ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪತ್ರಕರ್ತನ ಬಂಧನ

ಮಧ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂಚಾರ ಠಾಣೆ ಎಸ್.ಐ ಮೇಲೆ ಹಲ್ಲೆ ನಡೆಸಿದ ಇಬ್ಬರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಮಾಡಿದ ಪತ್ರಕರ್ತರ ಬಂಧನ(ಸಾಂಕೇತಿಕ ಚಿತ್ರ)
ಹಲ್ಲೆ ಮಾಡಿದ ಪತ್ರಕರ್ತರ ಬಂಧನ(ಸಾಂಕೇತಿಕ ಚಿತ್ರ)

ಬೆಂಗಳೂರು: ಮಧ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂಚಾರ ಠಾಣೆ ಎಸ್.ಐ ಮೇಲೆ ಹಲ್ಲೆ ನಡೆಸಿದ ಮಹಿಳೆ ಸೇರಿ ಇಬ್ಬರು ಪತ್ರಕರ್ತರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಚೆನ್ನೈ ಮೂಲದ ಪ್ರಮುಖ ದಿನಪತ್ರಿಕೆಯ ಪತ್ರಕರ್ತ, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ನೆಲೆಸಿದ್ದ ಚಾಣಾಕ್ಷ ಶಂಕರ್ ಕಶ್ಯಪ್(22 ) ಹಾಗೂ ಬಿಹಾರದ ಸೃಷ್ಟಿ(21 ) ಬಂಧಿತರು. ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ಎಸ್.ಐ ಮಲ್ಲಿಕಾರ್ಜುನಯ್ಯ ಹಾಗೂ ಕಾನ್ಸ್ ಟೇಬಲ್ ಬಸವರಾಜ್ ಕಟ್ಟಿಮನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರ ವಿರುದ್ಧ ಐಪಿಸಿ ಕಲಂ 332 ಮತ್ತು 504 ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಲೇಡಿ ಕರ್ಜನ್ ರಸ್ತೆಯಲ್ಲಿ ಎಸ್.ಐ ಮಲ್ಲಿಕಾರ್ಜುನಯ್ಯ ಹಾಗೂ ಸಿಬ್ಬಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ತಪಾಸಣೆ ನಡೆಸುತ್ತಿದ್ದರು. ರಾತ್ರಿ 1 :30 ಸುಮಾರಿಗೆ ಹುಂಡೈ ವರನಾ ಕಾರು ಬಂದಿದೆ ಈ ವೇಳೆ ವಾಹನ ತಡೆದ ಪೊಲೀಸರು ಚಾಲಕ ಮದ್ಯಪಾನ ಮಾಡಿರುವ ಬಗ್ಗೆ ತಿಳಿಯಲು ಅಲ್ಕೋಮೀಟರ್ ನಲ್ಲಿ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಆಗ ಚಾಲಕ ಚಾಣಾಕ್ಷ ತಾನು ಸ್ವಲ್ಪ ಮಾತ್ರ ಕುಡಿದಿದ್ದು ಮದ್ಯಪಾನ ನಡೆಸುವ ಅಗತ್ಯವಿಲ್ಲ ಎಂದಿದ್ದಾನೆ. ಆದರೂ ಕಾನೂನು ಪ್ರಕಾರ ಪರಿಶೀಲನೆ ಕಡ್ಡಾಯ. ನಿಗದಿಗಿಂತ ಮದ್ಯದ ಪ್ರಮಾಣ ಕಡಿಮೆ ಇದ್ದಾರೆ ನೀವು ಹೊರಡಬಹುದು ಎಂದ ಎಸ್.ಐ ಆಲ್ಕೋಮೀಟರ್ ಯಂತ್ರವನ್ನು ಬಾಯಿ ಬಳಿ ತೆಗೆದುಕೊಂಡು ಹೋಗಿದ್ದಾರೆ.  ಕುಪಿತಗೊಂಡ ಚಾಣಾಕ್ಷ, ಎಸ್.ಐ ಮುಖಕ್ಕೆ ಮುಷ್ಠಿಯಿಂದ ಬಲವಾಗಿ ಗುದ್ದಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಎಸ್.ಐ ಮಲ್ಲಿಕಾರ್ಜುನಯ್ಯ ಅವರ ಮೂಳೆ ಮುರಿದಿದೆ. ಈ ವೇಳೆ ನೆರವಿಗೆ ಬಂದ ಕಾನ್ಸ್ ಟೇಬಲ್ ಬಸವರಾಜ್ ಮೇಲೂ ಇಬ್ಬರು ಸೇರಿ ಮದ್ಯದ ಅಮಲಿನಲ್ಲಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com