ತಾಳಿ ಕಟ್ಟಿಸಿಕೊಳ್ಳುವ ಕೊನೆಗಳಿಗೆಯಲ್ಲಿ ವಧು ಪರಾರಿ

ತಾಳಿ ಕಟ್ಟಿಸಿಕೊಳ್ಳುವ ಕೊನೆಗಳಿಗೆಯಲ್ಲಿ ವಧುವೊಬ್ಬಳು ತನ್ನ ಪ್ರಿಯಕರನ ಜತೆ ಪರಾರಿಯಾಗಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯ ವಿಜಯಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಾಳಿ ಕಟ್ಟಿಸಿಕೊಳ್ಳುವ ಕೊನೆಗಳಿಗೆಯಲ್ಲಿ ವಧುವೊಬ್ಬಳು ತನ್ನ ಪ್ರಿಯಕರನ ಜತೆ ಪರಾರಿಯಾಗಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯ ವಿಜಯಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಪೂರ್ಣಿಮಾ(ಬಿಂದು) ಪ್ರಿಯಕರ ರಘು ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ. ಲಗ್ಗೆರೆ ನಿವಾಸಿಯಾದ ಪೂರ್ಣಿಮಾಗೆ ಸುಂಕದಕಟ್ಟೆ ನಿವಾಸಿ ಪ್ರಸಾದ್ ಜತೆ ನಾಲ್ಕು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಭಾನುವಾರ ಆರತಕ್ಷತೆ ನಡೆದಿತ್ತು. ಸೋಮವಾರ ಧಾರಾಮುಹೂರ್ತ ನಡೆಯಬೇಕಿತ್ತು. ಆದರೆ, ಕೊನೆ ಗಳಿಗೆಯಲ್ಲಿ ವಧು ಪರಾರಿಯಾಗಿದ್ದಾಳೆ. ಆರತಕ್ಷತೆ ನಂತರ ಅರಿಶಿನ ಶಾಸuಉಗಳನ್ನು ನಡೆಸಲು ಸಿದಟಛಿತೆ ನಡೆಸಿದ್ದರು. ಈ ವೇಳೆ ಯುವತಿ ಆಭರಣ ಹಾಗೂ ಬಟ್ಟೆ ಬದಲಿಸುವ ನೆಪದಲ್ಲಿ ಕೊಠಡಿಗೆ ಹೋಗಿದ್ದಾಳೆ.

ನಂತರ ಹೊಟ್ಟೆ ನೋವು ಎಂದು ಶೌಚಾಲಯಕ್ಕೆ ಹೋಗಿ, ತನಗೆ ಹಾಕಿದ್ದ ಒಡವೆಗಳನ್ನೆಲ್ಲಾ ತೆಗೆದಿಟ್ಟು, ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾಳೆ. ಲಗ್ಗೆರೆ ನಿವಾಸಿಯಾದ ಪ್ರಿಯಕರ ರಘು ಆಟೋ ಚಾಲಕನಾಗಿದ್ದು, ಆಕೆಗಾಗಿ ಕಲ್ಯಾಣ ಮಂಟಪದ ಬಳಿ ಆಟೋದಲ್ಲಿ ಕಾಯುತ್ತಿದ್ದ. ನಂತರ ಇಬ್ಬರೂ ಮಧ್ಯರಾತ್ರಿ 2.30ರ ವೇಳೆಗೆ ಮಂಟಪದಿಂದ ಪರಾರಿಯಾಗಿ, ವಿವಾಹವಾಗಿದ್ದಾರೆ. ವಧು ನಾಪತ್ತೆಯಾದ ಕಾರಣ ಎಲ್ಲರೂ ಆತಂಕಿತರಾಗಿ ಹುಡುಕಾಟ ನಡೆಸಿದ್ದಾರೆ. ಆ ವೇಳೆಗೆ ತಾಯಿಗೆ ದೂರವಾಣಿ ಕರೆ ಮಾಡಿರುವ ವಧು, ತಾನು ತನ್ನ ಪ್ರಿಯಕರನೊಂದಿಗೆ ಈಗಾಗಲೇ ಮದುವೆಯÁಗಿರುವುದಾಗಿ ತಿಳಿಸಿ ನನ್ನನ್ನು ಹುಡುಕಾಡಬೇಡಿ ಎಂದು ತಿಳಿಸಿದ್ದಾಳೆ.

ಕುಣಿಗಲ್ ಮೂಲದ ಪ್ರಸಾದ್ ಅವರು ಕೆಇಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಿವಾಹದ ಎಲ್ಲಾ ಖರ್ಚುವೆಚ್ಚವನ್ನೂ ಅವರೇ ಭರಿಸಿದ್ದರು. ಇದಕ್ಕೆ ಇಬ್ಬರ ಕುಟುಂಬಸ್ಥರೂ ಸಮ್ಮತಿಸಿದ್ದರು. ಮನನೊಂದಿರುವ ವರನ ಕುಟುಂಬಸ್ಥರು ವಿವಾಹದ ವೆಚ್ಚವನ್ನು ವಾಪಸ್ ನೀಡುವಂತೆ ಕೇಳಿದ್ದು, ರಾಜಿ ಸಂಧಾನದ ಮೂಲಕ ವಧುವಿನ ಕುಟುಂಬ ಸದಸ್ಯರು ವರನ ಕಡೆಯವರಿಗೆ ಖರ್ಚಾದ ಹಣವನ್ನು ಹಿಂದಿರುಗಿಸಿದ್ದಾರೆ. ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಪೂರ್ಣಿಮಾಳ ತಂದೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರಾದರೂ, ದೂರು ನೀಡದೆ ಹಿಂತಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ವರನಿಗೆ ಮತೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದರಾದರೂ ವರನಿಗಿಂತ ಯುವತಿ ಎರಡು ವರ್ಷ ಹಿರಿಯಳು ಎಂಬ ಕಾರಣದಿಂದ ಆ ನಿರ್ಧಾರವನ್ನೂ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಪರಾರಿಯಾದ ಯುವತಿ ಕಳೆದ ನಾಲ್ಕು ವರ್ಷಗಳಿಂದ ಲಗ್ಗೆರೆ ನಿವಾಸಿ ರಘು ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com