ಬಾಲಕಿಗೆ ಲೈಂಗಿಕ ಕಿರುಕುಳ: ಸೆರೆ

ಹದಿನಾರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ...
ಬಾಲಕಿಗೆ ಲೈಂಗಿಕ ಕಿರುಕುಳ: ಸೆರೆ

ಬೆಂಗಳೂರು: ಹದಿನಾರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಲಕಿಯ ಸಂಬಂಧಿ ಸಿದ್ದಲಿಂಗಪ್ಪ(48) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ರೈತನಾಗಿರುವ ಸಿದ್ದಲಿಂಗಪ್ಪ ಗುರುವಾರ ಹುಳಿಮಾವು ಪ್ರದೇಶದಲ್ಲಿ ಮನೆಯಲ್ಲಿ ಒಂಟಿಯಾಗಿ ಇದ್ದ ಬಾಲಕಿ ಬಳಿ ಹೋಗಿದ್ದ. ದೇವರು ಮೈ ಮೇಲೆ ಬಂದಂತೆ ನಟಿಸಿ ಬಾಲಕಿಯ ಮೈ ಮುಟ್ಟಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡು ಹೊರಗೆ ಹೋಗಿದ್ದಳು. ನಂತರ ಪಾಲಕರಿಗೆ ಮಾಹಿತಿ ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ತಪ್ಪಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾನೆ. ಆದರೆ, ದೂರು ನೀಡಿದ ಬಾಲಕಿಯ ಕುಟುಂಬ ಹಾಗೂ ಆರೋಪಿಯ ಕುಟುಂಬದ ನಡುವೆ ಹಲವು ದಿನಗಳಿಂದ ದ್ವೇಷವಿದೆ. ಈ ಸಂಬಂಧ ಎರಡೂ ಕುಟುಬಂಗಳು ಪರಸ್ಪರರ ವಿರುದ್ಧ ಹಲವು ಬಾರಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com