ನಗರದಲ್ಲಿ 3 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆ, ವಿಶೇಷ ಸಿಬ್ಬಂದಿ ನೇಮಕ

ಸಿಸಿ ಕ್ಯಾಮೆರಾ
ಸಿಸಿ ಕ್ಯಾಮೆರಾ
Updated on

ಬೆಂಗಳೂರು: ಮಹಿಳೆಯರ ಸುರಕ್ಷತೆ, ಭಯೋತ್ಪಾದಕ ಚಟುವಟಿಕೆಗಳು ಮತ್ತು ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ದಿನದ 24 ಗಂಟೆ ನಗರದ ಪ್ರಮುಖ ಪ್ರದೇಶಗಳ ಮೇಲೆ ನಿಗಾ ವಹಿಸಲು ವಿಶೇಷ ಸಿಬ್ಬಂದಿ ಜತೆಗೆ ಸುಮಾರು 3 ಸಾವಿರ ಸಿಸಿ ಕ್ಯಾಮೆರಗಳು ನಗರದ ಹಲವೆಡೆ ಅಳವಡಿಕೆ ಆಗಲಿವೆ.

ಪೊಲೀಸ್ ಇಲಾಖೆ ಆಧುನೀಕರಣ, ತಂತ್ರಜ್ಞಾನ ಅಳವಡಿಕೆಗಾಗಿ ಕೇಂದ್ರ ಸರ್ಕಾರ, ದೇಶದ 6 ಮಹಾನಗರಗಳನ್ನು ಸೇಫ್ ಸಿಟಿ ಯೋಜನೆಗೆ ಆಯ್ಕೆ ಮಾಡಿದೆ. ಬೆಂಗಳೂರು ಸೇರಿದಂತೆ ಹೈದರಾಬಾದ, ಚೆನ್ನೈ, ಅಹಮದಾಬಾದ್, ಕೋಲ್ಕತಾ ಮತ್ತು ಮುಂಬೈ ಮಹಾನಗರಗಳು ಇವೆ. ಪೊಲೀಸ್ ಇಲಾಖೆಯನ್ನು ಬಲಪಡಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದು ಈ ಯೋಜನೆಯ ಉದ್ದೇಶವಾಗಿದೆ.

ಸೇಫ್ ಸಿಟಿ ಯೋಜನೆಗೆ 2013-14 ಮತ್ತು 2014-15ರಲ್ಲಿ ರು. 83 ಕೋಟಿ ಅನುದಾನ ಲಭ್ಯವಾಗಿದೆ. ಅಗತ್ಯ ಇರುವ ಇನ್ನಷ್ಟು ಹಣವನ್ನು ರಾಜ್ಯ ಸರ್ಕಾರ ಭರಸಲಿದ್ದು ಸಿಸಿ ಕ್ಯಾಮೆರಾ. ವಿಶೇಷ ಸಿಬ್ಬಂದಿ ನೇಮಕ, ವಾಹನ ಖರೀದಿ ಮತ್ತು ಪ್ರತ್ಯೇಕ ನಿಯಂತ್ರಣ ಕೊಠಡಿ ನಿರ್ಮಾಣ ಮಾಡುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎಸ್ ರೆಡ್ಡಿ ಮಂಗಳವಾರ ತಿಳಿಸಿದರು.

3 ಸಾವಿರ ಸಿಸಿ ಕ್ಯಾಮೆರಾ: ನಗರದ ಹೃದಯ ಭಾಗದಿಂದ 5 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ 3 ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲು ರು. 83 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಕ್ಯಾಮೆರಾ ಅಳವಡಿಕೆ ಕುರಿತು ಸ್ಥಳ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 1 ಸಾವಿರ ಮತ್ತು 2ನೇ ಹಂತದಲ್ಲಿ 2 ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸಿಸಿ ಕ್ಯಾಮೆರಾಗಳ ನಿರ್ವಹಣೆಗೆ ಪ್ರತ್ಯೇಕ ನಿಯಂತ್ರಣ ಕೊಠಡಿ ನಿರ್ಮಿಸಲಾಗುತ್ತದೆ.

ಬಾಂಬ್ ಸ್ಕ್ಯಾನರ್ ಯಂತ್ರ ಖರೀದಿ: ವಿಶೇಷ ಸಂದರ್ಭಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳುವ ಸಲುವಾಗಿ ಬಾಂಬ್ ಸ್ಕ್ಯಾನರ್ ಯಂತ್ರ ಅವಶ್ಯಕತೆ ಇದೆ. ಈ ಕುರಿತು ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ವರದಿ ಬಂದ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

300 ಕಮಾಂಡೆಂಟ್ ನೇಮಕ
ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ಕೂಡಲೇ ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ತೆರಳಲು ಹಾಗೂ ಅಪರಾಧಿಗಳ ಮೇಲೆ ನಿಗಾ ವಹಿಸಲು ರಾಜ್ಯದಲ್ಲೇ ಮೊದಲ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಿಂದ 300 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇವರಿಗಾಗಿ 80 ವಾಹನಗಳು ಹಾಗೂ 160 ಬೈಕ್ ಖರೀದಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com