ತಪ್ಪೊಪ್ಪಿಕೊಂಡ ಶಂಕಿತ ಉಗ್ರ

ಐಎಂ ಉಗ್ರರ ಜತೆ ನೇರ ಸಂಪರ್ಕ ಹೊಂದಿದ್ದೆ. ವಿದೇಶದಲ್ಲಿರುವ ಉಗ್ರ ಮುಖಂಡರ ಸೂಚನೆಯಂತೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರ (ಸಾಂದರ್ಭಿಕ ಚಿತ್ರ)
ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಭಟ್ಕಳದ ನಾಲ್ವರು ಶಂಕಿತ ಉಗ್ರರ ಪೈಕಿ ಪ್ರಮುಖ ಆರೋಪಿ, ಯುನಾನಿ ವೈದ್ಯ ಇಸ್ಮಾಯಿಲ್ ಅಫಕ್ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಮಂಗಳವಾರ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಲ್ವರನ್ನೂ 49ನೇ ಸಿಟಿ ಸಿವಿಲ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಅಫಕ್, ಐಎಂ ಉಗ್ರರ ಜತೆ ನೇರ ಸಂಪರ್ಕ ಹೊಂದಿದ್ದೆ. ವಿದೇಶದಲ್ಲಿರುವ ಉಗ್ರ ಮುಖಂಡರ ಸೂಚನೆಯಂತೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದೇಶದಲ್ಲಿರುವ ನಾಯಕರ ಸೂಚನೆಯಂತೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಸಾಫ್ಟ್ ವೇರ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ  ಕುಮಕ್ಕು ನೀಡಲು ಪ್ರಯತ್ನಿಸಿದ್ದೆ. ಜತೆಗೆ ಬೇರೆ ಬೇರೆ ರಾಜ್ಯಗಳಿಂದ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ, ದಾಸ್ತಾನು ಮಾಡಿ ಬಾಂಬ್ ತಯÁರಿಸಿ ಪೂರೈಸುತ್ತಿದ್ದೆ ಎಂದೂ ಅಫಕ್ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹವಾಲಾ ಮೂಲಕ ಹಣ ಪೂರೈಕೆಯಾಗುತ್ತಿತ್ತು ಎಂದು ಬಹಿರಂಗಗೊಳಿಸಿರುವ ಆತ, ತನ್ನ ಕೃತ್ಯಗಳನ್ನು ಸ್ವಇಚ್ಛೆಯಿಂದ ಒಪ್ಪಿಕೊಂಡಿರುವುದಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ. ಶಂಕಿತ ಉಗ್ರರಾದ ಎಂಬಿಎ ವಿದ್ಯಾರ್ಥಿ ಅಬ್ದುಸ್ ಸಬೂರ್, ಗುಜರಿ ವ್ಯಾಪಾರಿ ಸದ್ದಾಂ ಉಸೇನ್ ಮತ್ತು ರಿಯಾಜ್ ಸೈಯಿದಿ ಸಹ ತಪ್ಪೊಪ್ಪಿಕೊಳ್ಳಲು ಸಿದ್ದರಿದ್ದಾರೆ ಎಂದು ಹೇಳಲಾಗಿದೆ.

ಜ.8ರಂದು ಬೆಂಗಳೂರು ಹಾಗೂ ಭಟ್ಕಳದಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು, ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಜ.11ರಂದು ದುಬೈಗೆ ತೆರಳುತ್ತಿದ್ದ ರಿಯಾಜ್ ಸೈಯಿದಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com