ಪ್ರಾಣ ಉಳಿಸಲು ಗ್ರೀನ್ ಚಾನೆಲ್: ಬಿಜಿಎಸ್ ನೂತನ ಸೇವೆ

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ
ಬಿಜಿಎಸ್ ಗ್ಲೋಬಲ್ ಆಸ್ಪತ್ರೆ

ಬೆಂಗಳೂರು: ಅಪಘಾತಗಳಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವಿಶೇಷ ಗ್ರೀನ್ ಚಾನೆಲ್ ಆಡ್ಮಿಷನ್ ಪ್ರೊಸೆಸ್ ಎಂಬ ನೂತನ ಸೇವೆಯನ್ನು ಆರಂಭಿಸಿದೆ.

ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯಲ್ಲಿ ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡುವುದು ಹಾಗೂ ಆತನ ಜೀವ ಉಳಿಸುವುದು ಇದರ ಉದ್ದೇಶ. ಈಗಾಗಲೇ ಸೇವೆ ಆರಂಭವಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ 41 ಜನರ ಜೀವ ಉಳಿಸಲಾಗಿದೆ. ಇಂತಹ ಯೋಜನೆಗೆ ನಗರ ಸಂಚಾರ ಪೊಲೀಸರೂ ಈಗ ಕೈಜೋಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ ವೆಂಕಟರಮಣ, ಅಪಘಾತದಲ್ಲಿ ಬಡವ, ಶ್ರೀಮಂತ ಯಾರೇ ಗಾಯಗೊಳ್ಳಲಿ ಅವರನ್ನು ಆಸ್ಪತ್ರೆಗೆ ಕರೆತಂದ ತಕ್ಷಣ ಚಿಕಿತ್ಸೆ ನೀಡುವುದು, ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಗ್ರೀನ್ ಚಾನೆಲ್ ಉದ್ದೇಶ ಎಂದರು.

ಅಪಘಾತವಾದ ಮೊದಲ 1 ಗಂಟೆಯ ಸುವರ್ಣ ಸಮಯದಲ್ಲಿ ಗಾಯಾಳುಗಳಿಗೆ ಉತ್ತಮ ಸೇವೆ ನೀಡಿ ಜೀವ ಉಳಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ತುರ್ತು ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ತುರ್ತು ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಇದೇ ವೇಳೆ ಚಾಲನೆ ನೀಡಿದರು.

ರು. 1 ನೀಡಿ: ಬಿಜಿಎಸ್ ಆಸ್ಪತ್ರೆ ಜತೆಗೆ ನಗರದ ಇತರೆ ಆಸ್ಪತ್ರೆಗಳೂ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕು ಎಂದ ಅವರು, ನಗರದ ಪ್ರತಿಯೊಬ್ಬರೂ ರು. 1 ನೀಡಿದರೆ ಬಡಜನರಿಗೆ ಅನುಕೂಲವಾಗುತ್ತದೆ. ಬಡರೋಗಿಗಳಿಗೆ ನೆರವು ನೀಡುತ್ತಿರುವ ಧನ್ವಂತರಿ ಚಾರಿಟಬಲ್ ಟ್ರಸ್ಟ್‌ಗೆ ಪ್ರತಿಯೊಬ್ಬರೂ ದೇಣಿಗೆ ನೀಡಿದರೆ ಚಿಕಿತ್ಸೆ ಸಾಧ್ಯವಾಗುತ್ತದೆ ಎಂದರು. ದಾನಿಗಳು 080 3044 4444ನ್ನು ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com