ಹಿಂದು ಸಮಾಜೋತ್ಸವ: ತೊಗಾಡಿಯಾರ ಮುದ್ರಿತ ಭಾಷಣ ಪ್ರಸಾರ

ಹಿಂದೂ ಸಮಾಜೋತ್ಸವ ಸಮಾರಂಭಕ್ಕೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ಬಾಯಿ ತೊಗಾಡಿಯಾ ಅವರಿಗೆ ನಗರ ಪ್ರವೇಶ ನಿರ್ಬಂಧ ಹಾಗೂ ವಿಡಿಯೋ ಕಾನ್ಫರೆನ್ಸ್ ಭಾಷಣ...
ಹಿಂದೂ ಸಮಾಜೋತ್ಸವ
ಹಿಂದೂ ಸಮಾಜೋತ್ಸವ

ಬೆಂಗಳೂರು: ಹಿಂದೂ ಸಮಾಜೋತ್ಸವ ಸಮಾರಂಭಕ್ಕೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ಬಾಯಿ ತೊಗಾಡಿಯಾ ಅವರಿಗೆ ನಗರ ಪ್ರವೇಶ ನಿರ್ಬಂಧ ಹಾಗೂ ವಿಡಿಯೋ ಕಾನ್ಫರೆನ್ಸ್ ಭಾಷಣಕ್ಕೆ ನಿಷೇಧ ಹೇರಿದ್ದರು ಆಯೋಜಕರು ಮುದ್ರಿತ ಭಾಷಣವನ್ನು ಪ್ರಸಾರ ಮಾಡಿದ್ದಾರೆ.

ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಚೋದಾನಾತ್ಮಕ ಹೇಳಿಕೆ ನೀಡಬಹುದೆಂಬ ಕಾರಣದಿಂದ ತೊಗಾಡಿಯಾ ಅವರಿಗೆ ನಗರ ಪ್ರವೇಶ ಹಾಗೂ ವಿಡಿಯೋ ಕಾನ್ಫರನ್ಸ್ ಭಾಷಣಕ್ಕೆ ನಿರ್ಬಂಧ ಹೇರಲಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಯೋಜಕರು ತೊಗಾಡಿಯಾ ಅವರ 15 ನಿಮಿಷಗಳ ಮುದ್ರಿತ ಭಾಷಣದ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಮುದ್ರಿತ ಭಾಷಣ ಪ್ರಸಾರವನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಇದಕ್ಕೆ ಆಯೋಜಕರು ಬಗ್ಗದ ಕಾರಣ ಕಾನೂನು ತಜ್ಞರ ಸಲಹೆ ಪಡೆದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಪೇಜಾವರಶ್ರೀಗಳು ಸೇರಿದಂತೆ 50ಕ್ಕೂ ಅಧಿಕ ಸ್ವಾಮೀಜಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸೇರಿದಂತೆ ಅನೇಕ ಧರ್ಮದರ್ಶಿಗಳು, ಆರ್ ಅಶೋಕ್, ಅನಂತ್ ಕುಮಾರ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದಾರೆ.

ಮುದ್ರಿತ ಭಾಷಣದಲ್ಲಿನ ಮುಖ್ಯಾಂಶಗಳು

* ಘರ್ ವಾಪಸಿ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯುತ್ತದೆ.

* ಲವ್ ಜಿಹಾದ್ ತಡೆಯಬೇಕು.

* ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುವುವರನ್ನು ತಡೆಯಬೇಕು.

* ಭಾರತದಲ್ಲಿ ಎಂದೆಂದಿಗೂ ಹಿಂದುಗಳೇ ಸಾರ್ವಭೌಮರಾಗಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com