ನಗರಗಳಲ್ಲೂ ಕೆಡಿಪಿ ಸಭೆ ಪರಿಶೀಲನೆ

ರಾಜ್ಯದ ನಗರ ಪ್ರದೇಶಗಳಲ್ಲಿ ಕೆಪಿಡಿ ಸಭೆಗಳನ್ನು ನಡೆಸುವ ಸಂಬಂಧ ಸರ್ಕಾರ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಟಿ-ಬಿಟಿ ಸಚಿವ ಎಸ್.ಆರ್ ಪಾಟೀಲ್ ತಿಳಿಸಿದ್ದಾರೆ.
ಸಚಿವ ಎಸ್.ಆರ್ ಪಾಟೀಲ್
ಸಚಿವ ಎಸ್.ಆರ್ ಪಾಟೀಲ್

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಕೆಪಿಡಿ ಸಭೆಗಳನ್ನು ನಡೆಸುವ ಸಂಬಂಧ ಸರ್ಕಾರ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಟಿ-ಬಿಟಿ ಸಚಿವ ಎಸ್.ಆರ್ ಪಾಟೀಲ್ ತಿಳಿಸಿದ್ದಾರೆ.

ಜೆ.ಆರ್ ಲೋಬೋ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಂಗಳೂರು ನಗರಕ್ಕೆ ಕೆಡಿಪಿ ಸಮಿತಿ ರಚಿಸಲಾಗಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ನಗರದಲ್ಲಿ ಕೆಡಿಪಿ ರಚಿಸುವ ವೇಳೆ ಪರಿಗಣಿಸಲಾಗುತ್ತದೆ ಎಂದರು.

ಸರ್ಕಾರಕ್ಕೆ ಚಾಟಿ: ವಿಧಾನಸಭೆಯಲ್ಲಿ ಲಿಖಿತ ಪ್ರಶ್ನೆಗಳಿಗೆ ಸರ್ಕಾರ ಉತ್ತರವನ್ನೇ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರೂ ಸೇರಿದಂತೆ ಬಹುತೇಕ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಏನು ಮಾಡೋದು ಎಂದು ಮಾಲಿಕಯ್ಯ ಗುತ್ತೇದಾರ್, ಬಾಲಕೃಷ್ಣ  ಶಿವಲಿಂಗೇ ಗೌಡ ಪ್ರಶ್ನಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸದಸ್ಯರ ಅಸಮಾಧಾನದ ಬಗ್ಗೆ ನನ್ನ ಸಮ್ಮತಿ ಇದೆ. ಸರ್ಕಾರ ಬದ್ಧತೆ ಮೆರೆಯಬೇಕು ಎಂದು ಲೋಕೋಪಯೋಗಿ ಸಚಿವ ಮಹದೇವಪ್ಪ ಅವರಿಗೆ ಲಿಖಿತ ಪ್ರಶ್ನೆಗಳಿಗೆ ಉತ್ತರ ಕಲ್ಪಿಸಲು ಸ್ಪೀಕರ್ ಸೂಚ್ಲ್ಹಿಸಿದರು. ಪ್ರತಿದಿನ ಸಂಜೆ 6  ರಿಂದ 7 ವರೆಗೆ ಸಚಿವರು ಶಾಸಕರ ಪ್ರಶ್ನೆಗಳಿಗೆ ಅವರ ಕಚೇರಿಯಲ್ಲಿ ಸ್ಪಷ್ಟನೆ ನೀಡಬೇಕೆಂದು ಕೋಳಿವಾಡ ಸಲಹೆ ನೀಡಿದರು. ಇದನ್ನು ಪರಿಶೀಲಿಸುವುದಾಗಿ ಹೇಳಿದ ಸ್ಪೀಕರ್, ಲಿಖಿತ ಪ್ರಶ್ನೆ ಕೇಳಿದ ಸದಸ್ಯರಿಗೆ ವಯಕ್ತಿಕವಾಗಿ ಉತ್ತರ ತಲುಪಿಸುವಂತೆ ಕಾರ್ಯದರ್ಶಿ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com