ಪ್ರತ್ಯೇಕ ಅಪಘಾತ: 6 ಸಾವು

ಮದುವೆ ದಿಬ್ಬಣ ಮುಗಿಸಿಕೊಂಡ ಹಳ್ಳಿಗೆ ವಾಪಸ್ಸಾಗುತ್ತಿದ್ದ ವೇಳೆ ಮ್ಯಾಕ್ಸಿಕ್ಯಾಬ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ...
ಅಪಘಾತ(ಸಾಂದರ್ಭಿಕ ಚಿತ್ರ)
ಅಪಘಾತ(ಸಾಂದರ್ಭಿಕ ಚಿತ್ರ)
Updated on

ಸಿಂಧನೂರು: ಮದುವೆ ದಿಬ್ಬಣ ಮುಗಿಸಿಕೊಂಡ ಹಳ್ಳಿಗೆ ವಾಪಸ್ಸಾಗುತ್ತಿದ್ದ ವೇಳೆ ಮ್ಯಾಕ್ಸಿಕ್ಯಾಬ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಸಾಸಲಮರಿ ಬಳಿ ನಡೆದಿದೆ.

ಮೃತ ಜಯಮ್ಮ ಎಂಬುವರ ಮಗಳ ಮದುವೆ ಬಳ್ಳಾರಿಯ ಜಿಲ್ಲೆಯ ಸಿರಗುಪ್ಪದಲ್ಲಿ ನಡೆದಿತ್ತು. ಈ ಮದುವೆ ಮುಗಿಸಿಕೊಂಡು ರಾಯಚೂರು ಜಿಲ್ಲೆಯ ಸಿಂಧನೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದೆ.

ಮೃತರನ್ನು ಶಿವಗಂಗಮ್ಮ(60), ಗೌರಮ್ಮ(42) ಮತ್ತು ಮದುಮಗಳ ತಾಯಿ ಜಯಮ್ಮ(47) ಎಂದು ತಿಳಿದುಬಂದಿದೆ.

ಮಂಡ್ಯ: ಮಂಡ್ಯ ಜಿಲ್ಲೆಯ ಬೂದನೂರು ತಾಲೂಕಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com