ಜುಲೈ 12ರಂದು ನಗರದಲ್ಲಿ 'ಮಳೆ ನಿಲ್ಲುವವರೆಗೆ' ನಾಟಕ ಪ್ರದರ್ಶನ
ಬೆಂಗಳೂರು: ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕಾಗಿ ಹಣದ ಕೊರತೆಯನ್ನು ನೀಗಿಸುವ ಸಲುವಾಗಿ ಕಲಾ ರಂಗ ಲೋಕ ಮತ್ತು ರೋಟರಿ ಬೆಂಗಳೂರು ನ್ಯಾಷನಲ್ ಪಾರ್ಕ್ ಸಹಯೋಗದಲ್ಲಿ ಜುಲೈ 12ರಂದು 'ಮಳೆ ನಿಲ್ಲುವವರೆಗೆ' ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸಂಜೆ 7 ಗಂಟೆಗೆ ಎಡಿಎ ರಂಗ ಮಂದಿರಲ್ಲಿ ಮಳೆ ನಿಲ್ಲುವವರೆಗೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹವ್ಯಾಸಿ ಕಲಾವಿದರಾದ ಗೋಪಾಲಕೃಷ್ಣ, ಸತೀಶ್ ಐತಾಳ್, ವಿಕಾಸ್, ಸುಬ್ಬು, ಆದರ್ಶ್, ವಿಜು ನಡೆಸಿಕೊಡಲಿದ್ದಾರೆ ಎಂದು ಹವ್ಯಾಸಿ ಕಲಾವಿದರಾದ ಕೆಎಸ್ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಬಿಳೇಕಳ್ಳಿಯಲ್ಲಿ ಸರ್ಕಾರ ಶಾಲೆಯ ಅಭಿವೃದ್ಧಿ ಕಾರ್ಯಕ್ಕಾಗಿ ರೋಟರಿ ನ್ಯಾಷನಲ್ ಪಾರ್ಕ್ ಮುಂದಾಗಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಕಲಾ ರಂಗ ಲೋಕ ಸಾಥ್ ನೀಡಿದೆ. ನಾಟಕ ಪ್ರದರ್ಶನಕ್ಕೆ bookmyshow.comನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ 9740251718 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ