
ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳು ಬಿಬಿಎಂಪಿಗೆ ರು.200 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಬಿಜೆಪಿಯ ಎಸ್.ಹರೀಶ್ ಮಾಡಿದ ಈ ಗುರುತರ ಆರೋಪಕ್ಕೆ ಇತರ ಸದಸ್ಯರೂ ದನಿಗೂ ಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಟ್ಟಿಗೆದ್ದ ಮೇಯರ್, ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಅದೇಶಿಸಿದರು. ಇದಕ್ಕೆ ಸ್ಪಂದಿಸಿದ ಆಯುಕ್ತ ಲಕ್ಷ್ಮೀನಾರಾಯಣ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಭರವಸೆ ನೀಡಿದರು.
ಆರಂಭದಲ್ಲಿ ಮಾತನಾಡಿದ ಎಸ್.ಹರೀಶ್ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಆಸ್ತಿ ತೆರಿಗೆ ಸಂಗ್ರಹಿಸಲು ಹೊರಡಿಸಿದ ವಿಶೇಷ ನೋಟಿಸ್ ದುರ್ಬಳಕೆಯಾಗುತ್ತಿದೆ. ಲೆಕ್ಕಾಧಿಕಾರಿ ಕಟೇರಿ ಅಧಿಕಾರಿಗಳಾದ ರಾಘವೇಂದ್ರ, ಸಿದ್ದು ರಿಯಾಜ್, ವಾಣಿ ಹಾಗೂ ಐಟಿ ವಿಬಾಗದ ಸಲಹೆಗಾರ ಶೇಷಾದ್ರಿ ಖಾಸಗಿ ಸಂಸ್ಥೆಯೊಂದರಿಂದ ರು. 27.64 ಕೋಟಿ ಆಸ್ತಿ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಉಳಿದ ರು. 16.63 ಕೋಟಿ ಆಸ್ತಿ ತೆರಿಗೆಯ ಬಡ್ಡಿ ಕಟ್ಟಿಸಿಕೊಂಡಿಲ್ಲ. ಬಡ್ಡಿ ಪಾವತಿಸಿಕೊಳ್ಳದ ಅಧಿಕಾರಿಗಳು ಅಸಲು ಮಾತ್ರ ಕಟ್ಟಿಸಿಕೊಂಡು ರಸೀದಿ ನೀಡಿದ್ದಾರೆ. ನಿಯಮಬಾಹಿವಾಗಿ ರಸೀದಿ ನೀಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಮಾನತು
ಪಾದಚಾರಿ ಮಾರ್ಗದಲ್ಲಿ ಎರ್ ಎಂಜೆಡ್ ಸಂಸ್ಥೆಯ ಒತ್ತುವರಿ ತೆರವು ವೇಳೆ ಕರ್ತವ್ಯ ಲೋಪ ತೋರಿದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಾನ್ ಅಮಾನತಿಗೆ ಮೇಯರ್ ಶಾಂತಕುಮಾರಿ ಆದೇಶ ನೀಡಿದರು.
ನೀರಿನ ಸಮಸ್ಯೆ
ಕುಡಿಯುವ ನೀರಿನ ಸಮಸ್ಯೆ ಎಲ್ಲ ವಲಯಗಳಲ್ಲಿ ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಎ.ಎಚ್. ಬಸವರಾಜು ಆಗ್ರಹಿಸಿದರು. ಶೀಘ್ರ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಮೇಯರ್ ತಿಳಿಸಿದರು.
Advertisement