
ಬೆಂಗಳೂರು: ಗ್ರಾಹಕರಿಗೆ ತಾಂತ್ರಿಕವಾಗಿ ಸವಾಲಿನಿಂದ ಕೂಡಿರುವಂತಹ ಉತ್ಪನ್ನ ಪರಿಹಾರಗಳು ಹಾಗೂ ಸೇವೆಗಳನ್ನು ಫ್ರ್ಯೂಡೆನ್ ಬರ್ಗ್ ಸಮೂಹ ಸಂಸ್ಥೆ ಒದಗಿಸುತ್ತಿದ್ದು, 2014ರಲ್ಲಿ ಈ ತಂತ್ರಜ್ಞಾನ ಸಮೂಹ ಭಾರತದಲ್ಲಿ ಒಟ್ಟಾರೆ ರು. 1,497 ಕೋಟಿಗಳ ಮಾರಾಟವನ್ನು ದಾಖಲಿಸಿದೆ ಎಂದು ಸಂಸ್ಥೆ ಹೇಳಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ಪ್ರತಿನಿಧಿ ಡಾ. ಜೊರ್ಗ್ ಮಥಿಯಾಸ್ ಗ್ರಾಸ್ ಮನ್, ಫ್ರ್ಯೂಡೆನ್ ಬರ್ಗ್ ಸಮೂಹಕ್ಕೆ ಭಾರತ ಮಹತ್ವವಾದ ಮಾರುಕಟ್ಟೆಯಾಗಿದೆ ಹಾಗೂ ಫ್ರ್ಯೂಡೆನ್ ಬರ್ಗ್ ಸಮೂಹದ ಹೊಸ ಶೋಧನೆಯ ಬಲಕ್ಕೆ ಭಾರತ ಮಹತ್ವಪೂರ್ಣ ಕೊಡುಗೆಯನ್ನು ಒದಗಿಸುತ್ತದೆ ಎಂದರು.
ಈ ಸಂಸ್ಥೆ ಕರ್ನಾಟಕದಲ್ಲಿ ದೀರ್ಘಾವಧಿ ವ್ಯವಸ್ಥಿತ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ. 2014ರಲ್ಲಿ ಸಮೂಹ ಭಾರತದಲ್ಲಿ ರು. 97.6 ಕೋಟಿಗಳಷ್ಟು ಸ್ಥಳೀಯ ಹೂಡಿಕೆಗಳನ್ನು ಮಾಡಿದೆ ಎಂದರು.
Advertisement