ಪ್ಯಾರ ಮಿಲಿಟರಿ ಪಡೆ
ಜಿಲ್ಲಾ ಸುದ್ದಿ
ನಾಳೆ ವಿರಾಟ ಹಿಂದು ಸಮಾಜೋತ್ಸವ: ಪ್ಯಾರ ಮಿಲಿಟರಿಯಿಂದ ಪಥ ಸಂಚಲನ
ಬೆಂಗಳೂರು: ನಾಳೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ವಿರಾಟ ಹಿಂದು ಸಮಾಜೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಶನಿವಾರ ಪ್ಯಾರ ಮಿಲಿಟರಿ ಪಡೆ ಪಥ ಸಂಚಲನ ನಡೆಸಿತು.
ವಿರಾಟ ಹಿಂದು ಸಮಾಜೋತ್ಸವ ಹಿನ್ನೆಲೆಯಲ್ಲಿ ಬಸವನಗುಡಿ ಸುತ್ತ ಮುತ್ತ ಪ್ಯಾರ ಮಿಲಿಟರಿ ಪಡೆ, ಅಶ್ವ ದಳ. ಅಶ್ರುವಾಯು ದಳ, ಬೆಂಗಳೂರು ಪೊಲೀಸರು ಸೇರಿದಂತೆ 250 ಕ್ಕೂ ಮಂದಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹಿಂದುಗಳು ಸೇರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ಏತನ್ಮಧ್ಯೆ ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಅವರು ಮುಖ್ಯ ಅತಿಥಿಯಾಗಿ ಭಾಷಣ ಮಾಡಬೇಕಿತ್ತು. ಆದರೆ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಹೇಳಿಕೆಗಳು ನೀಡುವ ಸಾಧ್ಯತೆ ಇದ್ದು, ಅವರಿಗೆ ಬೆಂಗಳೂರು ನಗರ ಪ್ರವೇಶ ನಿಷೇಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ