ಹವಾಲಾ ವಹಿವಾಟು: ನಾಲ್ವರ ಬಂಧನ

ಹವಾಲಾ ಹಣ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ರು.17.60 ಲಕ್ಷ ನಗದು ಹಾಗೂ 3 ಕೆಜಿ 160 ಗ್ರಾಂ ಬೆಳ್ಳಿಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ...
ಹವಾಲಾ ವಹಿವಾಟು: ನಾಲ್ವರ ಬಂಧನ (ಸಾಂದರ್ಭಿಕ ಚಿತ್ರ)
ಹವಾಲಾ ವಹಿವಾಟು: ನಾಲ್ವರ ಬಂಧನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಹವಾಲಾ ಹಣ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ರು.17.60 ಲಕ್ಷ ನಗದು ಹಾಗೂ 3 ಕೆಜಿ 160 ಗ್ರಾಂ ಬೆಳ್ಳಿಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಪೇಟೆ ಜಿಕೆ ಟೆಂಪಲ್ ಸ್ಟ್ರೀಟ್ ರಸ್ತೆಯ ಮಾಂಗಿಲಾಲ್ ಜೈನ್ (53), ರಮೇಶ್ ಕುಮಾರ್ (49), ಯಲಹಂಕ ನಂಜುಂಡಪ್ಪ ಬಡಾವಣೆಯ ರಾಣಾ ರಾಮ್ ಹಾಗೂ ಮಾಮೂಲ್ ಪೇಟೆ ಎಂಆರ್ ಲೈನ್‍ನ ಬಾಬುಲಾಲ್ ಸುತಾರ್ (38) ಬಂಧಿತರು. ಆರೋಪಿಗಳು ಹಳೇ ತರಗುಪೇಟೆ ಕ್ರಾಸ್ ರಸ್ತೆಯಲ್ಲಿ ಎಂ.ಎಂ. ಗಾರ್ಮೆಂಟ್ಸ್ ಮತ್ತು ರೆಡಿಮೇಡ್ ಅಂಗಡಿಯಲ್ಲಿ ಹವಾಲಾ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಹಣ ಹಾಗೂ ಬೆಳ್ಳಿ ಗಟ್ಟಿ ಜತೆಗೆ 4 ಮೊಬೈಲ್ ಫೋನ್, 28 ಬ್ಯಾಂಕ್ ಪಾಸ್ ಪುಸ್ತಕಗಳು, ಹವಾಲಾ ಹಣ ಸಾಗಣೆ ಬಗ್ಗೆ ಬರೆದಿಟ್ಟಿದ್ದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರ್ಕಾರದಿಂದ ಅ„ಕೃತ ಪರವಾನಗಿ ಪಡೆಯದೆ ಸಂಘಟಿತ ರೀತಿಯಲ್ಲಿ ಲಕ್ಷಾಂತರ ಹಣವನ್ನು ನಗರದ ವಿವಿಧ ವ್ಯಾಪಾರಿಗಳಿಂದ ಸಂಗ್ರಹಿಸಿ ಹವಾಲಾ ಮೂಲಕ ಹೊರ ರಾಜ್ಯಗಳ ವ್ಯಾಪಾರಿಗಳಿಗೆ ಕಳುಹಿಸುತ್ತಿದ್ದರು. ಇವರ ಬಳಿಗೆ ಹಲವು ವ್ಯಾಪಾರಸ್ಥರು ಹಣ ನೀಡುತ್ತಿದ್ದರು. ಮುಂಬೈ, ರಾಜಸ್ಥಾನ, ಕೊಲ್ಕತಾ ಸೇರಿದಂತೆ ಹೊರ ರಾಜ್ಯಗಳಲ್ಲಿರುವ ವ್ಯಾಪಾರಿಗಳಿಗೆ ಅಕ್ರಮವಾಗಿ ಹಣ ಸಾಗಣೆಯಾಗುತ್ತಿತ್ತು. ಆರೋಪಿಗಳು ಪ್ರತಿ ರು.1 ಲಕ್ಷ ಹವಾಲಾ ಹಣ ಸಾಗಾಣೆಗೆ ರು.200 ರಿಂದ ರು.300 ಕಮೀಷನ್ ಪಡೆದುಕೊಳ್ಳುತ್ತಿದ್ದರು. ಕೆಲ ವ್ಯಾಪಾರಿಗಳು
ಬೆಳ್ಳಿಗಟ್ಟಿಗಳನ್ನು ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಎಂ.ಆರ್. ಹೊಸೈರಿ ರೆಡಿಮೇಡ್ ಅಂಗಡಿ ಮಾಲೀಕ ರಮೇಶ್ ಕುಮಾರ್ ಎಂಬಾತ ಹವಾಲಾ ದಂಧೆಯ ಪ್ರಮುಖ ಆರೋಪಿಯÁಗಿದ್ದು ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com