
ಬೆಂಗಳೂರು: ಹಾಪ್‍ಕಾಮ್ಸ್ ಅಭಿವೃದ್ದಿಗಾಗಿ ಈಗಾಗಲೇ ರು.5 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಹಣ ನೀಡಲು ಪ್ರಯತ್ನ ಪಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹೊರ ದೇಶಗಳಿಗೆ ರಫ್ತು ಮಾಡಲು ನಮ್ಮ ದೇಶದಲ್ಲಿ ವ್ಯವಸ್ಥೆ ಸರಿಯಿಲ್ಲ. ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಯಾಗಬೇಕಿದೆ ಎಂದು ಹಾಪ್‍ಕಾಮ್ಸ್ ಗುರುವಾರ ಹಮ್ಮಿಕೊಂಡಿದ್ದ ದ್ರಾಕ್ಷಿ- ಕಲ್ಲಂಗಡಿ ಮೇಳವನ್ನು ಉದ್ಘಾಟಿಸಿ ಅವರು ಹೇಳಿದರು. ಈ ಬಾರಿ 800 ಟನ್ ದ್ರಾಕ್ಷಿ ಹಾಗೂ 1 ಸಾವಿರ ಟನ್ ಕಲ್ಲಂಗಡಿ ಮಾರಾಟಕ್ಕೆ ಇಡಲಾಗಿದೆ. ತಿಂಗಳಿಗೆ 180ರಿಂದ
200 ರೈತರ ತೋಟಗಳಿಂದ ನೇರವಾಗಿ ಸಂಘದ ವತಿಯಿಂದ ಖರೀದಿ ಮಾಡಲಾಗುತ್ತದೆ. ಸ್ಥಳದಲ್ಲೇ ರೈತರಿಗೆ ಹಣ ಪಾವತಿಸಿ ಉತ್ತಮ ಧಾರಣೆ ಒದಗಿಸಿಕೊಡುವ ಅವಕಾಶ
ಕಲ್ಪಿಸಲಾಗಿದೆ ಎಂದು ಹಾಪ್‍ಕಾಮ್ಸ್ ಅಧ್ಯಕ್ಷ ನಾಗವೇಣಿ ಹೇಳಿದರು.
ಬೆಂಗಳೂರು ನೀಲಿ, ಶರದ್, ಸೀಡ್‍ಲೆಸ್, ಕೃಷ್ಣ ಶರದ್, ಫ್ಲೇಮ್ ಸೀಡ್‍ಲೆಸ್, ಥಾಮ್ಸನ್ ಸೀಡ್‍ಲೆಸ್, ಸೊನಾಕ, ತಾಜ್ ಗಣೇಶ್, ಇಂಡಿಯನ್ ರೆಡ್‍ಗ್ಲೋಬ್, ಇಂಡಿಯನ್ ಬ್ಲಾಕ್ ಗ್ಲೋಬ್, ಕ್ರಿಸ್‍ಸನ್ ಸೀಡ್‍ಲೆಸ್ ಮುಂತಾದ ತಳಿಗಳು ಶೇ. 10ರಷ್ಟು ರಿಯಾಯಿತಿಯಲ್ಲಿ ಕೆಜಿಗೆ ರು.30ರಿಂದ ರು.105 ದರದಲ್ಲಿ ಲಭ್ಯವಿದೆ. ನಾಮಧಾರಿ ಕಲ್ಲಂಗಡಿ 1 ಕೆಜಿಗೆ ರು.14 ಹಾಗೂ ಕಿರಣ್ ರು.1ರಂತೆ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಲಭ್ಯವಿದೆ.
ಬಿಬಿಎಂಪಿ ಸದಸ್ಯ ಗೋಪಿ, ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಕದರೇಗೌಡ, ಹಾಪ್‍ಕಾಮ್ಸ್ ಉಪಾಧ್ಯಕ್ಷ ಚಂದ್ರೇಗೌಡ ಹಾಜರಿದ್ದರು.
Advertisement