ನಗರದಲ್ಲಿ ತ್ಯಾಜ್ಯ ಸಮಸ್ಯೆ: ವಿಚಾರಣೆಗೆ ಆಡಳಿತಾಧಿಕಾರಿಗಳೇ ಗೈರು

ನಗರದಲ್ಲಿ ಉದ್ಭವಿಸಿದ್ದ ತ್ಯಾಜ್ಯ ಸಮಸ್ಯೆ ಬಗೆಹರಿಸುವಂತೆ ಕೋರಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಿಬಿಎಂಪಿ ಆಡಳಿತಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಹೈ ಕೋರ್ಟ್ ಕಿಡಿಕಾರಿದೆ...
ಹೈ ಕೋರ್ಟ್
ಹೈ ಕೋರ್ಟ್

ಬೆಂಗಳೂರು: ನಗರದಲ್ಲಿ ಉದ್ಭವಿಸಿದ್ದ ತ್ಯಾಜ್ಯ ಸಮಸ್ಯೆ ಬಗೆಹರಿಸುವಂತೆ ಕೋರಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಿಬಿಎಂಪಿ ಆಡಳಿತಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಹೈ ಕೋರ್ಟ್ ಕಿಡಿಕಾರಿದೆ.

ಈ ಹಿಂದೆ ವಿಚಾರಣೆ ವೇಳೆ ಹಾಜರಾಗಿದ್ದ ಆಡಳಿತಾಧಿಕಾರಿ, ತಾವು ಹೊಸದಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದು, ಸಮಸ್ಯೆ ಕುರಿತು ಮತ್ತು ಕೋರ್ಟ್ ಹೊರಡಿಸಿದ ಆದೇಶ ಅಧ್ಯಯನ ಮಾಡಬೇಕಿದೆ. ಹೀಗಾಗಿ ಕೊಂಚ ಕಾಲವಕಾಶ ನೀಡುವಂತೆ ವಿನಂತಿಸಿದ್ದರು. ಆದರೆ, ಶುಕ್ರವಾರ ವಿಚಾರಣೆ ನಡೆಯಲಿದೆ ಎಂದು ತಿಳಿದಿದ್ದರೂ ಸಹ ಅವರು ಕೋರ್ಟ್ ಗೆ ಹಾಜರಾಗಿಲ್ಲ. ಅಂದರೆ ಅಧಿಕಾರಿಗೆ ಸಮಸ್ಯೆಯ ಗಂಭೀರತೆ ತಿಳಿದಿಲ್ಲ ಎನಿಸುತ್ತದೆ.

ಸಂಬಂಧಪಟ್ಟವರು ಹಾಜರಾಗದಿದ್ದರೆ ವಿಚಾರಣೆ ನಡೆಸುವುದಾದರು ಹೇಗೆ?  ಅಧಿಕಾರಿಗಳು ಕೋರ್ಟ್ ಗೆ ಗೌರವ ನೀಡಿದರೆ ಕೋರ್ಟ್ ಸಹ ಅವರಿಗೆ ಗೌರವ ನೀಡುತ್ತದೆ. ಆದರೆ ಇತ್ತೀಚಿಗೆ ನ್ಯಾಯಾಲಯ ಅವರಿಗೆ ಹೆಚ್ಚು ಗೌರವ ನೀಡುತ್ತಿದೆ ಎಂದೆನಿಸುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ಅಧಿಕಾರಿ ಹಾಜರಾಗಿಲ್ಲ ಎಂದು ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಶ್ರೀನಿವಾಸೇಗೌಡ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಇಚ್ಛಾಶಕ್ತಿ ಆಡಳಿತಾಧಿಕಾರಿಗೆ ಇಲ್ಲದ ಮೇಲೆ ಅವರು ಇನ್ಯಾವ ರೀತಿ ಆಡಳಿತ ನಡೆಸುತ್ತಾರೆ? ಆದೇಶ ಪಾಲಿಸಲು ಇರುವ ಕಷ್ಟವಾದರೂ ಏನು? ಎಂಬುದನ್ನಾದರು ತಿಳಿಸಲಿ ಎಂದು ಸೂಚಿಸಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com