ಏರೋ ಇಂಡಿಯಾ: ವಿಮಾನಗಳ ನಡುವೆ ಡಿಕ್ಕಿ, ತಪ್ಪಿದ ಭಾರಿ ಅನಾಹುತ

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆ ವೇಳೆ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ವಿಮಾನಗಳ ನಡುವೆ ಡಿಕ್ಕಿ
ವಿಮಾನಗಳ ನಡುವೆ ಡಿಕ್ಕಿ

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆ ವೇಳೆ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ಎರಡನೇ ದಿನವಾದ ಇಂದು ವೈಮಾನಿಕ ಪ್ರದರ್ಶನ ನಡೆಯುತ್ತಿತ್ತು. ವಿಮಾನ ಹಾರಾಟವನ್ನು ಕಣ್ತುಂಬಿಕೊಳ್ಳಲು ವಾಯುನೆಲೆಯಲ್ಲಿ ಗಣ್ಯರು, ವಿವಿಐಪಿಗಳು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ರೆಡ್ ಬುಲ್ನ ಎರಡು ವಿಮಾನಗಳು ಪ್ರದರ್ಶನ ನೀಡುತ್ತದ್ದು, ವಿಮಾನಗಳು ಎರಡು ವಿರುದ್ಧ ದಿಕ್ಕಿಗೆ ಸಾಗುವಾಗ ವಿಮಾನಗಳ ನಡುವೆ ಘರ್ಷಣೆಯಾಗಿದೆ. ಪರಿಣಾಮ ಒಂದು ವಿಮಾನ ರೆಕ್ಕೆ ಪುಡಿಪುಡಿಯಾಗಿದೆ. ವಿಮಾನಗಳ ನಡುವಿನ ಘರ್ಷಣೆಯಿಂದಾಗಿ ತಾತ್ಕಾಲಿಕವಾಗಿ ಪ್ರದರ್ಶನವನ್ನು ನಿಲ್ಲಿಸಲಾಗಿದ್ದು, ತಂತ್ರಜ್ಞರು ಪರಿಶೀಲನೆ ನಡೆಸಿದರು.

ಪೈಲಟ್ ಸಮಯಪ್ರಜ್ಞೆ ತಪ್ಪಿದ ಭಾರಿ ದುರಂತ

ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ರೆಕ್ಕೆ ಪುಡಿಪುಡಿಯಾಗಿರುವುದರಿಂದ ಎಚ್ಚೇತ್ತ ವಿಮಾನದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು, ಯಾರಿಗೂ ಅಪಾಯವಾಗಿಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com