ಹೌಸಿಂಗ್ ಕಾಯ್ದೆ ತಿದ್ದುಪಡಿಗೆ ನಿರ್ಧಾರ ನಿಯಮಾವಳಿ ಸರಳ; ಏಕಗವಾಕ್ಷಿ ಕೇಂದ್ರ

ಖಾಸಗಿ ಸಂಘಗಳೇ ನೇರಭೂಮಿ ಖರೀದಿಸಲು ಅನುವು ಮಾಡಿಕೊಡಲು ಹೌಸಿಂಗ್ ಕಾಯಿದೆ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿದೆ.
ಸಹಕಾರ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ (ಸಂಗ್ರಹ ಚಿತ್ರ)
ಸಹಕಾರ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ವಸತಿ, ನಿವೇಶನಗಳ ಆಕಾಂಕ್ಷಿಗಳಿಗೆ ಒಂದೇ ವರ್ಷದಲ್ಲಿ ಸೌಲಭ್ಯ ಕಲ್ಪಿಸುವ ಹಾಗೂ ಖಾಸಗಿ ಸಂಘಗಳೇ ನೇರಭೂಮಿ ಖರೀದಿಸಲು ಅನುವು ಮಾಡಿಕೊಡಲು ಹೌಸಿಂಗ್ ಕಾಯಿದೆ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿದೆ.

ಗ್ಛಹನಿರ್ಮಾಣ ಸಂಘಗಳು ಸದಸ್ಯರಿಗೆ ಸೌಲಭ್ಯ ಕಲ್ಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿವೆ. ಇದಕ್ಕೆ ಕ್ಲಿಷ್ಟಕರ ನಿಯಮಗಳೂ ಕಾರಣ ಹೀಗಾಗಿ ಎಲ್ಲ ನಿಯಮಗಳನ್ನು ಸರಳಗೊಳಿಸಿ, ಎಲ್ಲಕೂ ನಿರಾಕ್ಷೇಪಣಾ ಪತ್ರ ಪಡೆಯಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತದೆ ಎಂದು ಸಹಕಾರ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ಈಗಿನ ಕಾಯಿದೆ  ಪ್ರಕಾರ ಖಾಸಗಿ ಗೃಹ ನಿರ್ಮಾಣ ಸಂಘಗಳಿಗೆ ನಿಯಮ 109ರ ಅಡಿಯಲ್ಲಿ ಭೂಮಿ ಖರೀದಿಸುವ ಅವಕಾಶವಿದ್ದರೂ ಅವು ನೇರವಾಗಿ ಖರೀದಿಸುವಂತಿಲ್ಲ. ಡೆವಲಪರ್‌ಗಳ ಮೂಲಕ ಇದನ್ನು ನಿರ್ವಹಿಸಬೇಕಾಗಿತ್ತು. ಇದನ್ನು ರದ್ದುಮಾಡಿ ಸಂಘಗಳೇ ನೇರವಾಗಿ ಭೂಮಿ ಖರೀದಿಸಲು ಅನುವು ಮಾಡಿಕೊಡಲಾಗುತ್ತಿದೆ. ಜತಗೆ ಬಡಾವಣೆ ನಿರ್ಮಾಣಕ್ಕೆ ಸುಮಾರು 10 ಏಜೆನ್ಸಿಗಳಿಂದ ನಿರಾಪೇಕ್ಷಣಾ ಪತ್ರ ಪಡೆಯಲು ಆಗುತ್ತಿರುವ ವಿಳಂಬ ತಪ್ಪಿಸಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತದೆ.

ಕಾಯಿದೆಗೆ ತಿದ್ದುಪಡಿ ತರುವ ಕರಡನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ತಯಾರಿಸುತ್ತಿದೆ. ಇದನ್ನು ಸದ್ಯದಲ್ಲಿಯೇ ಸಲ್ಲಿಸಲಿದ್ದು, ಅದನ್ನು ಪರಿಶೀಲಿಸಲಾಗುತ್ತದೆ. ಮುಂದಿನ ಜಂಟಿ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com