ಕಾಮಕೇಳಿ ಚಿತ್ರಿಸಿ ನೆಟ್‍ಗೆ ಹರಿಬಿಟ್ಟ ಪೊಲೀಸ್ ವಿರುದ್ಧ ದೂರು

ಮಹಿಳೆ ಜತೆ ನಡೆಸಿದ ಕಾಮಕೇಳಿಯನ್ನು ಸ್ವತಃ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದ ಪೊಲೀಸ್ ಮುಖ್ಯ ಪೇದೆ ವಿರುದ್ಧ ಕನಕಪುರ...
ಕಾಮಕೇಳಿ(ಸಾಂದರ್ಭಿಕ ಚಿತ್ರ)
ಕಾಮಕೇಳಿ(ಸಾಂದರ್ಭಿಕ ಚಿತ್ರ)

ರಾಮನಗರ: ಮಹಿಳೆ ಜತೆ ನಡೆಸಿದ ಕಾಮಕೇಳಿಯನ್ನು ಸ್ವತಃ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದ ಪೊಲೀಸ್ ಮುಖ್ಯ ಪೇದೆ ವಿರುದ್ಧ ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾರೋಹಳ್ಳಿ ಠಾಣೆಯ ಮುಖ್ಯ ಪೇದೆ ಮನೋಹರ ಪ್ರಕರಣದ ಆರೋಪಿ. ಈತನ ವಿರುದ್ಧ ಐಪಿಸಿ ಸೆಕ್ಷನ್ 292, ಸೈಬರ್ ಕ್ರೈಂ ಸೆಕ್ಷನ್ 65ಇ ಅಡಿ ಹಾರೋಹಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಹೇಮಂತಕುಮಾರ್ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಮನೋಹರ ಮಹಿಳೆಯೊಂದಿಗೆ ಕಾಮ ಕೇಳಿ ನಡೆಸಿ, ಅದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಆ ದೃಶ್ಯಾವಳಿಯನ್ನು ಸ್ವತಃ ತಾನೇ ಸ್ನೇಹಿತರ ವ್ಯಾಟ್ಸಪ್, ಯುಟ್ಯೂಬ್‍ಗೆ ಹರಿಯ ಬಿಟ್ಟಿದ್ದರು. ಇದು ಒಬ್ಬರಿಂದ ಒಬ್ಬರಿಗೆ ಹರಡಿ, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಮಾಹಿತಿ ದೊರೆಯುತ್ತಿದ್ದಂತೆಯೇ ಸಬ್ ಇನ್ಸ್‌ಪೆಕ್ಟರ್ ಹೇಮಂತಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರೊಂದಿಗೆ ಚರ್ಚಿಸಿ, ಅವರ ಸೂಚನೆಯಂತೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ.

ಅಮಾನತು ಶಿಕ್ಷೆ: ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಮುಖ್ಯ ಪೇದೆ ಮನೋಹರ ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಸೇವೆಯಿಂದ ಅಮಾನತುಪಡಿಸಿ ಬುಧವಾರ ರಾತ್ರಿಯೇ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ
ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸ್ಥಳೀಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನ ವಿರುದ್ಧ ಸೈಬರ್ ಕ್ರೈಂನಡಿಯೂ ಪ್ರಕರಣ ದಾಖಲಾಗಿದ್ದು, ದೃಶ್ಯಾವಳಿ ಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com