ವರ್ಗಾವಣೆಯಿಂದ ನೊಂದು ಆತ್ಮಹತ್ಯೆ

ತಾನು ಕೆಲಸ ಮಾಡುತ್ತಿದ್ದ ಕಚೇರಿಯಿಂದ ಬೇರೆ ಕಚೇರಿಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ...
ವರ್ಗಾವಣೆಯಿಂದ ನೊಂದು ಆತ್ಮಹತ್ಯೆ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಚೇರಿಯಿಂದ ಬೇರೆ ಕಚೇರಿಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಬಿ.ನಾಗಸಂದ್ರ ನಿವಾಸಿ ವಿನೋದ್ ತಿರ್ಕೈ(25) ಮೃತರು. ಪಶ್ಚಿಮ ಬಂಗಾಳ ಮೂಲದ ಇವರು, ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಂದಿರಾ ನಗರದ ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಫೆ.4ರಂದು ಪತ್ನಿ ಎಲಿಜಬತ್ ಜತೆ ಊರಿಗೆ ಹೋಗಿ, ಶನಿವಾರ ಕೆಲಸಕ್ಕೆ ಹಿಂತಿರುಗಿದ್ದರು.

ಊರಿಗೆ ಹೋಗುವ ಮುನ್ನ ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಿಳಿಸಿ ರಜೆ ಪಡೆದಿರಲಿಲ್ಲ. ಹಾಗಾಗಿ ಇಂದಿರಾನಗರದ ಕಚೇರಿಯಿಂದ ರಿಚ್ಮಂಡ್ ವೃತ್ತದ ಬಳಿ ಇರುವ ಬೇರೆ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಅದನ್ನು ತಿಳಿದ ಆತ ಕೆಲಸಕ್ಕೆ ಹಾಜರಾಗದೆ ಮನೆಗೆ ಹಿಂತಿರುಗಿದ್ದಾನೆ. ರಾತ್ರಿ ಪತ್ನಿ ಮನೆಗೆ ಬಂದ ನಂತರ ವಿಷಯ ತಿಳಿಸಿದ್ದಾನೆ. ನಂತರ ಊಟ ಮಾಡುವಂತೆ ಆಕೆ ಸೂಚಿಸಿದರೂ ನಿರಾಕರಿಸಿದ ಆತ ಪತ್ನಿಯನ್ನು ಮನೆಯಿಂದ ಹೊರಗೆ ತಳ್ಳಿದ್ದಾನೆ. ಬಾಗಿಲು ತೆಗೆಯದ ಕಾರಣ ಪತಿ ಸಮಾಧಾನಗೊಳ್ಳಲಿ ಎಂದು ಮನೆಯ ಹೊರಗೆ ಕಾಯುತ್ತಾ ಕುಳಿತಿದ್ದ ಆಕೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಾಗಿಲು ತೆರೆಯಲು ಯತ್ನಿಸಿದಾಗ ಒಳಗಿನಿಂದ ಬೋಲ್ಟ್ ಹಾಕಲಾಗಿತ್ತು. ನಂತರ ನೆರೆಮನೆಯವರ ಸಹಾಯದಿಂದ ಬಾಗಿಲು ತೆಗೆದು ಒಳಹೋಗಿ ನೋಡಿದಾಗ ಆತ ನೇಣಿಗೆ ಶರಣಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com