ಕಾಂಗ್ರೆಸ್ ವಿಜಯಕ್ಕೆ ದಿಗ್ಗಿ ಗುಂಪುಸಭೆ

ಸಮನ್ವಯ ಸಮಿತಿ ಸಭೆಯಲ್ಲಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  (ಸಂಗ್ರಹ ಚಿತ್ರ)
ಸಮನ್ವಯ ಸಮಿತಿ ಸಭೆಯಲ್ಲಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)

ಬೆಂಗಳೂರು: ಸಿದ್ಧಾಂತ ಬದಲಾವಣೆ ಮತ್ತು ಸಂಘಟನೆ ಬಗ್ಗೆ ಚರ್ಚಿಸಲು ಕಾಂಗ್ರೆಸ್‍ನಲ್ಲಿ ಮೂರು ದಿನಗಳ ಕಾಲ`ಗುಂಪುಸಭೆ' ಆರಂಭಗೊಂಡಿದ್ದು, ಶಾಸಕರು ಮತ್ತು ಸಚಿವರಿಗೆ ಉತ್ತರದಾಯಿತ್ವ ನಿಗದಿ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಸರ್ಕಾರದ ಎಲ್ಲ ಸಚಿವರು ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದರಿಗೆ ಕ್ಲಾಸ್  ತೆಗೆದುಕೊಂಡಿರುವ ಸಿಂಗ್, ಇದೇ ಮೊದಲ ಬಾರಿಗೆ ಹುದ್ದೆಯ ಉತ್ತರದಾಯಿತ್ವದ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಚರ್ಚೆ ಆರಂಭವಾಗಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಆರೋಗ್ಯ ಸಚಿವ ಯು.ಟಿ. ಖಾದರ್, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಅಬಕಾರಿ ಇಲಾಖೆಗೆ ರಾಜಿನಾಮೆ ನೀಡಿರುವ ಸತೀಶ್ ಜಾರಕಿ ಹೊಳಿ ಹೊರತು ಪಡಿಸಿ ಎಲ್ಲ ಸಚಿವರೂ ಮತ್ತು ಸಂಸದರು ಮೊದಲ ಹಂತದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಆದೇಶದ ಪ್ರಕಾರ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಸಿದಾಟಛಿಂತ ಬದಲಾವಣೆ ಅಗತ್ಯ ಇದೆಯೇ? ಸಂಘಟನೆಯಲ್ಲಿ ಯಾವ ರೀತಿ ಬದಲಾವಣೆಯಾಗ ಬೇಕೆಂಬ ಬಗ್ಗೆ ಚರ್ಚೆಯಾಗಬೇಕು. ಇದು ಭವಿಷ್ಯದಲ್ಲಿ ಪಕ್ಷದ ಬೆಳವಣಿಗೆಯ ಸ್ವರೂಪ ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಪಕ್ಷದ ಸಿದ್ಧಾಂತ, ಸಂವಹನ, ಸಂಘಟನೆ, ಅ„ಕಾರ ಹಂಚಿಕೆ, ಪಕ್ಷ ಮತ್ತು ಸರ್ಕಾರದ ಸಮನ್ವಯತೆ, ಕಾಂಗ್ರೆಸ್ ಸಮಿತಿಗಳನ್ನು ಪರ್ಯಾವಲೋಚನೆ ಸಮಿತಿಯಾ ಸಾಂಸ್ಥಿಕ ಬದಲಾವಣೆ ಮಾಡುವುದು, ಶಿಸ್ತು, ಚುನಾವಣೆ ಸಿದ್ಧತೆ, ಮತಗಟ್ಟೆ ಸಮಿತಿಗಳ ಬಗ್ಗೆ ದಿಗ್ವಿಜಯ್ ಸಿಂಗ್ ಸಚಿವರಿಂದ ಮಾಹಿತಿ ಪಡೆದರು.

ಮುಂಚೂಣಿಗೆ ಅಸಮಾಧಾನ
ಇದೇ ಸಂದರ್ಭದಲ್ಲಿ ಪಕ್ಷದ ಮುಂಚೂಣಿ ಘಟಕಗಳ ಬಗ್ಗೆ ನೇರ ಅಸಮಾಧಾನ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್, ಇತ್ತೀಚಿಗೆ ಇವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಘಟಕಗಳ ಕಾರ್ಯಕರ್ತರು ಹೆಚ್ಚು ಚರ್ಚೆಯಲ್ಲಿ ಭಾಗಿಯಾಗಬೇಕು. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರನ್ನು ಪಕ್ಷಕ್ಕೆ ಸೆಳೆಯಲು ಮುಂಚೂಣಿ ಘಟಕಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸಬೇಕು. ಹೀಗಾಗಿ ಈ ಘಟಕಗಳಿಗೆ ಸಚಿವರ ಸಹಕಾರ, ಮಾರ್ಗದರ್ಶನ ಬೇಕೆಂದರು.

ಸಿಎಂ ಪರ ನಿಂತ ದಿಗ್ವಿಜಯ್ ಸಿಂಗ್
ಬೆಂಗಳೂರು: ಸಮನ್ವಯ ಮತ್ತು ಸಂಘಟನೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಮತ್ತೆ ಜಾಗೃತಗೊಂಡಿದ್ದು, ದಿನ ಪೂರ್ತಿ ನಡೆದ `ಗುಂಪು ಚರ್ಚೆ'ಯಲ್ಲಿ ಸರ್ಕಾರ ಮತ್ತು ಪಕ್ಷದ ಮಧ್ಯೆ ಹುಟ್ಟಿರುವ ಜಟಿಲತೆಯ ಗಂಟು ಬಿಡಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೆಣಗಾಡಿದ್ದಾರೆ. ಹಲವು ದಿನಗಳ ನಂತರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಸಿಎಂ ಸಿದ್ದರಾಮಯ್ಯಪಾಲಿಗೆ ಸ್ವಲ್ಪ ಸಿಹಿ-ಸ್ವಲ್ಪ ಹುಳಿ ಅನುಭವ ಸಿಕ್ಕಿದ್ದು, ಸಚಿವ ಜಾರಕಿ ಹೊಳಿ ರಾಜಿನಾಮೆ ಪ್ರಕರಣ ಇಷ್ಟು ದಿನ ಬೆಳೆಯುವುದಕ್ಕೆ ಅವಕಾಶ ನೀಡಿದ್ದಕ್ಕೆ ದಿಗ್ವಿಜಯ್ ಸಿಂಗ್ ತುಸು ಮುನಿಸು ಪ್ರಕಟಿಸಿದ್ದಾರೆ.

`ನೀವಿಬ್ಬರು ಆತ್ಮೀಯರಾಗಿ ದ್ದೂ, ಇದು ನಡೆಯಬಾರದಿತ್ತು. ಆದಾಗಿಯೂ ನಾನು ಮಧ್ಯಪ್ರವೇಶಿಸು ವುದಿಲ್ಲ. ಆದಷ್ಟು ಬೇಗ ಪರಿಹರಿಸಿಕೊಳ್ಳಿ' ಎಂದು ಕಿವಿ ಮಾತು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಪರವಾಗಿಯೇ ಮಾತನಾಡಿರುವ ಸಿಂಗ್, `ಸಚಿವರಾಗಲಿ, ಶಾಸಕರಾಗಲಿ ಪಕ್ಷದ ಶಿಸ್ತನ್ನು ಮೀರುವಂತಿಲ್ಲ. ಯಾರೇ ಆಗಲಿ ಷರತ್ತುಗಳನ್ನು ವಿಧಿಸಿದರೆ ಪಕ್ಷ ಸಹಿಸಿಕೊಳ್ಳುವುದಿಲ್ಲ. ಪಕ್ಷದ ವಿರುದ್ಧ ಮತ್ತು ಮುಖ್ಯಮಂತ್ರಿ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು.

ಪರಮೇಶ್ವರ ಅಸಮಾಧಾನ

ಪಕ್ಷದ ಸದಸ್ಯ ನೋಂದಣಿ ವಿಚಾರದಲ್ಲಿ ಸಚಿವರ ನಿರ್ಲಕ್ಷ್ಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಭೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸದಸ್ಯತ್ವ ನೋಂದಣಿ ಅಭಿಯಾನದ ಅವಧಿ ವಿಸ್ತರಣೆಯಾದರೂ ಕೆಲವು ಜಿಲ್ಲೆಗಳಲ್ಲಿ ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಸಚಿವರ ಸಹಕಾರ ನಿರೀಕ್ಷಿತ ರೀತಿಯಲ್ಲಿ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ವರದಿ ಕಳುಹಿಸಿದ್ದಾರೆ. ಹೀಗಾದರೆ ತಳಮಟ್ಟದಿಂದ ಪಕ್ಷ ಬಲವರ್ಧನೆ ಹೇಗೆ ಸಾಧ್ಯ? ಎಂದು ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್ ಸದಸ್ಯ ನೋಂದಣಿ ಕಾರ್ಯವನ್ನು ತ್ವರಿತಗೊಳಿಸಬೇಕು. ಇದರಲ್ಲಿ ಕರ್ತವ್ಯ ಚ್ಯುತಿ ಎಸಗುವ ಸಚಿವರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇಂದೈತೆ ಭಾರಿ ಹಬ್ಬ
ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಬುಸುಗುಡುವ ಕಾಂಗ್ರೆಸ್ ಶಾಸಕರಿಗೆ ಶನಿವಾರ ಇನ್ನೊಂದು ಭಾರಿ ಅವಕಾಶ ಲಭಿಸಿದೆ. ಪಕ್ಷ ಸಂಘಟನೆ ಹೆಸರಿನಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ದಿಗ್ವಿಜಯ್ ಸಿಂಗ್ ಶನಿವಾರ ವೇದಿಕೆ ರೂಪಿಸಿದ್ದು,18ರಿಂದ 20 ಶಾಸಕರ ಗುಂಪಿನ ಜತೆ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸುವ ಜತೆಗೆ ಸರ್ಕಾರ ಮತ್ತು ಸಚಿವರ ಕಾರ್ಯ ವೈಖರಿ ಬಗ್ಗೆಯೂ ಈ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಪರೋಕ್ಷವಾಗಿ ಹೈಕಮಾಂಡ್ ಮೊದಲ ರಿಗೆ ಪಕ್ಷದ ವೇದಿಕೆಯಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಭೆ ಆರಂಭಗೊಳ್ಳಲಿದೆ.

 



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com