇ ಶೈಲಿ, ಹೊಳಪನ್ನು ಮೂಡಿಸಿದ್ದಾರೆ.

ಅನುವಾದದಲ್ಲಿ ಸಂಸ್ಕೃತದ ಶ್ಲೇಷಗಳನ್ನು ಬಿಟ್ಟಿದ್ದು, ಸಂಗ್ರಹ ಗ್ರಂಥ ವಾಗಿ ಅನುವಾದ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ಕೆಲವರು ಕನ್ನಡದ ಮಹಾಪ್ರಾಣವನ್ನು ತೆಗೆಯಲು ಹೊರಟಿದ್ದಾರೆ. ಈ ಮೂಲಕ ಕನ್ನಡದ ಪ್ರಾಣವನ್ನೇ ತೆಗೆಯಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್. ಡುಂಡಿರಾಜ್, ಸಾಹಿತಿಗಳಾದ ಸುಮತೀಂದ್ರ ನಾಡಿಗ್, ಮಮತಾ ಸಾಗರ ಅವರು ತಮ್ಮ ಹಾಗೂ ಬನ್ನಂಜೆ ಗೋವಿಂದಾಚಾರ್ಯರ ಕವಿತೆಗಳನ್ನು ವಾಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com