
ಬೆಂಗಳೂರು: ಮಂಗಳಮುಖಿಯರು ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಕರ್ನಾಟಕ ಮಂಗಳಮುಖಿಯರ ವೇದಿಕೆ ರಚನೆಯಾಗಿದೆ.
ಮಂಗಳಮುಖಿಯರು ಅನುಭವಿಸುತ್ತಿರುವ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಅವರಿಗೆ ಪರಿಹಾರ ಕಂಡುಕೊಳ್ಳಲು ಇಬ್ಬರನ್ನು ನಾಯಕಿಯರನ್ನಾಗಿ ನೇಮಿಸಿದ್ದು, ನಾಳೆ ಹಲಸೂರು ಕೆರೆ ಸಮೀಪದಲ್ಲಿರುವ ಸಮುದಾಯಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಮುಖಂಡೆ ಸೌಮ್ಯಶ್ರೀ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವೇದಿಕೆಯ ಇಬ್ಬರು ಅಧ್ಯಕ್ಷರಾದ ಗೀತಮ್ಮ ಮತ್ತು ಕನಕಮ್ಮ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೇ, ಮಂಗಳಮುಖಿಯರ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement