
ಬೆಂಗಳೂರು: ಇಂಡಿಯನ್ ಮುಜಾಹಿದೀನ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ನಾಲ್ವರ ಪೈಕಿ ಒಂದಿಬ್ಬರು ಚರ್ಚ್‌ಸ್ಟ್ರೀಟ್‌ನಲ್ಲಿ ಡಿ. 28 ರಂದು ಬಾಂಬ್ ಸ್ಫೋಟ ಸಂಭವಿಸುವ ಕೆಲವು ದಿನಗಳ ಹಿಂದೆ ಚರ್ಚ್‌ಸ್ಟ್ರೀಟ್‌ಗೆ ಒಂದು ಹೋಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕ ಚಟುವಟಿಕೆ ನಡೆಸಿದ ಆರೋಪದ ಮೇಲೆ ಡಾ. ಇಸ್ಮಾಯಿಲ್ ಅಫಕ್, ಸದ್ದೆ ಹುಸೇನ್, ಅಬ್ದುಸ್ ಸಬೂರ್ ಹಾಗೂ ಸೈಯಿದಿಯನ್ನು ಬಂಧಿಸಲಾಗಿದೆ. ಆದರೆ, ಚರ್ಚ್‌ಸ್ಟ್ರೀಟ್ ಸ್ಫೋಟಕ್ಕೂ ಇವರಿಗೂ ಸಂಬಂಧ ಇರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ.
ಬಂಧಿತರ ಪೈಕಿ ಕೆಲವರು ಸ್ಫೋಟ ಸಂಭವಿಸುವ ಕೆಲವು ದಿನಗಳ ಮುಂಚೆ ಬಂದು ಹೋಗಿರುವ ಸಾಧ್ಯತೆ ಇದೆ. ಆದರೆ, ಸ್ಫೋಟಕ್ಕಾಗಿಯೇ ಬಂದು ಹೋಗಿದ್ದರು ಎನ್ನಲು ಇನ್ನೂ ಯಾವುದೇ ಪ್ರಬಲ ಸಾಕ್ಷ್ಯಗಳು ಲಭ್ಯವಿಲ್ಲ ಎನ್ನಲಾಗಿದೆ.
Advertisement