ಹಾಸನದ ಹಲವೆಡೆ ಭೂಕಂಪನ..!

ಹಾಸನ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವವಾಗಿದ್ದು, ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ...
ಹಾಸನದಲ್ಲಿ ಭೂಕಂಪನ (ಸಾಂದರ್ಭಿಕ ಚಿತ್ರ)
ಹಾಸನದಲ್ಲಿ ಭೂಕಂಪನ (ಸಾಂದರ್ಭಿಕ ಚಿತ್ರ)

ಹಾಸನ: ಹಾಸನ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವವಾಗಿದ್ದು, ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಹಾಸನ ಜಿಲ್ಲೆಯ ಮೂಡಿಗೆರೆ, ಆಲೂರು ಮತ್ತು ಬೇಲೂರಿನಲ್ಲಿ ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಭೂಮಿ ಸುಮಾರು 5 ಸೆಕೆಂಟ್‌ಗಳ ಕಂಪಿಸಿದ್ದು, ಬೆಳಗ್ಗೆ 6.54ರಿಂದ 7 ಗಂಟೆಯವರೆಗೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಭೂಮಿ ನಡುಗುತ್ತಿದ್ದಂತೆಯೇ ಮೂಡಿಗೆರೆಯಲ್ಲಿ ಕೆಲ ಮನೆಗಳಲ್ಲಿ ಪಾತ್ರೆಗಳು ನೆಲಕ್ಕುರುಳಿದ್ದು, ಘಟನೆಯಿಂದ ಭಯಭೀತಗೊಂಡ ಜನ ಹೊರಗೆ ಓಡಿಬಂದಿದ್ದಾರೆ.

ಚಿಕ್ಕಮಗಳೂರಿನಲ್ಲಿಯೂ ಇಂತಹುದೇ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಹಾಸನ ಜಿಲ್ಲಾ ಎಸಿ ಮಧುಕೇಶ್ವರ ಅವರು, ಭೂಕಂಪನದ ಅನುಭವವಾದ ಕುರಿತು ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ತರಿಸಿಕೊಳ್ಳುತ್ತೇನೆ. ಭೂಕಂಪನ ಪ್ರದೇಶಗಳಿಗೆ ತೆರಳಿ ವೀಕ್ಷಿಸುತ್ತೇನೆ ಎಂದು ಹೇಳಿದರು.

ಆಂಧ್ರದಲ್ಲೂ ಕಂಪಿಸಿದ ಭೂಮಿ
ಇದೇ ವೇಳೆ ನೆರೆಯ ಆಂಧ್ರ ಪ್ರದೇಶ ರಾಜ್ಯದಲ್ಲಿಯೂ ಭೂಮಿಕಂಪಿಸಿದ ಅನುಭವವಾಗಿದೆ. ಆಂಧ್ರದ ಗುಂಟೂರು ಜಿಲ್ಲೆಯ 10 ಗ್ರಾಮಗಳಲ್ಲಿ ಮತ್ತು ಪ್ರಕಾಶಂ ಜಿಲ್ಲೆಯ 7 ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಇಂದು ಬೆಳ್ಳಂ ಬೆಳ್ಳಗ್ಗೆ ಸಂಭವಿಸಿದ ಕಡಿಮೆ ತೀವ್ರತೆಯ ಭೂಕಂಪನ ಜನತೆಯಲ್ಲಿ ಭೀತಿ ಸೃಷ್ಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com