ನಾಲ್ಕು ಸಾಮಾನ್ಯ ವಿಮಾ ಕಂಪನಿಗಳ ವಿಲೀನ ಕುರಿತು ಚರ್ಚೆಗೆ ರಾಜ್ಯ ಮಟ್ಟದ ಸಮಾವೇಶ

ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ನಿಗಮದ ನಾಲ್ಕು ಕಂಪನಿಗಳಾದ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ...
ಪತ್ರಿಕಾಗೋಷ್ಠಿ ನಡೆಸಿದ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು
ಪತ್ರಿಕಾಗೋಷ್ಠಿ ನಡೆಸಿದ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು

ಬೆಂಗಳೂರು: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ನಿಗಮದ ನಾಲ್ಕು ಕಂಪನಿಗಳಾದ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ, ಓರಿಯಂಟಲ್ ಇನ್ಷೂರೆನ್ಸ್ ಕಂಪನಿ ಮತ್ತು ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಸಂಸ್ಥೆಗಳನ್ನು ವಿಲಿನಗೊಳಿಸಿ 'ಏಕೈಕ ಸಂಸ್ಥೆ' ಯನ್ನು ರಚಿಸುವ ಕುರಿತು ಚರ್ಚಿಸಲು ರಾಜ್ಯ ಮಟ್ಟದ ಸಮಾವೇಶವನ್ನು ಜುಲೈ 11ರಂದು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ರಮೇಶ್, ಬೆಳಿಗ್ಗೆ 10.30ಕ್ಕೆ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ
ಕಳೆದ ಎರಡು ವರ್ಷಗಳಲ್ಲೇ ಕೇಂದ್ರ ಸರ್ಕಾರದ ಹಣಕಾಸು ಸೇರ್ಪಡೆ ಕಾರ್ಯಕ್ರಮದ ಅಂಗವಾಗಿ ಈ ನಾಲ್ಕು ಕಂಪನಿಗಳು 1130 ಸಣ್ಣ ಪ್ರಮಾಣದ ಕಛೇರಿಗಳನ್ನು ಸ್ಥಾಪಿಸಿವೆ. ಇವು ಭಾರತದ 640 ಜಿಲ್ಲೆಗಳ ಪೈಕಿ 601 ಜಿಲ್ಲೆಗಳಲ್ಲಿ ಸುಮಾರು 8000 ಕಚೇರಿಗಳನ್ನು ಹೊಂದುವುದರ ಮೂಲಕ ವಿಮಾ ಸೌಲಭ್ಯದ ಸೇವೆಯನ್ನು ನೀಡುತ್ತಿದೆ. ವಿಮಾ ಕಂಪನಿಗಳ ನಡುವಿನ ಆಂತರಿಕ ಪೈಪೋಟಿಯ ಕಾರಣವಾಗಿ ಕಳೆದ 7-8 ವರ್ಷಗಳಲ್ಲಿ ನಾಲ್ಕು ಕಂಪನಿಗಳು 10000 ಕೋಟಿಗಳಷ್ಟು ಪ್ರೀಮಿಯಂ ನಷ್ಟ ಅನುಭವಿಸಿದೆ.
ಈ ಹಿನ್ನಲೆಯಲ್ಲಿ ಈ ನಾಲ್ಕು ಕಂಪನಿಗಳನ್ನು ವಿಲೀನಗೊಳಿಸಿ, ಆಗುವ ನಷ್ಟವನ್ನು ತಡೆಯಬಹುದಾಗಿದೆ. ಈ ನಾಲ್ಕು ಕಂಪನಿಗಳು ವಿಲೀನಗೊಳಿಸುವುದಕ್ಕೆ ಎಲ್ಲಾ ಕಾರ್ಮಿಕರು ಸಮ್ಮತಿಸಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರಲೆಂದು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com