ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿ

ಆನೇಕಲ್ ತಾಲೂಕಿನ 19 ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಜಿಲ್ಲಾಡಳಿತ, ರು.800 ಕೋಟಿ ಮೌಲ್ಯದ ಜಾಗ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದೆ...
ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿ (ಸಾಂದರ್ಭಿಕ ಚಿತ್ರ)
ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಆನೇಕಲ್ ತಾಲೂಕಿನ 19 ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಜಿಲ್ಲಾಡಳಿತ, ರು.800 ಕೋಟಿ ಮೌಲ್ಯದ ಜಾಗ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾಧಿಕಾರಿ ವಿ. ಶಂಕರ್ ಅವರ ಆದೇಶದಂತೆ 9 ಅಧಿಕಾರಿಗಳ ತಂಡ ರಚಿಸಿದ್ದು, ಜಿಗಣಿ ಹೋಬಳಿಯ ತಮ್ಮನಾಯಕನಹಳ್ಳಿ, ಕನ್ನನಾಯಕನ ಅಗ್ರಹಾರ, ರಾಗಿಹಳ್ಳಿ, ಶಿವನಹಳ್ಳಿ, ಗಿಡ್ಡೇನಹಳ್ಳಿ, ಮಹಾಂತಲಿಂಗಪುರ, ಹುಲ್ಲಹಳ್ಳಿ, ಎಸ್. ಬಿಂಗೀಪುರ ಗ್ರಾಮಗಳ ವ್ಯಾಪ್ತಿಯಲ್ಲಿ 19 ಕಡೆ ದಾಳಿ ನಡೆಸಲಾಗಿದೆ. ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗದಲ್ಲಿ ಕೆಲವು ಉದ್ಯಮಿಗಳು ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಉಪಕರಣ, ಜೆಸಿಬಿ ವಾಹನ ಸೇರಿದಂತೆ ಭೂಮಿ ವಶಪಡಿಸಿಕೊಳ್ಳಲಾಗಿದೆ.

ಜಲ್ಲಿ ಪುಡಿಮಾಡುವ ಬೃಹತ್ ಯಂತ್ರಗಳನ್ನು ಬಳಸಿಕೊಂಡು ಇಲ್ಲಿನ ಗ್ರಾಮಗಳಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಗಣಿಗಾರಿಕೆ ಚಟುವಟಿಕೆ ನಿಲ್ಲಿಸುವಂತೆ ಜಿಲ್ಲಾಡಳಿತದಿಂದ ಈ ಹಿಂದೆಯೇ ಹಲವು ಬಾರಿ ಸೂಚನೆ ನೀಡಲಾಗಿತ್ತು. ಮುನ್ನೆಚ್ಚರಿಕೆಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರೂ ಜನರೇಟರ್ ಸಹಾಯದಿಂದ ರಾತ್ರಿ ವೇಳೆಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾ„ಕಾರಿ ಆರ್. ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಅಧಿಕಾರಿಗಳ 9 ತಂಡ ಏಕ ಕಾಲದಲ್ಲಿ ಹಠಾತ್ ದಾಳಿ ನಡೆಸಿದ್ದು, ಕೂಲಿ ಕಾರ್ಮಿಕರನ್ನು ಹೊರತುಪಡಿಸಿ ಮಾಲೀಕರು ಹಾಗೂ ಉದ್ಯಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಮ್ಮನಾಯಕನಹಳ್ಳಿಯ ಸ.ನಂ. 19 ಸರ್ಕಾರಿ ಭೂಮಿಯಾಗಿದ್ದು, 826 ಎಕರೆ ವಿಸ್ತೀರ್ಣ ಹೊಂದಿದೆ.

ಇಲ್ಲಿ ಅಣ್ಣಯ್ಯಎಂಬುವರಿಗೆ ಕೃಷಿಗಾಗಿ 4 ಎಕರೆ ಭೂಮಿ ಮಂಜೂರಾಗಿತ್ತು. ಆದರೆ ಜಾಗವನ್ನು `ಶ್ರೀಚಕ್ರ ಎಂಜಿನಿಯರಿಂಗ್ ವಕ್ರ್ಸ್' ಖರೀದಿಸಿ ಜಲ್ಲಿ ಕ್ರಷರ್ ಆರಂಭಿಸಿತ್ತು. ಈ ಜಾಗಕ್ಕೆ ಹೊಂದಿಕೊಂಡಂತಿರುವ ಭೂಮಿಯಲ್ಲಿ ಕಲ್ಲು ತೆಗೆದು ಜಲ್ಲಿ ತಯಾರಿಸಿ ಲಾರಿಗಳಿಂದ ಸಾಗಿಸಲಾಗುತ್ತಿತ್ತು. ದಾಳಿ ನಡೆಸಿದ ಅಧಿಕಾರಿಗಳ ತಂಡ ಲಾರಿ, ಉಪಕರಣಗಳನ್ನು ವಶಕ್ಕೆ ಪಡೆದಿದೆ. ಕೃತ್ತಿಕಾ ಸ್ಟೋನ್ ಕ್ರಷರ್, ಎಸ್‍ಸಿಬಿ ಸ್ಟೋನ್ ಕ್ರಷರ್, ಎಸ್‍ವಿಬಿ ಕ್ರಷರ್ ಸಂಸ್ಥೆಗಳು ಇಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕನ್ನನಾಯಕನ ಅಗ್ರಹಾರದಲ್ಲಿ ಲಕ್ಷ್ಮಿಸ್ಟೋನ್ ಕ್ರಷರ್, ಮಂಜುನಾಥ ಕ್ರಷರ್ ಹಾಗೂ ವೆಂಕಟೇಶ ಕ್ರಷರ್, ಮುತ್ತರಾಯ ಸ್ಟೋನ್ ಕ್ರಷರ್, ಆರ್‍ಎನ್‍ಎಸ್ ಸ್ಟೋನ್ ಕ್ರಷರ್, ಬಿಂಗೀಪುರದಲ್ಲಿ ಸೇಂಟ್‍ಮೇರಿ ಸ್ಟೋನ್ ಕ್ರಷರ್, ಸಹನಾ ಸ್ಟೋನ್ ಕ್ರಷರ್ ಸಂಸ್ಥೆಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಶಕ್ಕೆ ಪಡೆಯಲಾಗಿದೆ. ಶಿವನಹಳ್ಳಿಯಲ್ಲಿ 8 ಕ್ರಷರ್ ಸಂಸ್ಥೆಗಳು ನಡೆಸುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. 20ಸಾವಿರ ಮೆ.ಟನ್ ಜಲ್ಲಿ, ರು.100 ಕೋಟಿ ಮೌಲ್ಯದ ಯಂತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com