
ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಬಾವಿ ವ್ಯಕ್ತಿಗಳ ಪಟ್ಟಿಯನ್ನು ಲೋಕಸತ್ತಾ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.
ಪ್ರೆಸ್ ಕ್ಲಬ್ ನಲ್ಲಿ ಭೂ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಲೋಕಸತ್ತಾ ಪಕ್ಷದ ರಾಜ್ಯಧ್ಯಕ್ಷ ಮುಕುಂದ, ಬೆಂಗಲೂರಿನಲ್ಲಿ ಒಟ್ಟು 927 ಎಕರೆ 2 ಗುಂಟೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಪ್ರಭಾವಿ ವ್ಯಕ್ತಿಗಳಿಂದ ಈ ಒತ್ತುವರಿಯಾಗಿದ್ದು, ಈ ಮಾಹಿತಿ ಸರ್ಕಾರದಲ್ಲಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ರಾಜರಾಜೇಶ್ವರಿ ನಗರದಲ್ಲಿರುವ ಶಕ್ತಿ ರೆಸಾರ್ಟ್ ಕ್ಲಬ್- 2 ಎಕರೆ, ಜರಗನಹಳ್ಳಿ ನಗರಸಭೆ ಸದಸ್ಯ ರಾಮಣ್ಣ-37 ಗುಂಟೆ, ಕಾಂಗ್ರೆಸ್ ಮುಖಂಡ ಶಾಂತರಾಜು ಅವರು ಉತ್ತರಬಳ್ಳಿ ಸಮೀಪದಲ್ಲಿ 1 ಎಕರೆ 10 ಗುಂಟೆ, ಕಟ್ಟಾ ಸುಬ್ರಮಣ್ಯ ಮಗ ಜಗದೀಶ್ ನಾಯ್ಡು -4 ಎಕರೆ, ಕೆಂಗೇರಿ ಕಂಬೀಪುರದ ಬಳಿ ಇರುವ ಆದಿಚುಂಚನಗಿರಿ ಸಂಸ್ಥೆಯಿಂದ 5 ಎಕರೆ 20 ಗುಂಟೆ, ಕೊಡಿಗೇಹಳ್ಳಿ ಸಮೀಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಾಮನ ಚಾರ್ಯ ಅವರಿಂದ 5 ಎಕರೆ... ಸೇರಿದಂತೆ ಅನೇಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆಗೊಳಿಸಿದೆ.
ಸರ್ಕಾರ ಕೂಡಲೇ ಈ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಕುಂದ ಅವರು ಆಗ್ರಹಿಸಿದ್ದಾರೆ.
Advertisement