ಸೈಲೆನ್ಸರ್ ಕಿತ್ತರೆ ತೆರಬೇಕು ದಂಡ

ತಮ್ಮ ವಾಹನದ ಸೈಲೆನ್ಸರ್ ಕಿತ್ಹಾಕಿಕೊಂಡು ಕರ್ಕಶ ಶಬ್ದ ಉಂಟುಮಾಡುತ್ತಾ, ಪರಿಸರ ಮಾಲಿನ್ಯ ಮಾಡುತ್ತಿದ್ದ 50 ಎನ್ ಫೀಲ್ಡ್ ಬುಲೆಟ್ ಸವಾರರು ಹಾಗೂ ನಿಯಮ ಉಲ್ಲಂಘಿಸಿದ್ದ ಇತರೆ 60 ವಾಹನಗಳ ವಿರುದ್ಧ ರಾಜ್ಯ ಪ್ರಾದೇಶಿಕ ಸಾರಿಗೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ...
ಕರ್ಕಶ ಶಬ್ದ ಮಾಡುವ  ಬುಲೆಟ್ ಗಳ ವಿರುದ್ಧ ಕ್ರಮ ಕೈಗೊಂಡಿರುವ ರಾಜ್ಯ ಪ್ರಾದೇಶಿಕ ಸಾರಿಗೆ ಸಿಬ್ಬಂದಿ
ಕರ್ಕಶ ಶಬ್ದ ಮಾಡುವ ಬುಲೆಟ್ ಗಳ ವಿರುದ್ಧ ಕ್ರಮ ಕೈಗೊಂಡಿರುವ ರಾಜ್ಯ ಪ್ರಾದೇಶಿಕ ಸಾರಿಗೆ ಸಿಬ್ಬಂದಿ
Updated on

ಬೆಂಗಳೂರು: ತಮ್ಮ ವಾಹನದ ಸೈಲೆನ್ಸರ್ ಕಿತ್ಹಾಕಿಕೊಂಡು ಕರ್ಕಶ ಶಬ್ದ ಉಂಟುಮಾಡುತ್ತಾ, ಪರಿಸರ ಮಾಲಿನ್ಯ ಮಾಡುತ್ತಿದ್ದ 50 ಎನ್ ಫೀಲ್ಡ್ ಬುಲೆಟ್ ಸವಾರರು ಹಾಗೂ ನಿಯಮ ಉಲ್ಲಂಘಿಸಿದ್ದ ಇತರೆ 60 ವಾಹನಗಳ ವಿರುದ್ಧ ರಾಜ್ಯ ಪ್ರಾದೇಶಿಕ ಸಾರಿಗೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

ಗುರುವಾರ ಮೈಸೂರು ಬ್ಯಾಂಕ್ ವೃತ್ತ, ಸಿಟಿ ಮಾರುಕಟ್ಟೆ, ಬಿಬಿಎಂಪಿ ಮುಖ್ಯ ಕಚೇರಿ ವೃತ್ತ ಸೇರಿದಂತೆ ನಗರದ ವಿವಿಧೆಡೆ ವಾಹನಗಳ ತಪಾಸಣೆ ನಡೆಸಿದ ಆರ್ ಟಿಓ ಸಿಬ್ಬಂದಿ ಆ ಎಲ್ಲಾ ವಾಹನಗಳನ್ನು ಜಪ್ತಿ ಮಾಡಿ ಪೀಣ್ಯದ ಬಿಎಂಟಿಸಿ ಡಿಪ್ಪೋಗೆ ಕಳುಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ಕರಿಯಪ್ಪ, ಪ್ರಮುಖವಾಗಿ 50 ಬುಲೆಟ್ ಬೈಕ್ ಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ಇತ್ತೀಚೆಗೆ ಸಾರಿಗೆ ಇಲಾಖೆ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸಿದಾಗ ಕರ್ಕಶ ಶಬ್ದ ಮಾಡುವ ನಾಲ್ಕೈದು ಬುಲೆಟ್ ಗಳು ಸಿಕ್ಕಿಬಿದ್ದಿದ್ದವು. ಸದ್ಯ 50 ಬುಲೆಟ್ ಗಳು ಸಿಕ್ಕಿಬಿದ್ದಿವೆ ಎಂದರು.

ಯಾವುದೇ ವಾಹನ 80ಕ್ಕಿಂತ ಹೆಚ್ಚು ಡೆಸಿಬಲ್ ನಷ್ಟು ಶಬ್ದ ಹೊರಸೂಸಿದರೆ ಅದರಿಂದ ಶಬ್ದಮಾಲಿನ್ಯವುಂಟಾಗಿ ಪರಿಸರ ಹಾಗೂ ಮಾನವನಿಗೆ ಹಾನಿಯಾಗುತ್ತದೆ. ಈಗ ವಶಪಡಿಸಿಕೊಂಡಿರುವ ಬುಲೆಟ್ ಗಳು 125 ಡೆಸಿಬಲ್ ಶಬ್ದ ಹೊರಸೂಸುತ್ತಿದ್ದುದು ತಿಳಿದುಬಂದಿದೆ. ಸಾಮಾನ್ಯವಾಗಿ 80-85 ಡೆಸಿಬಲ್ ಶಬ್ದ ಮಾತ್ರ ಕೇಳಲು ಸಾಧ್ಯ. ಹಾಗಾಗಿ ಈ ಎಲ್ಲಾ ಬೈಕ್ ಸವಾರರ ವಿರುದ್ಧ ದೂರು ದಾಖಲಿಸುವುದಲ್ಲದೆ, ಇಲಾಖೆಯಿಂದ ತಲಾ 5 ಸಾವಿರ ದಂಡ ವಿಧಿಸಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com