
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಜವಳಿ ನೀತಿ ಅತ್ಯುತ್ತಮ ಪರಿಣಾಮ ಬೀರಿದ್ದು, ಇದುವರೆಗೆ ಸುಮಾರು ರು.1,300 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 50,000 ಉದ್ಯೋಗ ಸೃಷ್ಟಿಯಾಗಿದೆ. ಜತೆಗೆ 26,000 ಜನರಿಗೆ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿಯನ್ನೂ ನೀಡಲಾಗಿದ್ದು, ಅವರಲ್ಲಿ ಬಹುತೇಕ ಮಂದಿಗೆ ಉದ್ಯೋಗವೂ ಸಿಕ್ಕಿದೆ ಎಂದು ಸಚಿವ ಚಿಂಚನಸೂರು ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಳಿ ನೀತಿ ಜಾರಿಗೊಳಿಸಿದ ಎರಡೇ ವರ್ಷಗಳಲ್ಲಿ ಇಷ್ಟೊಂದು ಸಾಧನೆಯಾಗಿದ್ದು, ಐದು ವರ್ಷಗಳ ಒಳಗೆ ರು.10 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವಂತೆ ಮಾಡಿ, ಸುಮಾರು 5ಲಕ್ಷ ಮಂದಿಗೆ ಉದ್ಯೋಗಸಿಗುವಂತೆ ಮಾಡಲಾಗುತ್ತದೆ. ವಿಶ್ವ ಹೂಡಿಕೆದಾರರ ಸಮಾವೇಶದ ಪರಿಣಾಮವಾಗಿ ಶಾಹಿ ಎಕ್ಸ್ ಪೋರ್ಟ್, ಇಟ್ಟೋ ಡೆನಿಮ್, ಪ್ರಿಕಾಟ್ ಮೆರಿಡಿಯನ್, ಕವಾಶಿಮ ಮತ್ತು ಸ್ಕಾಟ್ ಗಾರ್ಮೆಂಟ್ಸ್ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿವೆ.
ಪ್ರಸಕ್ತ ಸಾಲಿನಲ್ಲಿ ಚಾಮರಾಜನಗರ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ 500 ಎಕರೆ ಪ್ರದೇಶದಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.3 ವರ್ಷಗಳಲ್ಲಿ 15 ಘಟಕಗಳ ಸ್ಥಾಪನೆಗೆ ಉತ್ತೇಜನೆ ನೀಡಲಾಗುತ್ತಿದ್ದು ವರ್ಷಕ್ಕೆ 5,000 ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ಚಿಂಚನಸೂರು ತಿಳಿಸಿದರು.
Advertisement