ಮೈಸೂರು ಅರಮನೆ ಸಮೀಪ ಸುರಂಗದ ಮಾದರಿ ಪತ್ತೆ

ಮೈಸೂರು ಅರಮನೆಯ ಸಮೀಪದಲ್ಲಿ ಸುರಂಗದ ಮಾದರಿಯೊಂದು ಪತ್ತೆಯಾಗಿದ್ದು, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರು ಅದು...
ಮೈಸೂರು ಅರಮನೆ ಸಮೀಪ ಪತ್ತೆಯಾದ ಸುರಂಗ
ಮೈಸೂರು ಅರಮನೆ ಸಮೀಪ ಪತ್ತೆಯಾದ ಸುರಂಗ

ಮೈಸೂರು: ಮೈಸೂರು ಅರಮನೆಯ ಸಮೀಪದಲ್ಲಿ ಸುರಂಗದ ಮಾದರಿಯೊಂದು ಪತ್ತೆಯಾಗಿದ್ದು, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರು ಅದು ಹಳೆಯ ಒಳಚರಂಡಿ ವ್ಯವಸ್ಥೆ ಎಂದು ಸ್ಪಷ್ಟಪಡಿಸಿದ್ದಾರೆ.

ಅರಮನೆ ಸಮೀಪದ ಗನ್‌ಹೌಸ್ ಸುತ್ತಮುತ್ತ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ಸುರಂಗದ ಮಾದರಿ ಪತ್ತೆಯಾತಿದೆ. ಇಟ್ಟಿಗೆ ಮತ್ತು ಗಾರೆಯಿಂದ ಸುತ್ತುವರೆದ ಈ ಸುರಂಗದ ಮಾದರಿಯಿಂದ ಅನೇಕರು ಇದು ಅರಮನೆಗೆ ನಿರ್ಮಿಸಿದ್ದ ಸುರಂಗ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸುರಂಗ ಎಂಬ ಕಾರಣಕ್ಕೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಮಾರ್ಗವು ಎತ್ತರದ ಸ್ಥಳವಾಗಿದೆ. ನಂಜನಗೂಡು ರಸ್ತೆಯ ಕೆಳಭಾಗದಲ್ಲಿ ಈ ಮಾದರಿ ಪತ್ತೆಯಾಗಿದ್ದು, ರಸ್ತೆಯ ಇಕ್ಕೆಲಗಳ ಪೈಕಿ ಎಡಭಾಗವು ದೊಡ್ಡಕೆರೆ ಮೈದಾನದ ಪ್ರದೇಶವಾದ್ದರಿಂದ ರಾಜರ ಕಾಲದಲ್ಲಿ ನಿರ್ಮಿಸಿದ್ದ ಒಳಚರಂಡಿ ಇರಬಹುದು ಎಂಬುದಕ್ಕೆ ಇಂಬು ದೊರೆತಂತಿದೆ.

ಒಂದೇ ಜಾಗದಲ್ಲಿ ಒಳಚರಂಡಿಗೆ ಹೋಲಿಕೆಯಾಗವ ಎರಡು ಸುರಂಗದ ಮಾದರಿಗಳು ಪತ್ತೆಯಾಗಿವೆ. ಒಂದು ಇಟ್ಟಿಗೆಯಿಂದ ಮಾಡಿದ ಅರ್ಧ ಚಂದ್ರಾಕೃತಿ ಇದ್ದರೆ ಮತ್ತೊಂದು ಚೌಕಾಕಾರದಲ್ಲಿದೆ. ಚೌಕಾಕಾರದಲ್ಲಿ ಇರುವ ಸುರಂಗ ಮಾದರಿಯ ಒಳಭಾಗದಲ್ಲಿ ಉತ್ತರ ಭಾಗಕ್ಕೆ 10 ಅಡಿ ಆಳವಿರುವ ಹಳ್ಳವಿದೆ. ಆ ಹಳ್ಳಕ್ಕೆ ಕಲ್ಲನ್ನು ಹಾಕಿದರೆ ನೀರು ಇರುವ ಶಬ್ದ ಕೇಳಿಸುತ್ತಿದೆ. ಇಲ್ಲಿ ಸುಮಾರು ಆರು ಇಂಚಿನ ಪೈಪ್ ಸಹ ಪತ್ತೆಯಾಗಿದೆ. ಆದ್ದರಿಂದ ಇದು ಮಾಹಾರಾಜರ ಕಾಲದಲ್ಲಿ ನಿರ್ಮಿಸಿದ್ದ ಮೋರಿ ಇರಬಹುದು ಎಂಬ ಶಂಕೆ ಇದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ ನಂಜರಾಜ ಅರಸ್ ತಿಳಿಸಿದ್ದಾರೆ. ನಿವೃತ್ತ ಪ್ರಾಧ್ಯಪಕ ಎನ್.ಎಸ್.ರಂಗರಾಜು, ಅರಮನೆ ಸುತ್ತಮುತ್ತ ಸುರಂಗ ಇದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆದರೆ ಗನ್‌ಹೌಸ್ ಇರುವುದರಿಂದ ಬಂದೂಕು, ಮದ್ದು, ಗುಂಡುಗಳನ್ನು ಶೇಖರಿಸಲು ಹೊಂಡ ನಿರ್ಮಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com