2013- ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದ್ದು, ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹಜ್ ಪ್ರಶಸ್ತಿ ಪಡೆದಿದೆ.
2013- ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಬೆಂಗಳೂರು: 2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದ್ದು, ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹಜ್ ಪ್ರಶಸ್ತಿ ಪಡೆದಿದೆ.

ಹಜ್ ಚಿತ್ರದ ನಾಯಕ ನಟ ನಿಖಿಲ್ ಮಂಜೂಗೆ ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಿಸೆಂಬರ್ 1 ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟಿ ನಿವೇದಿತ ಅತ್ಯುತ್ತಮ ನಟಿಯಾಗಿ ಆಯ್ಕೆಗೊಂಡಿದ್ದಾರೆ.

ಅತ್ಯುತ್ತಮ ಚಿತ್ರಗಳು
ಪ್ರಥಮ ಅತ್ಯುತ್ತಮ ಚಿತ್ರ - ಹಜ್
ದ್ವಿತೀಯ ಅತ್ಯುತ್ತಮ ಚಿತ್ರ - ಜಟ್ಟ
ತೃತೀಯ ಅತ್ಯುತ್ತಮ ಚಿತ್ರ - ಪ್ರಕೃತಿ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಇಂಗಳೆ ಮಾರ್ಗ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ಚಾರ್‍ಮಿನಾರ್ 
ಅತ್ಯುತ್ತಮ ಮಕ್ಕಳ ಚಿತ್ರ- ಹಾಡು ಹಕ್ಕಿ ಹಾಡು 
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ- ಅಗಸಿ ಪಾರ್ಲರ್ 
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ರಿಕ್ಷಾ ಡ್ರೈವರ್ ( ತುಳು )

2013ರ ಜೀವಮಾನ ಸಾಧನೆ ಪ್ರಶಸ್ತಿಗಳು

ಡಾಃ ರಾಜ್‍ಕುಮಾರ್ ಪ್ರಶಸ್ತಿ- ಶ್ರೀನಾಥ್, ಹಿರಿಯ ಚಲನಚಿತ್ರ ನಟರು
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ಪಿ.ಹೆಚ್. ವಿಶ್ವನಾಥ್, ಚಲನಚಿತ್ರ ನಿರ್ದೇಶಕರು   
ಡಾ. ವಿಷ್ಣುವರ್ಧನ್ ಪ್ರಶಸ್ತಿ- ಕೆ.ವಿ. ಗುಪ್ತ, ಚಲನಚಿತ್ರ ವಿತರಕರು  ಹಾಗೂ ನಿರ್ಮಾಪಕರು
   
ಅತ್ಯುತ್ತಮ ಪೋಷಕ ನಟ(ಕೆ.ಎಸ್.ಅಶ್ವಥ್ ಪ್ರಶಸ್ತಿ)- ಶ್ರೀ ಶರತ್ ಲೋಹಿತಾಶ್ವ
ಚಿತ್ರ : ಮತ್ತೆ ಸತ್ಯಾಗ್ರಹ
   
ಅತ್ಯುತ್ತಮ ಪೋಷಕ ನಟಿ- ಶ್ರೀಮತಿ ಭಾಗೀರಥಿ ಬಾಯಿ ಕದಂ
ಚಿತ್ರ : ಅಗಸಿ ಪಾರ್ಲರ್   

ಅತ್ಯುತ್ತಮ ಕತೆ- ಶ್ರೀಲಲಿತೆ
ಚಿತ್ರ  : ಹಜ್   

ಅತ್ಯುತ್ತಮ ಚಿತ್ರಕತೆ- ಜಯತೀರ್ಥ
ಚಿತ್ರ : ಟೋನಿ   

ಅತ್ಯುತ್ತಮ ಸಂಭಾಷಣೆ- ನಾಗಶೇಖರ್
ಚಿತ್ರ : ಮೈನಾ   

ಅತ್ಯುತ್ತಮ ಛಾಯಾಗ್ರಹಣ- ಪಿ.ಕೆ.ಹೆಚ್. ದಾಸ್
ಚಿತ್ರ : ಚಂದ್ರ

ಅತ್ಯುತ್ತಮ ಸಂಗೀತ ನಿರ್ದೇಶನ- ಪೂರ್ಣಚಂದ್ರ ತೇಜಸ್ವಿ
ಚಿತ್ರ : ಲೂಸಿಯಾ   

ಅತ್ಯುತ್ತಮ ಸಂಕಲನ- ಕೆ.ಎಂ. ಪ್ರಕಾಶ್
ಚಿತ್ರ : ಟೋನಿ   

ಅತ್ಯುತ್ತಮ ಬಾಲ ನಟ- ಮಾಸ್ಟರ್ ಪ್ರದ್ಯುಮ್ನ
ಚಿತ್ರ : ಕರಿಯಾ ಕಣ್‍ಬಿಟ್ಟ   

ಅತ್ಯುತ್ತಮ ಬಾಲ ನಟಿ- ಬೇಬಿ  ಶ್ರೇಯಾ
ಚಿತ್ರ: ಅತಿ ಅಪರೂಪ   

ಅತ್ಯುತ್ತಮ ಕಲಾ ನಿರ್ದೇಶನ- ರವಿ
ಚಿತ್ರ : ಭಜರಂಗಿ

ಅತ್ಯುತ್ತಮ ಗೀತ ರಚನೆ- ಅರಸು ಅಂತಾರೆ
ಗೀತೆ :  ಮಳೆ ಹನಿಯೇ ಕಣ್ಣೀರ ಹಾಕಿದಂತೆ....ಮದರಂಗಿ
   
ಅತ್ಯುತ್ತಮ  ಹಿನ್ನಲೆ ಗಾಯಕ- ನವೀನ್ ಸಜ್ಜು
ಹಾಡು :  ಎದೆಯೊಳಗೆ ತಮತಮ ತಮಟೆ.....ಲೂಸಿಯಾ
   
ಅತ್ಯುತ್ತಮ ಹಿನ್ನಲೆ ಗಾಯಕಿ- ಸಚಿನಾ ಹೆಗ್ಗಾರ್
ಗೀತೆ :  ಹೆದರ್‍ಬ್ಯಾಡ್ರಿ ಅಂತ ...... ಕಡ್ಡಿಪುಡಿ



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com