31 ಪೊಲೀಸ್ ಅಧಿಕಾರಿಗಳು ವರ್ಗ

ರಾಜ್ಯ ಪೊಲೀಸ್ ಇಲಾಖೆಗೆ ಸತೀಶ್ ಜಾರಕಿಹೊಳಿ ಎಫೆಕ್ಟ್ ತಟ್ಟಿದೆ. ಪರಿಣಾಮ ಡಿವೈಎಸ್ಪಿ...
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಸತೀಶ್ ಜಾರಕಿಹೊಳಿ ಎಫೆಕ್ಟ್ ತಟ್ಟಿದೆ. ಪರಿಣಾಮ ಡಿವೈಎಸ್ಪಿ ಹಾಗೂ ಇನ್ಸ್‍ಪೆಕ್ಟರ್ ಸೇರಿ ಒಟ್ಟು 31 ಅಧಿಕಾರಿಗಳಿಗೆ ವರ್ಗಾವಣೆ ಬಿಸಿ ಮುಟ್ಟಿಸಲಾಗಿದೆ. ಮಂಗಳವಾರ ರಾಜ್ಯ ಸರ್ಕಾರದಿಂದ ಈ ಆದೇಶ ಹೊರಬಿದ್ದಿದ್ದು, ಬೆಳಗಾವಿ ನಗರದ 10 ಇನ್ಸ್‍ಪೆಕ್ಟರ್‍ಗಳೂ ಈ ಎತ್ತಂಗಡಿ ಪಟ್ಟಿಯಲ್ಲಿದ್ದಾರೆ.

ವರ್ಗವಾದ ಡಿವೈಎಸ್ಪಿಗಳು
ಎಚ್.ಕೆ. ರಮೇಶ್ ಕುಮಾರ್ (ಸಿಐಡಿ), ಆರ್.ಆರ್. ಕಲ್ಯಾಣ ಶೆಟ್ಟಿ ದಕ್ಷಿಣ ಉಪ-ವಿಭಾಗ ಮಂಗಳೂರು ನಗರ, ಬಸವನಗೌಡ ಪಾಟೀಲ್ ದಕ್ಷಿಣ ಉಪ- ವಿಭಾಗ ಹುಬ್ಬಳ್ಳಿ-ಧಾರವಾಡ, ಉಮೇಶ್ ಗಣಪತಿ ಸೇಠ್ ನರಸಿಂಹರಾಜ ಉಪ-ವಿಭಾಗ ಮೈಸೂರು.

ಬಿ.ಟಿ. ಕವಿತಾ ಕೆಪಿಎ ಮೈಸೂರು, ಎಸ್. ಎಚ್.ದುಗ್ಗಪ್ಪ- ಏರ್‍ಪೋರ್ಟ್ ಉಪ-ವಿಭಾಗ ಬೆಂಗಳೂರು, ಎನ್.ಎಚ್. ಸಿದ್ದಪ್ಪ ಜೆ.ಸಿ. ನಗರ ಉಪ-ವಿಭಾಗ, ಟಿ.ಡಿ. ದುರ್ಗಯ್ಯ (ಸಿಐಡಿ), ಎನ್.ಟಿ.ಪ್ರಮೋದ್ ರಾವ್ ಡಿಜಿಪಿ ಕಚೇರಿ ಬೆಂಗಳೂರು, ವಿ.ಧನಂಜಯ ಚನ್ನಪಟ್ಟಣ ಉಪ-ವಿಭಾಗ, ಎ.ಬಿ.ಹರಪ್ಪನಹಳ್ಳಿ ಲೋಕಾಯುಕ್ತ, ಇರ್ಷಾದ್ ಅಹಮದ್ ಖಾನ್ ಹೈಕೋರ್ಟ್ ವಿಚಕ್ಷಣಾ ದಳ, ಪವನ್ ನೆಜ್ಜುರ್ ತಿಪಟೂರು ಉಪ-ವಿಭಾಗ.

ಇನ್ಸ್‍ಪೆಕ್ಟರ್‍ಗಳ ಪಟ್ಟಿ
ಮಹತೇಂಶ್ ಈರಪ್ಪ ಸಜ್ಜನ್ ಪಿಟಿಎಸ್ ಕುಂದಾಪುರ, ಎಂ. ಎನ್.ಕರಿಬಸವನಗೌಡ ಪಿಟಿಎಸ್ ಖಾನಾಪುರ, ಮಹಮ್ಮದ್ ಸಿರಾಜ್ ಬೆಳಗಾವಿ ದಕ್ಷಿಣ ಸಂಚಾರ ಠಾಣೆ, ಶರಣಗೌಡ
ಎಂ.ನ್ಯಾಮಣ್ಣನವರ್ ಸಿಸಿಆರ್‍ಬಿ ಬೆಳಗಾವಿ ನಗರ, ಜ್ಯೋತಿರ್ಲಿಂಗ ಹೊನಕಟ್ಟಿ ಮಲಮಾರುತಿ ಠಾಣೆ ಬೆಳಗಾವಿ ನಗರ, ಸುನೀಲ್ ಅಣ್ಣಪ್ಪ ಸವದಿ ಮಾರಿಹಾಳ ಠಾಣೆ ಬೆಳಗಾವಿ, ಭೀಮನಗೌಡ ಎ.ಬಿರಾದಾರ್ ಶಹಪುರ ಠಾಣೆ ಬೆಳಗಾವಿ ನಗರ, ಬಾವುಸಾಬ್ ಅನಂತರಾವ್ ಜಾದವ್ ತಿಲಕವಾಡಿ ಬೆಳಗಾವಿ ನಗರ, ನಿರಂಜನ ಮಹದೇವ ಪಾಟೀಲ್ ಉದಯಂಬಾಗಿ ಬೆಳಗಾವಿ ನಗರ.

ನವೀನ್ ಕುಲಕರ್ಣಿ ಎಸ್‍ಬಿ ಬೆಂಗಳೂರು, ಎಂ. ನಾರಾಯಣಪ್ಪ ಜಿಲ್ಲಾ ವಿಶೇಷ ಶಾಖೆ ಕಲುಬುರಗಿ ಜಿಲ್ಲೆ, ಎಂ.ಎಂ.ಪ್ರಶಾಂತ್ ಕಾಡುಗೋಡಿ ಠಾಣೆ, ಕೆ.ಜಿ.ಸತೀಶ ಕೊಡಿಗೇನಹಳ್ಳಿ ಠಾಣೆ, ಎಚ್.ಕೆ.ಮಹಾನಂದ ರಾಜಾಜಿನಗರ ಠಾಣೆ, ಹರಿಶ್ಚಂದ್ರ ನಗರ ವಿಶೇಷ ಶಾಖೆ ಬೆಳಗಾವಿ, ಯಳಿಗಾರ್ ಬೆಸ್ಕಾಂ ವಿಜಯಪುರ, ದುದಪ್ಪ ಚಂದ್ರಪ್ಪ ಲಕ್ಕಣ್ಣನವರ್, ನಾಗರಿಕ ಹಕ್ಕು ನಿರ್ದೇ ಶನಾಲಯ, ಎನ್.ಗೋಪಾಲ ನಾಯ್ಕ್ ಸಿಸಿಬಿಬೆಂಗಳೂರು.ಬೆಳಗಾವಿ ನಗರದಲ್ಲಿನ 10 ಇನ್ಸ್‍ಪೆಕ್ಟರ್ ಗಳ ವರ್ಗಕ್ಕೆ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾರಣ ಎನ್ನಲಾಗಿದ್ದು, ಅವರ ಸೂಚನೆಯಂತೆಂಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com