ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ: ಐದು ಜನರ ಬಂಧನ

ಬೆಟ್ಟಿಂಗ್ ದಂಧೆ
ಬೆಟ್ಟಿಂಗ್ ದಂಧೆ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಕಾವು ದಿನೇದಿನೆ ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಬೆಟ್ಟಿಂಗ್ ದಂಧೆ ಏರುಗತಿಯಲ್ಲಿ ಸಾಗಿದೆ.

ಗುರುವಾರ ಒಂದೇ ದಿನ ಸಿಸಿಬಿ ಪೊಲೀಸರು ಮೂರು ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಸ್ಕಾಟ್‍ಲ್ಯಾಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್ ಬಿಎನ್(38), ರಾಘವೇಂದ್ರ(29) ಹಾಗೂ ಠಾಕೂರಾಮ್(45) ಬಂಧಿತರು. ಇವರಿಂದ ರು. 10.60 ಲಕ್ಷ ನಗದು, 1 ಟಿವಿ, 1 ಲ್ಯಾಪ್‍ಟಾಪ್, ಬೆಟ್ಟಿಂಗ್ ಸಾಫ್ಟ್ ವೇರ್‍ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಇಟ್ಟುಮಡು ಸಮೀಪದ ಕೃಷ್ಣಯ್ಯ ಬಡಾವಣೆಯ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ದಾಳಿ ನಡೆಸಿ ಮೂವರನ್ನು ಬಂಧಿಸಿದೆ.

ಗಿರಿನಗರ:
ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ 23:25 ಅನುಪಾತದಲ್ಲಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ ಬುಕ್ಕಿ ಮಂಜುನಾಥ(32) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಸಮೀಪದ ಹೊಸಕೆರೆಹಳ್ಳಿಯಲ್ಲಿ ಆರೋಪಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಈತನಿಂದ 1 ಲ್ಯಾಪ್ ಟಾಪ್ ಹಾಗೂ 1 ಡೋಂಗಲ್ ವಶಪಡಿಸಿಕೊಳ್ಳಲಾಗಿದೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವೇಶ್ವರ ನಗರ: ಸಮೀಪದ ಶಕ್ತಿ ಗಣಪತಿ ನಗರದಲ್ಲಿ ಕ್ರಿಕೆಟ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸತೀಶ ಎಂಬಾತನನ್ನು ಬಂಧಿಸಿ ರು. 2.39 ಲಕ್ಷ ನಗದು, 3 ಮೊಬೈಲ್ ಫೋನ್‍ಗಳು, ಬೆಟ್ಟಿಂಗ್ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com