ವೈ.ಭಾಸ್ಕರ್‌ರಾವ್ ರಾಜೀನಾಮೆ ಆಗ್ರಹಿಸಿ ರಾಜಭವನಕ್ಕೆ ಮುತ್ತಿಗೆ ಹಾಕಿದ ವಕೀಲರು

ಕರ್ನಾಟಕ ಲೋಕಾಯುಕ್ತದಲ್ಲಾದ ಭ್ರಷ್ಟಚಾರ ವಿರೋಧಿಸಿ ಬೆಂಗಳೂರು ವಕೀಲರ ಸಂಘಗಳ ಒಕ್ಕೂಟವು ಗುರುವಾರ ರಾಜಭವನಕ್ಕೆ ಮುತ್ತಿಗೆ ಹಾಕಿತು...
ವೈ.ಭಾಸ್ಕರ್‌ರಾವ್ ರಾಜೀನಾಮೆ ಆಗ್ರಹಿಸಿ ರಾಜಭವನಕ್ಕೆ ಮುತ್ತಿಗೆ ಹಾಕಿದ ವಕೀಲರು
ವೈ.ಭಾಸ್ಕರ್‌ರಾವ್ ರಾಜೀನಾಮೆ ಆಗ್ರಹಿಸಿ ರಾಜಭವನಕ್ಕೆ ಮುತ್ತಿಗೆ ಹಾಕಿದ ವಕೀಲರು

ಬೆಂಗಳೂರು: ಕರ್ನಾಟಕಲೋಕಾಯುಕ್ತದಲ್ಲಾದ ಭ್ರಷ್ಟಚಾರ ವಿರೋಧಿಸಿ ಬೆಂಗಳೂರು ವಕೀಲರ ಸಂಘಗಳ ಒಕ್ಕೂಟವು ಗುರುವಾರ ರಾಜಭವನಕ್ಕೆಮುತ್ತಿಗೆ ಹಾಕಿತು.

ಭ್ರಷ್ಟಾಚಾರನಿಯಂತ್ರಿಸುವ ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟಾಚಾರ ನಡೆದಿದ್ದು, ನ್ಯಾಯಮೂರ್ತಿವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ನಿನ್ ರಾವ್ ಅವರು ಲೋಕಾಯುಕ್ತ ಕಚೇರಿಯಲ್ಲಿ ಮತ್ತು ಲೋಕಾಯುಕ್ತನಿವಾಸದಲ್ಲಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಈ ಕುರಿತಂತೆ ವಕೀಲರ ಸಂಘ ಪ್ರತಿಭಟನೆನಡೆಸುತ್ತಿದ್ದರೂ ಭಾಸ್ಕರ್ ರಾವ್ ಮಾತ್ರ ಯಾವುದೇ ಪ್ರತಿಕ್ರಿಯನೀಡದೆ ಏನೂ ತಿಳಿಯದಂತಿದ್ದಾರೆ. ಹೀಗಾಗಿ ರಾಜ್ಯಪಾಲರು ಕೂಡಲೇ ಪ್ರಕರಣಸಂಬಂಧ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆವೇಳೆ ವಕೀಲರ ಸಂಘ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ನೀಡಬೇಕು ಆಗ್ರಹಿಸಿದ್ದು, ಲೋಕಾಯುಕ್ತಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com