ರಣಜಿ ತಂಡಕ್ಕೆ ಪ್ರೆಸ್ ಕ್ಲಬ್ ಸನ್ಮಾನ

ದೇಶದ ಪ್ರತಿಷ್ಠಿತ ರಣಜಿ ಪ್ರಶಸ್ತಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟೂರ್ನಿಗಳನ್ನು ಗೆದ್ದು ಸಾಧನೆ ಮಾಡಿರುವ ರಾಜ್ಯ ರಣಜಿ ಕ್ರಿಕೆಟ್ ತಂಡ...
ರಣಜಿ ತಂಡದ ಸನ್ಮಾನ ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬ್ರಿಜೇಷ್ ಪಟೇಲ್
ರಣಜಿ ತಂಡದ ಸನ್ಮಾನ ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬ್ರಿಜೇಷ್ ಪಟೇಲ್
Updated on

ಬೆಂಗಳೂರು: ದೇಶದ ಪ್ರತಿಷ್ಠಿತ ರಣಜಿ ಪ್ರಶಸ್ತಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟೂರ್ನಿಗಳನ್ನು ಗೆದ್ದು ಸಾಧನೆ ಮಾಡಿರುವ ರಾಜ್ಯ ರಣಜಿ ಕ್ರಿಕೆಟ್ ತಂಡವನ್ನು ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಪ್ರೆಸ್‍ಕ್ಲಬ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಣಜಿ ತಂಡದ ಆಟಗಾರರನ್ನು ಅಭಿನಂದಿಸಿ ಮಾತನಾಡಿ, ಕ್ರಿಕೆಟ್‍ನಲ್ಲಿ ಉತ್ತಮ ಸಾಧನೆ ತೋರಿರುವ ಯುವ ಪಡೆಯನ್ನು ಪ್ರೆಸ್ ಕ್ಲಬ್ ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಇದರಿಂದ ರಣಜಿ ತಂಡ ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತರುವಂತಾಗಲು ಉತ್ತೇಜಿಸಿದಂತಾಗಿದೆ ಎಂದರು.

ರಣಜಿ ತಂಡದ ನಾಯಕ ಆರ್.ವಿನಯ್ ಕುಮಾರ್ ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟೂರ್ನಿಗಳನ್ನು ಗೆಲ್ಲುವಾಗ ಎದುರಿಸದ ಸವಾಲುಗಳನ್ನು ಹಂಚಿಕೊಂಡರು. ಇದಕ್ಕೆ  ರಾಜ್ಯ ಕ್ರಿಕೆಟ್ ಸಂಘದ ಪ್ರತಿ ಹಂತದಲ್ಲೂ ನೀಡಿದ ಸಹಕಾರವನ್ನು ಸ್ಮರಿಸಿದರು. ಸಮಾರಂಭದಲ್ಲಿ ಕೆಎಸ್‍ಸಿಎ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ್, ರಣಜಿ ಕ್ರಿಕೆಟ್ ಕಲಿಗಳಾದ  ರಾಬಿನ್ ಉತ್ತಪ್ಪ, ದೊಡ್ಡ ಗಣೇಶ್, ಕೆ.ಎಲ್.ರಾಹುಲ್, ಮಿಥುನ್, ಮನಿಷ್ ಪಾಂಡೆ, ಕಿರಣ್ ನಾಯರ್, ಸಿ.ಎಂ.ಗೌತಮ್,  ಅರವಿಂದ್ ಹಾಗೂ ಶ್ರೇಯಸ್ ಗೋಪಾಲ್  ಭಾಗವಹಿಸಿದ್ದರು.

ಇದೇ ವೇಳೆ ಪ್ರೆಸ್ ಕ್ಲಬ್ ಮತ್ತು ಪಿಇಎಸ್ ವಿಶ್ವವಿದ್ಯಾಲಯ ಇತ್ತೀಚಿಗೆ ನಡೆಸಿದ ಅಂತರ್ ಮಾಧ್ಯಮ ಪಂದ್ಯಾವಳಿಯಲ್ಲಿ ಜಯ ಸಾ„ಸಿದ `ಡೆಕನ್ ಹೆರಾಲ್ಡ್' ತಂಡಕ್ಕೆ ಪ್ರಶಸ್ತಿ ನೀಡಲಾಯಿತು. ಆರಂಭದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಪಿಇಎಸ್ ಸಂಸ್ಥೆಯ ಕುಲಪತಿ ಬಾಲಸುಬ್ರಮಣ್ಯಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com