ನಗರದಲ್ಲಿ ನಿಜವಾದ 'ಕ್ಯಾಟ್‌ವಾಕ್‌'

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯಕರ್ತೆ ತಾನು ಸಾಕಿದ ಪರ್ಷಿಯನ್ ಮತ್ತು ಒರಿಯಂಟಲ್ ತಳಿಯ ಬೆಕ್ಕುಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯಕರ್ತೆ ತಾನು ಸಾಕಿದ ಪರ್ಷಿಯನ್ ಮತ್ತು ಒರಿಯಂಟಲ್ ತಳಿಯ ಬೆಕ್ಕುಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಸಿಲಕಾನ್ ಸಿಟಿ, ಈಗ ಅಂತಾರಾಷ್ಟ್ರೀಯ ಮಾರ್ಜಾಲ ಪ್ರದರ್ಶನಕ್ಕೆ ಸಿದ್ಧಗೊಂಡಿದೆ.

ಇಂಡಿಯನ್ ಕ್ಯಾಟ್ ಫೆಡರೇಷನ್ ಮತ್ತು ಮಿಡ್ಲ್ ಈಸ್ಟ್ ಕ್ಯಾಟ್ ಸೊಸೈಟಿ ವತಿಯಿಂದ ಫೆ.21 ಮತ್ತು 22ರಂದು ನಗರದ ವುಡ್‌ಲ್ಯಾಂಡ್ ಹೋಟೆಲ್ ಆವರಣದಲ್ಲಿ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಆಯೋಜಿಸಿದ್ದು, ಆಸಕ್ತರು ಆನ್‌ಲೈನ್ ಮೂಲಕ ಮುಂಚಿತವಾಗಿಯೇ ಹೆಸರು ನೋಂದಾಯಿಸುವಂತೆ ಮನವಿ ಮಾಡಲಾಗಿದೆ.

ಮುಂಬೈ ಮತ್ತು ಹೈದರಾಬಾದ್ ನಂತರ ಬೆಂಗಳೂರಿನಲ್ಲಿ ಇಂಥ ಪ್ರದರ್ಶನ ಆಯೋಜಿಸಲಾಗಿದ್ದು, ಇದು 3ನೇ ಅಂತಾರಾಷ್ಟ್ರೀಯ ಮಾರ್ಜಾಲ ಪ್ರದರ್ಶನ. ಭಾರತದಲ್ಲಿರುವ ಮಾರ್ಜಾಲ ತಳಿ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಈ ಪ್ರದರ್ಶನದ ಪ್ರಮುಖ ಆಶಯವಾಗಿದೆ ಎಂದು ಇಂಡಿಯನ್ ಕ್ಯಾಟ್ ಫೆಡರೇಷನ್ ಅಧ್ಯಕ್ಷ ನಾಯಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಕ್ಕುಗಳ ವಿವಿಧ ತಳಿಗಳ ಪೈಕಿ ಸ್ಥಳೀಯವಾಗಿ ಅರೇಬಿಯನ್ ಮೂಲದ ಬಿಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜತೆಗೆ ಪರ್ಷಿಯನ್, ಒರಿಯಂಟಲ್ ತಳಿಗಳು ಸೇರಿದಂತೆ 15ಕ್ಕೂ ಹೆಚ್ಚು ಜಾತಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದು ಅವರು ಹೇಳಿದರು.

ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗಾಗಿ www. indiancatfederation.org ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com